More

    ಮೂಲ ಸೌಲಭ್ಯವಿಲ್ಲದೆ ಮಾಂಸದ ಮಳಿಗೆಗೆ ಬರಲು ಒಪ್ಪದ ಬಿಡ್​ದಾರರು

    ಮೂಡಿಗೆರೆ: ಪಟ್ಟಣದ ಅಲ್ಲಲ್ಲಿರುವ ಕುರಿ, ಮೀನು, ಕೋಳಿ ಮಾಂಸದ ಅಂಗಡಿಗಳನ್ನು ತೆರವುಗೊಳಿಸಿ ಒಂದೇ ಕಡೆ ಮಾರುಕಟ್ಟೆ ನಿರ್ವಿುಸಲು ಯೋಜನೆ ರೂಪಿಸಿ ಕಟ್ಟಡ ನಿರ್ವಿುಸಿ 4 ವರ್ಷ ಕಳೆದಿದೆ. ಆದರೆ ಮೂಲ ಸೌಲಭ್ಯ ಇಲ್ಲದಿರುವುದರಿಂದ ಆ ಕಟ್ಟಡಕ್ಕೆ ನಾವು ಸ್ಥಳಾಂತರಗೊಳ್ಳುವುದಿಲ್ಲವೆಂದು ಮೀನು, ಮಾಂಸ ವ್ಯಾಪಾರಿಗಳು ಬಿಗಿಪಟ್ಟು ಹಿಡಿದಿದ್ದಾರೆ.

    ಪಟ್ಟಣದ ಮಾರ್ಕೆಟ್ ರಸ್ತೆಯ ಜನವಸತಿ ಪ್ರದೇಶದಲ್ಲಿ ಸ್ಥಳೀಯರ ಅಭಿಪ್ರಾಯ ಪಡೆಯದೆ 12 ಮಳಿಗೆಗಳ ಮಾಂಸದ ಮಾರುಕಟ್ಟೆ ಕಟ್ಟಡವನ್ನು 4 ವರ್ಷದ ಹಿಂದೆ 45 ಲಕ್ಷ ರೂ. ವೆಚ್ಚದಲ್ಲಿ ಪಪಂನಿಂದ ನಿರ್ವಿುಸಲಾಗಿದೆ. ಕಟ್ಟಡ ನಿರ್ವಣವಾಗಿ 3 ವರ್ಷದ ಬಳಿಕ 2019 ನ.22ರಂದು ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಪ್ರತಿ ಮಳಿಗೆಗೆ 40 ರಿಂದ 45 ಸಾವಿರ ರೂ. ದುಬಾರಿ ಮಾಸಿಕ ಬಾಡಿಗೆಗೆ ವ್ಯಾಪಾರಿಗಳು ಮುಗಿಬಿದ್ದು ಬಿಡ್ ಕೂಗಿದ್ದರು. 20 ಸಾವಿರ ರೂ. ಮುಂಗಡ ಹಣ ಕೂಡ ನೀಡಿದ್ದರು.

    ಹರಾಜು ನಡೆದ ಬಳಿಕ ಬಿಡ್​ದಾರರು ಹೊಸ ಕಟ್ಟಡಕ್ಕೆ ಹೋಗಲು ಒಪ್ಪಲಿಲ್ಲ. ಕಟ್ಟಡದಲ್ಲಿ ನೀರು, ತ್ಯಾಜ್ಯ ವಿಲೇವಾರಿ, ಮಾಂಸ ತಯಾರಿಸಲು ಅಗತ್ಯ ವ್ಯವಸ್ಥೆ ಇಲ್ಲದಿರುವುದು, ಗ್ರಾಹಕರ ಮತ್ತು ಸರಕು ವಾಹನಗಳು ತಿರುಗಾಡಲು ಸಾಧ್ಯವಿಲ್ಲದ ಕಿರಿದಾದ ರಸ್ತೆಯಾಗಿರುವುದರಿಂದ ಮಾಂಸ ಮಾರಾಟಕ್ಕೆ ಯೋಗ್ಯವಿಲ್ಲದ ಕಟ್ಟಡವಾಗಿದೆ ಎಂದು ಆಕ್ಷೇಪಿಸಿದರು. ಜತೆಗೆ ಸುತ್ತಲೂ ವಾಸದ ಮನೆ ಇರುವುದರಿಂದ ಮಾಂಸದ ಅಂಗಡಿ ತೆರೆಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ನ್ಯಾಯಲಯದ ಮೆಟ್ಟಿಲೂ ಹತ್ತಿದ್ದಾರೆಂದು ವ್ಯಾಪಾರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಫೋಟೊ, 26ಎಂಡಿಜಿ-ಪಿ1: ಮೂಡಿಗೆರೆ ಮಾರ್ಕೆಟ್ ರಸ್ತೆಯಲ್ಲಿ ಪಪಂನಿಂದ ನಿರ್ವಿುಸಿದ ಮಾಂಸದ ಮಾರುಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts