More

    ಮಹಾಮಾರಿ ಕೋವಿಡ್ ಸರಪಳಿ ತುಂಡರಿಸಲು ಸೂಚನೆ

    ಗದಗ: ಜಿಲ್ಲೆಯಲ್ಲಿ ವಿಧಿಸಲಾಗಿರುವ ಸಂಪೂರ್ಣ ಲಾಕ್​ಡೌನ್ ಅನ್ನು ಸರಿಯಾಗಿ ಅನುಷ್ಠಾನಗೊಳಿಸಿ ಸೋಂಕಿನ ಸರಪಳಿ ತುಂಡರಿಸಿ ಜೀವ ಹಾನಿ ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಕೋವಿಡ್ ಅಂಕಿ-ಅಂಶಗಳ ಸ್ಥಿತಿಗತಿ ಸೋಂಕಿನ ಶೇಕಡಾವಾರು ಪ್ರಮಾಣ ಹಾಗೂ ಸೋಂಕು ನಿಯಂತ್ರಣಕ್ಕೆ ವಿಧಿಸಲಾದ ಕಠಿಣ ಮಾರ್ಗಸೂಚಿಗಳ ಪಾಲನೆ ಕುರಿತಂತೆ ಮಾಹಿತಿ ಪಡೆದ ಸಚಿವರು, ಮಾರ್ಗಸೂಚಿಗಳ ಅನುಷ್ಠಾನ ಕಟ್ಟುನಿಟ್ಟಿನಿಂದ ಕೂಡಿರಬೇಕು ಎಂದರು.
    ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ ಬಸರೀಗಿಡದ, ಡಾ.ಬಿ.ಎಂ. ಗೊಜನೂರ ಅವರಿಂದ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಹಾಗೂ ಔಷಧ ಸಂಗ್ರಹ ಕುರಿತು ಮಾಹಿತಿ ಪಡೆದರು. ಜಿಲ್ಲೆಯ ಲಸಿಕಾಕರಣದ ಕುರಿತು ಮಾಹಿತಿ ಪಡೆದ ಸಚಿವರು, ಸರ್ಕಾರ ನಿಗದಿಪಡಿಸಿದ ಆದ್ಯತಾ ಗುಂಪುಗಳಿಗೆ ಶೀಘ್ರವೇ ಲಸಿಕೆ ನೀಡಬೇಕು. ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ನಿಗದಿತ ಸಮಯಕ್ಕೆ ಒದಗಿಸುವ ಮೂಲಕ ಸೋಂಕಿತರ ಜೀವ ಹಾನಿ ತಪ್ಪಿಸಬೇಕು ಎಂದರು.
    ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts