More

    ಸ್ನೇಹಿತನ ಜತೆ​ ಪಬ್​ಗೆ ಹೋಗಿದ್ದ ಮೆಡಿಕಲ್​ ವಿದ್ಯಾರ್ಥಿನಿಯ ದುರಂತ ಸಾವು: ನ. 9ರ ರಾತ್ರಿ ನಡೆದಿದ್ದೇನು?

    ಹೈದರಾಬಾದ್​: ಕಾರಿನಲ್ಲಿ ಕುಳಿತು ಪ್ರಯಾಣಿಸುವಾಗ ಸೀಟ್​ ಬೆಲ್ಟ್​ ಹಾಕುವುದನ್ನು ಮರೆಯಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರ ನಿರ್ಲ್ಷಕ್ಷ್ಯದಿಂದ ಯಾವ ಪರಣಾಮ ಬೀರಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಸೀಟ್​ ಬೆಲ್ಟ್​ ಧರಿಸದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾಳೆ.

    ಈ ಘಟನೆ ಹೈದರಾಬಾದಿನ ಗಾಚಿಬೌಲಿಯಲ್ಲಿರುವ ಹಳೇ ಮುಂಬೈ ಹೆದ್ದಾರಿಯಲ್ಲಿ ನ. 9ರ ರಾತ್ರಿ ನಡೆದಿದ್ದು, ಮೃತಳನ್ನು ಪೊನ್ನಪಲ್ಲಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ರಷ್ಯಾದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದು, ಲಾಕ್​ಡೌನ್​ ಸಮಯದಲ್ಲಿ ರಷ್ಯಾದಿಂದ ತವರಿಗೆ ಮರಳಿದ್ದಳು. ಮತ್ತೆ ರಷ್ಯಾಗೆ ಹೋಗುವಷ್ಟರಲ್ಲಿ ಕಾರು ಅಪಘಾತದಿಂದ ದುರಂತ ಅಂತ್ಯ ಕಂಡಿದ್ದಾಳೆ.

    ಇದನ್ನೂ ಓದಿ: Web Exclusive |ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಮೈಸೂರು ಮೃಗಾಲಯ : ಚೇತರಿಕೆ ಕಾಣದ ಪ್ರವಾಸೋದ್ಯಮ

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೈಬರಬಾದ್​ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದು, ಅಪಘಾತಕ್ಕೆ ಡ್ರಂಕ್​ ಆ್ಯಂಡ್​ ಡ್ರೈವ್​ ಮತ್ತು ಸೀಟ್​ ಬೆಲ್ಟ್​ ಧರಿಸದಿರುವುದು ಕಾರಣ ಎಂದು ತನಿಖಾ ವರದಿ ನೀಡಿದ್ದಾರೆ.

    ಪೊಲೀಸ್​ ಮೂಲಗಳ ಪ್ರಕಾರ ಮಿಥಿ ಮೋದಿ (20) ಮತ್ತು ಪೊನ್ನಪಲ್ಲಿ ಪ್ರಿಯಾಂಕಾ ಜುಬಿಲಿ ಹಿಲ್ಸ್​ನಲ್ಲಿರುವ ಏರ್​ ಲೈವ್​ ಪಬ್​ನಿಂದ ಮನೆಗೆ ಮರಳುತ್ತಿದ್ದರು. ಮಿಥಿ ಮೋದಿ ಕಾರು ಚಾಲನೆ ಮಾಡುತ್ತಿದ್ದ. ಮದ್ಯ ವ್ಯಸನ ಸ್ಥಿತಿಯಲ್ಲಿದ್ದ ಮಿಥಿ ವೇಗದ ಮಿತಿಯನ್ನು ಮೀರಿದ್ದ. ಕಾರು ನಿಯಂತ್ರಣ ಕಳೆದುಕೊಂಡು ಇಂಡಿಯನ್​ ಇಮ್ಯುನೊಲಾಜಿಕಲ್​ ಕಂಪನಿ ಎದುರಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಸಹ ಪ್ರಯಾಣಿಕ ಪ್ರಿಯಾಂಕಾ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಡ್ರೈವರ್​ ಸೀಟಿನಲ್ಲಿ ಕುಳಿತು ಸೀಟ್​ ಬೆಲ್ಟ್​ ಹಾಕಿದ್ದ. ಆದರೆ, ಪ್ರಿಯಾಂಕಾ ಧರಿಸಿರಲಿಲ್ಲ. ಅಪಘಾತದಿಂದಾಗಿ ಪ್ರಿಯಾಂಕಾ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.

    ಇದನ್ನೂ ಓದಿ: ಅರಣ್ಯ ಸಚಿವರನ್ನು ಭೇಟಿ ಮಾಡಲು ಬಂದ ಮೊಸಳೆ ಸೆರೆ..!

    ಇದೀಗ ಡ್ರಂಕ್​ ಆ್ಯಂಡ್​ ಡ್ರೈವ್​ ಹಿನ್ನೆಲೆಯಲ್ಲಿ ಮಿಥಿ ಮೋದಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಮಿಥಿ ಮೋದಿಯನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಒಂದು ಘಟನೆ ಸೀಟ್​ ಬೆಲ್ಟ್​ ಧರಿಸದೇ ವಾಹನ ಚಲಾಯಿಸುವವರು ಹಾಗೂ ಪ್ರಯಾಣಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ. (ಏಜೆನ್ಸೀಸ್​)

    ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್​ಜೆಡಿ-ಕಾಂಗ್ರೆಸ್​ ನಿಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts