More

    ಮಾಜಿ ಸಿಎಂ ಎಸ್​.ನಿಜಲಿಂಗಪ್ಪ ಕರ್ನಾಟಕದ ಸಾಂಸ್ಕೃತಿಕ ಪ್ರತೀಕ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣನೆ

    ಬೆಂಗಳೂರು:ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್​.ನಿಜಲಿಂಗಪ್ಪ, ಕರ್ನಾಟಕದ ಸಾಂಸ್ಕೃತಿಕ ಪ್ರತೀಕ ಎಂದು ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದ್ದಾರೆ.

    ನಿರಂತರ ಸಾಯಿ ಕಮ್ಯೂನಿಕೇಷನ್​ ಪೆ.ಲಿ. ಜಯನಗರದ 8ನೇ ಬ್ಲಾಕ್​ನಲ್ಲಿರುವ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಬಿ.ಎ. ನಂಜುಂಡಸ್ವಾಮಿ ಬರೆದಿದ್ದ “ಧೀಮಂತ ಮುತ್ಸದ್ದಿ ಎಸ್​.ನಿಜಲಿಂಗಪ್ಪ’ ಕೃತಿಯನ್ನು ಹಿರಿಯ ಸಾಹಿತಿ ಎನ್​.ರಾಮನಾಥ್​ ಇಂಗ್ಲಿಷ್​ಗೆ ಅನುವಾದಿಸಿದ “ವಿಷನರಿ ಸ್ಟೇಟ್ಸ್​ಮನ್​ ಎಸ್​.ನಿಜಲಿಂಗಪ್ಪ’ ಕೃತಿ ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು. ರಾಷ್ಟ್ರಮಟ್ಟದ ನಾಯಕರಾಗಿದ್ದ ನಿಜಲಿಂಗಪ್ಪ ಶ್ರೇಷ್ಠ ಮುತ್ಸದ್ದಿ. ಪ್ರಾಮಾಣಿಕ ವ್ಯಕ್ತಿತ್ವದಿಂದ ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರದ ಅನೇಕ ನಾಯಕರ ಮನಸ್ಸುಗಳಲ್ಲಿ ಅಚ್ಚಳಿಯದೆ ಪ್ರಭಾವ ಬೀರಿದ್ದರು. ಉದಾರ ಗುಣ, ಅಪರೂಪದ ವ್ಯಕ್ತಿತ್ವ ಇವರದ್ದು. ರಾಷ್ಟ್ರಪತಿ ಸೇರಿ ಅನೇಕ ಉನ್ನತ ಹುದ್ದೆಗಳು ಒಲಿದ ಬಂದರೂ ನಯವಾಗಿ ತಿರಸ್ಕರಿಸಿ ಇಡೀ ತಮ್ಮ ಬದುಕನ್ನು ಸಮಾಜ ಸೇವೆಗೆ ಸಮರ್ಪಿಸಿದರು. ಮೌಲ್ಯಯುತ ರಾಜಕರಣಿಯಾಗಿದ್ದ ಇವರು, ಪಾರದರ್ಶಕತೆ ಆಡಳಿತ ನಡೆಸುವ ಮೂಲಕ ಜನಪ್ರಿಯ ಯೋಜನೆಗಳನ್ನು ಕಾರ್ಯಗೊಳಿಸಿದರು ಎಂದು ಶ್ರೀಗಳು ಹೇಳಿದರು.

    ಆದರ್ಶ ರಾಜಕಾರಣಿಗಳ ಹೆಸರು ಕಣ್ಮರೆ:
    ಇವತ್ತಿನ ದಿನಮಾನದಲ್ಲಿ ಕಲುಷಿತಗೊಂಡಿರುವ ರಾಜಕೀಯದಲ್ಲಿ ಆದರ್ಶ ರಾಜಕಾರಣಿಗಳ ಹೆಸರು ಮರೆತು ಹೋಗುತ್ತಿರುವುದು ದುರದೃಷ್ಟಕರ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು 100 ಕೋಟಿ ರೂ.ವರೆಗೆ ಖರ್ಚು ಮಾಡುವ ಪರಿಸ್ಥಿತಿ ಬಂದಿರುವುದು ವಿಷಾದಕರ ಸಂಗತಿ. ಹಾಗಾಗಿ, ರಾಜಕೀಯ ಸ್ಥಿತಿ ಅದೋಗತಿಗೆ ತಲುಪಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ವಿರೋಧ ಪಕ್ಷದವರು ಸುಳ್ಳು ಆಪಾದನೆ ಮಾಡಿದ್ದ ವೇಳೆ ತುಂಬ ನೊಂದು ನಿಜಲಿಂಗಪ್ಪ ಅಧಿವೇಶನದಿಂದ ಎದ್ದು ಹೊರಗೆ ಬಂದಿದ್ದರು. ಈ ವೇಳೆ ವಿರೋಧ ಪಕ್ಷದ ನಾಯಕರೇ ಖುದ್ದಾಗಿ ತೆರಳಿ ಕ್ಷಮಾರ್ಪಣೆ ಕೇಳಿ ನಿಜಲಿಂಗಪ್ಪ ಅವರನ್ನು ಕರೆತಂದಿದ್ದರು. ಅನೇಕ ರಾಜಕೀಯ ನಾಯಕರಗಳನ್ನು ಬೆಳೆಸಿದರು. ನಮ್ಮ ಮಠದ ಜತೆ ಅವಿನಾಭವ ಸಂಬಂಧ ಇಟ್ಟುಕೊಂಡಿದ್ದರು ಎಂದು ಶ್ರೀಗಳು ತಿಳಿಸಿದರು.

    ಸೆಟ್ಟೇರಿತ್ತು ದುನಿಯಾ ವಿಜಯ್​ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್​ವುಡ್​ಗೆ ಮಗಳ ಎಂಟ್ರಿ

    ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಗಾಂಧಿ ತತ್ವ ಅಳವಡಿಸಿಕೊಂಡು ಆಡಳಿತ ನಡೆಸಿದವರು ನಿಜಲಿಂಗಪ್ಪ. ಇವರ ಆದರ್ಶ ಜೀವನ ನಮಗೆಲ್ಲರಿಗೂ ಸ್ಪೂರ್ತಿ. ಯುವ ಮನಸ್ಸುಗಳಿಗೆ ಇವರ ತತ್ವಗಳನ್ನು ತಲುಪಿಸುವಂತಾಗಬೇಕು. ಎಲ್ಲರಿಗೂ ಬೆಳೆಯಲು ಸಮಾನ ಅವಕಾಶ ಸಿಗುವಂತಾಗಬೇಕು ಎಂಬುದು ನಿಜಲಿಂಗಪ್ಪ ಅವರ ಆಶಯವಾಗಿತ್ತು ಎಂದರು. ನಿವೃತ್ತ ಐಎಎಸ್​ ಅಧಿಕಾರಿ ಡಾ.ಸಿ.ಸೋಮಶೇಖರ್​, ಮಾಜಿ ಕಾಪೋರ್ರೇಟರ್​ ಪಿ.ವಿಜಯಕುಮಾರ್​, ಲೇಖಕರಾದ ಎನ್​.ರಾಮನಾಥ್​, ಬಿ.ಎ.ನಂಜುಂಡಸ್ವಾಮಿ ಮತ್ತಿತರರಿದ್ದರು.

    ನಾನು ಶಾಸಕಿ, ಮಂತ್ರಿಯಾಗಲು ಎಸ್​.ನಿಜಲಿಂಗಪ್ಪ ಕಾರಣ. ಅವರ ಅಶೀರ್ವಾದ, ಮಾರ್ಗದರ್ಶನದಿಂದ ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದೆ. ಸರಳ ಜೀವಿ, ಮಾದರಿ ವ್ಯಕ್ತಿತ್ವ ಹೊಂದಿದ್ದ ಇವರು, 8 ವರ್ಷ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದವರು. ಇಂಥ ರಾಜಕಾರಣಿ ನಮಗೆ ಸಿಗುವುದೇ ಅಪರೂಪ. ಬೆಂಗಳೂರಿಗೆ ಕಾವೇರಿ ನೀರು ತಂದಿದವರು ನಿಜಲಿಂಗಪ್ಪ. ರಾಜ್ಯದಲ್ಲಿ ಹರಿದು ಹಂಚು ಹೋಗಿದ್ದ ಹಲವು ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಕರ್ನಾಟಕ ಎಂದು ನಾಮಕಾರಣ ಮಾಡಿದರು.
    | ಡಾ.ಲೀಲಾದೇವಿ ಆರ್​.ಪ್ರಸಾದ್​, ಮಾಜಿ ಸಚಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts