More

    ಲಿಂಗಾಯತರಿಗೆ ಯಾವತ್ತೂ ಅನ್ಯಾಯ ಬಗೆದಿಲ್ಲ..!

    ವಿಜಯಪುರ: ಲಿಂಗಾಯತ ಸಮುದಾಯವನ್ನು ಒಡೆದು ಆಳುತ್ತಿರುವುದಾಗಿ ಕಾಂಗ್ರೆಸ್​ ಅಭ್ಯರ್ಥಿ ರಾಜು ಆಲಗೂರ ಮಾಡಿರುವ ಆರೋಪ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

    ರಾಜು ಆಲಗೂರ ಬಗ್ಗೆ ಮಾತನಾಡಿದ್ದು ನಿಜ. ಆದರೆ, ಅದು ನನ್ನ ವೈಯಕ್ತಿಕ ಹೇಳಿಕೆಯಲ್ಲ. ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಮೇಲ್ವರ್ಗದ ಜನ ಹೇಳಿರುವುದನ್ನೇ ಉಚ್ಚರಿಸಿದ್ದೇನೆ.

    ಕೆಲವು ಮೇಲ್ವರ್ಗದ ಜನ ಆಲಗೂರ ವಿಷಯದಲ್ಲಿ ತೋಡಿಕೊಂಡ ಅಸಮಾಧಾನದ ನುಡಿಗಳನ್ನು ನಾನು ಪುನರುಚ್ಚರಿಸಿದ್ದೇನಷ್ಟೆ. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವೇನಿಲ್ಲ ಎಂದು ಜಿಗಜಿಣಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

    ಡಿಎಸ್​ಎಸ್​ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ನಾನೂ ಅದೇ ಸಮಾಜದಿಂದ ಬಂದಿದ್ದೇನೆ. ಆದರೆ, ಕೆಲವು ಹುಡುಗರು ಮಾಡಿದ ತಪ್ಪಿನಿಂದಾಗಿ ಮೇಲ್ವರ್ಗದ ಜನ ಬೇಸರ ವ್ಯಕ್ತಪಡಿಸಿದ್ದಾರೆ.

    ಅವರ ಆ ಅಭಿಪ್ರಾಯವನ್ನೇ ನಾನು ಪುನರುಚ್ಚರಿಸಿದ್ದೇನೆ. ಇದರಲ್ಲಿ ತಪ್ಪು ಭಾವಿಸುವ ಅಗತ್ಯವಿಲ್ಲ ಎಂದರು.

    ಇನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹಿತ ಹಲವು ಬಿಜೆಪಿ ನಾಯಕರಿಗೆ ಅವಕಾಶ ತಪ್ಪಿಸಿರುವುದಾಗಿ ಆಲಗೂರ ತಿಳಿಸಿದ್ದು ನಮ್ಮ ಪಕ್ಷದ ವಿಚಾರ ಅವರಿಗೇಕೆ? ಎಂಬುದು ತಿಳಿಯುತ್ತಿಲ್ಲ. ಅವರ ಪದ ಬಗ್ಗೆ ಅವರು ನೋಡಿಕೊಳ್ಳಲಿ. ಸೋಲಿನ ಹತಾಶೆಯಿಂದ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

    ನಾನೆಂದೂ ಯತ್ನಾಳರ ಅವಕಾಶ ತಪ್ಪಿಸಿಲ್ಲ. ಲಿಂಗಾಯತ ನಾಯಕರಾದ ಉಮೇಶ ಕತ್ತಿ, ಲಕ್ಷ$್ಮಣ ಸವದಿ ಹೀಗೆ ಅನೇಕ ನಾಯಕರನ್ನು ಜೊತೆಗೆ ಕರೆದುಕೊಂಡು ರಾಜಕಾರಣ ಮಾಡಿದ್ದೇನೆ. ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಲ್ವರ್ಗದವರನ್ನು ತಲೆ ಮೇಲೆ ಹೊತ್ತು ರಾಜಕಾರಣ ಮಾಡಿದ್ದೇನೆ.

    ಯಾರಿಗೂ ಅನ್ಯಾಯ ಮಾಡಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಜೊತೆ ಇದ್ದಾಗ ವೆಂಕಯ್ಯ ನಾಯ್ಡು, ಪ್ರಮೋದ ಮಹಾಜನ್​ ಮತ್ತಿತರರು ಕರೆದು ವಾಜಪೇಯಿ ಅವರ ಜೊತೆ ಬರಬೇಕೆಂದು ಹೇಳಿದರು.

    ನಾನು ಬಿಜೆಪಿಗೆ ಬರುವಲ್ಲಿ ಲಿಂಗಾಯತ ನಾಯಕರ ಕೊಡುಗೆಯೂ ಇದೆ. ಯತ್ನಾಳ ಅವರು ಮಂತ್ರಿ ಆಗುವಾಗಲೂ ನಾನು ಬೆಂಬಲಿಸಿದ್ದೇನೆ. ರವಿಕಾಂತ ಅವರನ್ನು ಹತ್ತಿಕ್ಕೇದ್ದೇನೆ ಎಂಬುದು ಸುಳ್ಳು ಎಂದರು.

    ನಾನು ಎಲ್ಲರಿಗೂ ಅನುಕೂಲ ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡಿಲ್ಲ. ಮನಗೂಳಿ ಮಾಮಾ ಮಂತ್ರಿ ಆಗಲೆಂದು ಬಯಸಿದವನು ನಾನು. ಯಾವತ್ತೂ ಯಾರಿಗೂ ಟಿಕೆಟ್​ ತಪ್ಪಿಸಿಲ್ಲ ಎಂದರು.

    ಮುಖಂಡರಾದ ಆರ್​.ಎಸ್​. ಪಾಟೀಲ ಕುಚಬಾಳ, ಅರುಣ ಶಹಾಪುರ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts