More

    ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ ‘ಕಾರಣಪುರುಷ’ ಯಾರಂತ ಕೇಳಿದರೆ ಯಾರೂ ಇಲ್ಲ!

    ನವದೆಹಲಿ: ಜಗತ್ತಿನಾದ್ಯಂತ ಕರೊನಾ ಹಾವಳಿ ಇಟ್ಟಿದ್ದರೂ ಈ ಊರಲ್ಲಿ ಮಾತ್ರ ಒಂದೇ ಒಂದು ಕರೊನಾ ಸೋಂಕಿನ ಪ್ರಕರಣವಿಲ್ಲ. ಮಾತ್ರವಲ್ಲ, ಸದ್ಯದ ವಿದ್ಯಮಾನಗಳ ಪ್ರಕಾರ ಈ ಊರಿಗೆ ಕೋವಿಡ್-19 ಸೋಂಕು ಪ್ರವೇಶಿಸುವ ಸಾಧ್ಯತೆಯೂ ಇದ್ದಂತಿಲ್ಲ. ಏಕೆಂದರೆ ಇಲ್ಲಿ ಅಂಥ ಟೈಟ್‌ ಸೆಕ್ಯುರಿಟಿ ಇದೆ. ಅಷ್ಟಕ್ಕೂ ಅಂಥದ್ದೊಂದು ಭದ್ರತೆ ನೀಡುತ್ತಿರುವುದು ಶಕ್ತಿಶಾಲಿ ಪುರುಷರಲ್ಲ.

    ಹೌದು.. ಈ ಊರಲ್ಲಿ ಒಂದೇ ಒಂದು ಕರೊನಾ ಪ್ರಕರಣ ಕಂಡು ಬರದೇ ಇರಲು ʼಕಾರಣಪುರುಷʼ ಯಾರಂತ ಕೇಳಿದರೆ ಯಾರೂ ಇಲ್ಲ. ಏಕೆಂದರೆ ಇಲ್ಲಿ ಸೀರೆ ಉಟ್ಟು ಲಾಠಿ/ಕೋಲು ಹಿಡಿದವರೇ ಕರೊನಾ ವಾರಿಯರ್.‌ ಈ ಊರಿಗೆ ಕೋವಿಡ್‌-19 ಸೋಂಕು ಪ್ರವೇಶಿಸದಂತೆ ತಡೆ ಹಿಡಿದಿಟ್ಟಿರುವುದೂ ಇವರೇ. ಮಾತ್ರವಲ್ಲ, ಈ ಊರಿನಿಂದ ಯಾರೂ ಹೊರಗೆ ಹೋಗದಂತೆಯೂ ಇವರು ಎಚ್ಚರಿಕೆ ವಹಿಸಿದ್ದಾರೆ. ಈ ರಾಜ್ಯದಲ್ಲಿ ದಿನವೊಂದಕ್ಕೆ ಸಾವಿರಾರು ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದ್ದರೂ ಈ ಊರಲ್ಲಿ ಒಂದೇ ಒಂದು ಕರೊನಾ ಕೇಸ್‌ ಕಾಣಿಸದಿರುವುದಕ್ಕೆ ಈ ಮಹಿಳೆಯರೇ ನಿಜವಾದ ಕಾರಣ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

    ಅಂದಹಾಗೆ ಈ ಊರು ಇರುವುದು ಮಧ್ಯಪ್ರದೇಶದ ಬೇಟುಲ್‌ ಸಮೀಪ, ಊರಿನ ಹೆಸರು ಚಿಖಲರ್‌. ಕಚ್ಚಾ ಸಾರಾಯಿ ಮಾರಾಟಕ್ಕೆ ಹೆಸರಾಗಿರುವ ಈ ಊರಿನಲ್ಲಿ ಒಂದೂ ಕರೊನಾ ಪ್ರಕರಣ ದಾಖಲಾಗಿಲ್ಲ. ಕರೊನಾ ಸುಳಿವು ಸಿಗುತ್ತಿದ್ದಂತೆ ಫೀಲ್ಡ್‌ಗಿಳಿದ ಈ ಮಹಿಳೆಯರು ಲಾಠಿ ಹಿಡಿದು ತಾವೇ ರಕ್ಷಣೆಗೆ ಮುಂದಾಗಿದ್ದಾರೆ. ಹೊರಗಿನವರಿಗೆ ಇಲ್ಲಿ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಿಕೊಂಡು ಊರಿನಾದ್ಯಂತ ಕಾವಲು ಕಾಯುತ್ತಿದ್ದಾರೆ. ಮಾತ್ರವಲ್ಲ, ಯಾರಾದರೂ ಅನವಶ್ಯಕವಾಗಿ ಸುತ್ತಾಡುತ್ತಿದ್ದರೆ ತಾವೇ ಲಾಠಿ ಬೀಸಿ ಗದರಿಸಿ ಓಡಿಸುತ್ತಿದ್ದಾರೆ. ಇನ್ನು ಈ ಊರಿನಿಂದಲೂ ಯಾರನ್ನೂ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಗೆ ಊರಿನ ಕೆಲವು ಯುವಕರನ್ನು ನೇಮಿಸಲಾಗಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಸೋಮವಾರ 12,686 ಕೋವಿಡ್‌-19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿನ ಪ್ರಮಾಣ 5 ಲಕ್ಷ ದಾಟಿದೆ.

    ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ 'ಕಾರಣಪುರುಷ' ಯಾರಂತ ಕೇಳಿದರೆ ಯಾರೂ ಇಲ್ಲ!
    ಊರಿನ ಪಹರೆಯಲ್ಲಿ ಮಹಿಳೆಯರು
    ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ 'ಕಾರಣಪುರುಷ' ಯಾರಂತ ಕೇಳಿದರೆ ಯಾರೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts