More

    ಚಿಕನ್ ಅಂಗಡಿ ಮಾಲೀಕರಿಗೆ ನೋಟಿಸ್

    ಬಂಕಾಪುರ: ಲಾಕ್​ಡೌನ್ ಇದ್ದರೂ ಭಾನುವಾರ ಚಿಕನ್ ಅಂಗಡಿ ತೆರೆದು ವ್ಯಾಪಾರ ವಹಿವಾಟು ನಡೆಸಿದ್ದಲ್ಲದೆ, ನಿರುಪಯುಕ್ತ ಮಾಂಸದ ತುಣುಕುಗಳನ್ನು ಎಲ್ಲೆಂದರಲ್ಲಿ ಬಿಸಾಕಿದ ಅಂಗಡಿ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ.

    ಪಟ್ಟಣದ ಆಸಾರ ವೃತ್ತದ ರೇಣುಕಾ ಮಟನ್ ಅಂಗಡಿ ಮತ್ತು ಕಲಾಲ ಚಿಕನ್ ಸೆಂಟರ್ ಮಾಲೀಕ ಪರಶುರಾಮ ಕಲಾಲ ಮತ್ತು ಮಾರುತಿ ಕಲಾಲ ಭಾನುವಾರ ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆಗೂ ಅಂಗಡಿ ತೆರದು ವ್ಯಾಪಾರ ಮಾಡಿದ್ದಾರೆ. ದಿನವಿಡಿ ಸಂಗ್ರಹವಾದ ನಿರುಪಯುಕ್ತ ಮಾಂಸದ ತುಂಡುಗಳನ್ನು ಅಂಗಡಿ ಪಕ್ಕದಲ್ಲಿ ಸುರಿದಿದ್ದಾರೆ. ಇದನ್ನು ಗಮನಿಸಿದ ಅಕ್ಕ ಪಕ್ಕದವರು ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಚೆಲ್ಲಿದ ತ್ಯಾಜ್ಯವನ್ನು ಮರಳಿ ಚೀಲದಲ್ಲಿ ತುಂಬಿಸಿ ಪುರಸಭೆಗೆ ಮಾಹಿತಿ ನೀಡಿದ್ದರು.

    ಸೋಮವಾರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಚಿಕನ್ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಮತ್ತು ಮಾಂಸದ ತ್ಯಾಜ್ಯ ಚೆಲ್ಲುತ್ತಿರುವುದರಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಸ್ವಚ್ಛತೆ ಕಾಪಾಡಿಕೊಳ್ಳದ, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದ ಮಾಂಸದ ಅಂಗಡಿ ಮಾಲೀಕರ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಎಚ್ಚರಿಸಿದ್ದಾರೆ.

    ನೈರ್ಮಲ್ಯಾಧಿಕಾರಿ ರೂಪಾ ನಾಯ್ಕ, ಜಗದೀಶ ದೊಡಗೌಡ್ರ, ನೀಲಪ್ಪ ಸಣ್ಣಗೌಡ್ರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts