More

    ನಮ್ಮಲ್ಲಿರುವುದು ಸಹ ನಿಮ್ಮಲ್ಲಿರುವುದೇ! ಸಿಎಂ ಕೇಜ್ರಿವಾಲ್​ ಟ್ವೀಟ್​ಗೆ ಸಿಂಗಾಪೂರ್​ ಸ್ಪಷ್ಟನೆ

    ನವದೆಹಲಿ: ಕರೊನಾ ವೈರಸ್​ ವಿರುದ್ಧ ಯಶಸ್ವಿಯಾಗಿ ಹೋರಾಡಿದ ರಾಷ್ಟ್ರಗಳ ಪೈಕಿ ಸಿಂಗಾಪೂರ್​ ಕೂಡ ಒಂದು. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಸಿಂಗಾಪೂರ್​, ಮಕ್ಕಳ ಮೇಲೆ ಪರಿಣಾಮ ಬೀರುವಂತಹ ಹೊಸ ರೂಪಾಂತರಿ ವೈರಸ್​ ನಮ್ಮಲ್ಲಿ ಸೃಷ್ಟಿಯಾಗಿಲ್ಲ.​ ನಮ್ಮಲ್ಲಿರುವುದು ಸಹ ಭಾರತದ ರೂಪಾಂತರಿಯೇ ಎಂದು ಹೇಳಿದೆ.

    ಸಿಂಗಾಪೂರ್​ ಮತ್ತು ಭಾರತ ನಡುವಿನ ವಿಮಾನಯಾನವನ್ನು ರದ್ದು ಮಾಡಿ ಎಂದು ಕೇಳಿಕೊಂಡ ಬೆನ್ನಲ್ಲೇ ಸಿಂಗಾಪೂರ್​ ಹೈಕಮಿಷನ್ ಮಂಗಳವಾರ​ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿರಿ: ಮನೆಯ ಒಳಗಡೆಯೇ ಸರಳ ವಿವಾಹವಾಗಿ ಲಾಕ್​ಡೌನ್​ಗೆ ಸಾಥ್​ ನೀಡಿದ ನವಜೋಡಿ!

    ನಮ್ಮಲ್ಲಿ ಹೊಸ ರೂಪಾಂತರಿ ಕರೊನಾ ವೈರಸ್​ ಇದೆ ಎಂದು ಖಚಿತಪಡಿಸುವ ಯಾವುದೇ ಸತ್ಯಾಂಶವಿಲ್ಲ. ಇತ್ತೀಚೆಗೆ ಮಕ್ಕಳು ಸೇರಿದಂತೆ ಅನೇಕ ಕೋವಿಡ್​ ಪ್ರಕರಣಗಳಲ್ಲಿ B.1.617.2 ರೂಪಾಂತರಿ ವೈರಸ್ ಪ್ರಚಲಿತದಲ್ಲಿರುವುದಾಗಿ ಫೈಲೋಜೆನೆಟಿಕ್ ಪರೀಕ್ಷೆಯಲ್ಲೂ ತಿಳಿದುಬಂದಿದೆ ಎಂದು ಭಾರತದಲ್ಲಿರುವ ಸಿಂಗಾಪೂರ್​ ಹೈಕಮಿಷನ್​ ಟ್ವೀಟ್​ ಮೂಲಕ ತಿಳಿಸಿದೆ.

    ತುಂಬಾ ಪರಿಣಾಮಕಾರಿಯಾಗಿರುವ B.1.617 ರೂಪಾಂತರವು ಮೊದಲು ಭಾರತದಲ್ಲಿ ಪತ್ತೆಯಾಗಿದ್ದು, ಇದೇ ವೈರಸ್​ ಇದೀಗ ಅನೇಕ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇದೇ ತಳಿಯ ವೈರಸ್​ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದ್ದು, ಸಾಕಷ್ಟು ಮಂದಿಯನ್ನು ಬಲಿ ಪಡೆದುಕೊಂಡಿದೆ.

    ಕೇಜ್ರಿವಾಲ್​ ಏನು ಹೇಳಿದ್ದರು?
    ಸಿಂಗಾಪೂರ್​ಗೆ ಬಂದಿರುವ ಹೊಸ ಬಗೆಯ ಕರೊನಾ ಮಕ್ಕಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ. ಬಹುಶಃ ಇದು ಭಾರತಕ್ಕೆ ಮೂರನೇ ಅಲೆಯಾಗಿ ಎಂಟ್ರಿ ನೀಡಬಹುದು. ಮೊದಲನೆಯದಾಗಿ ತಕ್ಷಣ ಸಿಂಗಾಪೂರ್​ ವಾಯುಯಾನವನ್ನು ರದ್ದು ಮಾಡಿ ಮತ್ತು ಎರಡನೇಯದು ಮಕ್ಕಳಿಗೂ ಲಸಿಕಾ ಆಯ್ಕೆಯನ್ನು ನೀಡಿ ಎಂದು ಕೇಂದ್ರ ಸರ್ಕಾರವನ್ನು ಅರವಿಂದ್​ ಕೇಜ್ರಿವಾಲ್​ ಅವರು ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದರು.

    ಇದನ್ನೂ ಓದರಿ: ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

    3ನೇ ಅಲೆ ಬಗ್ಗೆ ತಜ್ಞರ ಎಚ್ಚರಿಕೆ
    ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಜ್ರಿವಾಲ್​ ಟ್ವೀಟ್​ ಮೂಲಕ ಎಚ್ಚರಿಸಿದ್ದರು. ಅಲ್ಲದೆ, ಅನೇಕ ತಜ್ಞರು ಹೇಳುವ ಪ್ರಕಾರ ಮೂರನೇ ಅಲೆಯು ಮಕ್ಕಳ ಮೇಲೆ ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಮೊದಲನೇ ಅಲೆಯಲ್ಲಿ ವಯಸ್ಸಾದವರ ಮೇಲೆ ಕರೊನಾ ಅಟ್ಟಹಾಸ ಮೆರೆದಿತ್ತು. ಇದೀಗ ದೇಶದಲ್ಲಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಎರಡನೇ ಅಲೆಗೆ ಹೆಚ್ಚಾಗಿ ಯುವ ಸಮೂಹವೇ ಬಲಿಯಾಗುತ್ತಿದೆ.

    ಸಿಂಗಾಪೂರ್​ನಲ್ಲಿ ಹೊಸ ಪ್ರಕರಣಗಳು
    ಇನ್ನು ಸಿಂಗಾಪೂರ್​ನಲ್ಲಿ ಭಾನುವಾರ ಹೊಸದಾಗಿ 38 ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಕಂಡುಬಂದು ಹೆಚ್ಚು ಪ್ರಕರಣ ಎಂದು ಹೇಳಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಂಗಾಪೂರ್​ ಆರೋಗ್ಯ ಸಚಿವ ಆಂಗ್​ ಯೆ ಕುಂಗ್​, ಪ್ರಸ್ತುತ ದೇಶದಲ್ಲಿ ಕಂಡುಬಂದಿರುವ B.1.617 ತಳಿಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಉತ್ತರ ಪ್ರದೇಶದ ಮತ್ತೊಬ್ಬ ಸಚಿವ ಕರೊನಾಗೆ ಬಲಿ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

    ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

    ಆರ್​ಟಿಪಿಸಿಆರ್​ಗೆ ಕಾದರೆ ಪ್ರಾಣಕ್ಕೆ ಸಂಚಕಾರ! ಕರೊನಾ ಚಿಕಿತ್ಸೆ ವಿಳಂಬವಾದರೆ ಶ್ವಾಸಕೋಶ ಮೇಲೆ ಪರಿಣಾಮ; ಡಾ.ಎನ್.ಜಿ. ಚೇತನ್ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts