More

    ಅಹಿಂಸೆ ಜೈನಧರ್ಮದ ಪ್ರಮುಖ ತತ್ವ

    ಕಂಪ್ಲಿ: ಅಹಿಂಸೆ ಜೈನಧರ್ಮದ ಪ್ರಮುಖ ತತ್ವ ಎಂದು ಜೈನ ಸಮಾಜದ ಪ್ರಮುಖ ಶಾಂತಿಲಾಲ್ ಬಾಲಾರ್ ಹೇಳಿದರು.

    ವರ್ಧಮಾನ ಮಹಾವೀರರ 2622ನೇ ಜನ್ಮ ಕಲ್ಯಾಣ ಮಹೋತ್ಸವ ನಿಮಿತ್ತ ಮಂಗಳವಾರ ಇಲ್ಲಿನ ಶ್ರೀಮುನಿ ಸುವ್ರತ್‌ಜೈನ ಶ್ವೇತಾಂಬರ ಮಂದಿರದಿಂದ ಶ್ರೀ ಮಹಾವೀರರ ಪ್ರತಿಮೆ, ಭಾವಚಿತ್ರ ಮೆರವಣಿಗೆ ಆರಂಭಗೊಂಡ ಸಂದರ್ಭದಲ್ಲಿ ಮಾತನಾಡಿ, ಅಹಿಂಸೆಯೇ ಪರಮ ಧರ್ಮವಾಗಿದೆ. ಪ್ರತಿಯೊಬ್ಬರೂ ಅಹಿಂಸೆಯಿಂದ ಜೀವಿಸಬೇಕು. ಬಾಳು ಮತ್ತು ಬಾಳಲು ಬಿಡು ಎನ್ನುವ ಮಹಾವೀರರ ತತ್ವಾದರ್ಶಗಳನ್ನು ಜೀವನದಲ್ಲಿ ತಪ್ಪದೆ ಪರಿಪಾಲಿಸಬೇಕು ಎಂದರು.

    ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪದಾಧಿಕಾರಿಗಳಾದ ಗೌತಮ್ ರಾಂಕಾ, ಪಾರಸ್‌ಮಲ್ ಹುಂಡಿಯಾ, ಶಾಂತಿಲಾಲ್ ಸಿಂಘ್ವಿ, ರಾಮಲಾಲ್ ಸಿಂಘ್ವಿ, ರಾಜು ಹುಂಡಿಯಾ ಸೇರಿ ಜೈನ ಸಮುದಾಯದವರು, ಜೈನ ಮಹಿಳೆಯರು ಪಾಲ್ಗೊಂಡಿದ್ದರು.

    ಮಹಾವೀರರ ಪ್ರತಿಮೆ, ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಾಗಿ ಪುನಹ ಮಂದಿರದಲ್ಲಿ ಸಮಾವೇಶಗೊಂಡಿತು. ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ ನಿಮಿತ್ತ ನಾನಾ ಕಾರ್ಯಕ್ರಮಗಳು ಜರುಗಿದವು. ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ವರ್ಧಮಾನ ಮಹಾವೀರರ ಜಯಂತ್ಯುತ್ಸವದಲ್ಲಿ ಆರ್‌ಐ ಎ.ಗಣೇಶ್, ಮೌನೇಶ್ ಸೇರಿ ಸಿಬ್ಬಂದಿ, ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts