More

    ಸಾಧನೆಗೆ ಯಾವುದೂ ಅಡ್ಡಿಯಲ್ಲ: ನ್ಯಾ. ಶಿವರಾಜ್ ಪಾಟೀಲ್

    ಶಿವಮೊಗ್ಗ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಬದುಕು ಸಾರ್ಥಕ ಅಥವಾ ಅರ್ಥಪೂರ್ಣ ಆಗಬೇಕಾದರೆ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಯತೆ ಮುಖ್ಯ. ಅವುಗಳನ್ನು ಮೈಗೂಡಿಸಿಕೊಂಡಲ್ಲಿ ಸಾಧನೆಗೆ ಗ್ರಾಮಾಂತರ ಪ್ರದೇಶ, ಬಡತನ ಸೇರಿ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಹೇಳಿದರು.

    ನಗರದ ವಕೀಲರ ಭವನದಲ್ಲಿ ಭಾನುವಾರ ಸಿಟಿಜನ್ಸ್ ಫೋರಂ, ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ಎಸ್‌ಎಂಎಸ್‌ಎಸ್‌ಎಸ್), ಪೀಪಲ್ಸ್ ಲಾಯರ್ಸ್ ಗಿಲ್ಡ್ನಿಂದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ಕಳೆದ ಕಾಲ ನಡೆದ ದೂರ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
    ಹಿರಿಯರು ಅನುಭವದ ಜತೆಗೆ ಮಕ್ಕಳು ಈ ದೇಶದ ದೊಡ್ಡ ಸಂಪತ್ತು ಆಗಿದ್ದಾರೆ. ಯುವಕರು ಕೂಡ ದೇಶದ ದೊಡ್ಡ ಶಕ್ತಿ ಆಗಬಲ್ಲರು. ಭವ್ಯ, ಸದೃಢ ಮತ್ತು ಆಕರ್ಷಕ ಭಾರತ ನಿರ್ಮಾಣ ಮಾಡುವ ಸಾಮರ್ಥ್ಯ ಯುವಶಕ್ತಿಯಲ್ಲಿದೆ. ಅದಕ್ಕಾಗಿ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ಉತ್ತಮ ಎಂದು ಹೇಳಿದರು.
    ಎರಡನೇ ಹೆಚ್ಚುವರಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಪುಸ್ತಕ ಬಿಡುಗಡೆ ಮಾಡಿದರು. ಶಿವಮೊಗ್ಗ ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಂಚಾಲಕ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕ ಮಾತನಾಡಿದರು. ಸಿಟಿಜನ್ಸ್ ಫೋರಂ ಅಧ್ಯಕ್ಷ ಕೆ.ಬಸಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್‌ಎಂಎಸ್‌ಎಸ್‌ಎಸ್ ಅಧ್ಯಕ್ಷ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಸಿಟಿಜನ್ಸ್ ಫೋರಂ ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts