More

    ಉತ್ತರ ಕೊರಿಯಾಕ್ಕೆ ಹಿಂದೆಂದೂ ಕಂಡರಿಯದ ಕೆಟ್ಟ ಪರಿಸ್ಥಿತಿ!

    ಸಿಯೋಲ್: ಉತ್ತರ ಕೊರಿಯಾ ಹಿಂದೆಂದಿಗಿಂತಲೂ ಕಂಡರಿಯದ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆಯಂತೆ. ಹೀಗೆ ಹೇಳಿದ್ದು ಬೇರೆ ಯಾರೂ ಅಲ್ಲ. ಆ ರಾಷ್ಟ್ರದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್.

    ಹೌದು, ಕಳೆದ ಸೋಮವಾರ ಪೊನ್​ಯಾಂಗ್​ನಲ್ಲಿ ನಡೆದ ಕಿಮ್ ಜಾಂಗ್ ಉನ್ ಪಕ್ಷದ ಪ್ರಾಥಮಿಕ ಸದಸ್ಯರ ಸಮಾವೇಶದಲ್ಲಿ ಈ ಮಾತನ್ನು ಅವರು ಹೇಳಿದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಸೋಷಿಯೇಟ್ ಪ್ರೆಸ್ ವರದಿ ಮಾಡಿದೆ.

    ಇದನ್ನೂ ಓದಿ: ಬಿಜೆಪಿ ಸುನಾಮಿ ಅಲೆಗೆ ಕಾಂಗ್ರೆಸ್ ತತ್ತರ; ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಬಣ್ಣನೆ

    ಕರೊನಾವೈರಸ್ ಲಾಕ್​ಡೌನ್​ ಪರಿಣಾಮವಾಗಿ ಡೊನಾಲ್ಡ್​ ಟ್ರಂಪ್ ನ್ಯೂಕ್ಲಿಯರ್ ಚಟುವಟಿಕೆ ವಿರೋಧಿಸಿ ತಮ್ಮ ಮೇಲೆ ಹೇರಿದ್ದ ಆರ್ಥಿಕ ದಿಗ್ಭಂಧನದಿಂದ ದೇಶ ಇಂದು ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಸರ್ವಾಧಿಕಾರಿ ಕಿಮ್ ಅಳಲು ತೋಡಿಕೊಂಡಿದ್ದಾರೆ. ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸುವುದು ನಮಗೆ ನಿಜಕ್ಕೂ ಸವಾಲಿನ ಕೆಲಸವಾಗಿದೆ ಎಂದು ಕಿಮ್ ಹೇಳಿದ್ದಾರೆ.

    ನಮಗೆ ಸುಸ್ಥಿರ ಅಭಿವೃದ್ಧಿ ಬೇಕಾಗಿದ್ದು, ಅನಿರೀಕ್ಷಿತ ಬೆಳವಣಿಗೆಗಳಿಂದ ಎದುರಾಗುವ ಸಮಸ್ಯೆಗಳನ್ನು ತ್ವರಿತವಾಗಿ ನಿರ್ಮೂಲನೆ ಮಾಡಲು ಆಗುವುದಿಲ್ಲ ಎಂದು ಕಿಮ್ ಹೇಳಿದ್ದಾರೆ.

    ಅಪಹರಣಕ್ಕೆ ಒಳಗಾಗಿದ್ದ ಸಿಆರ್​ಪಿಎಫ್​ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲ್​ರು

    ಕರ್ಮ ಯಾರನ್ನೂ ಬಿಡುವುದಿಲ್ಲ ಎಂದ ರಾಹುಲ್​: ಇವರಿಗೆ 111 ರೂಪಾಯಿ ಕೊಡಿ ಎಂದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts