More

    ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿ ಆಚರಣೆ

    ಬೆಂಗಳೂರು: ಅಹಿಂಸೋ ಪರಮೋಧರ್ಮ ಎಂಬ ಧ್ಯೇಯವಾಕ್ಯವನ್ನು ಜಗತ್ತಿಗೆ ನೀಡಿದ ಜೈನಧರ್ಮದ 24ನೇ ತೀರ್ಥಂಕರರಾದ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ನಗರದ ವಿವಿದೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ತೇರಾಪಂಥ್ ಜ್ಞಾನ ಬೆಂಗಳೂರು ಶಾಖೆಯು ಟೌನ್‌ಹಾಲ್ ಮುಂಭಾಗದಿಂದ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಜೈನಸಮುದಾಯದ ಮುನಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ ಬಿತ್ತಿಪತ್ರಗಳ ಪ್ರದರ್ಶನ ಹಾಗೂ ದುಶ್ಚಟಗಳಿಂದ ದೂರವಿರುವಂತೆ ಜನರಿಗೆ ಜಾಗೃತಿ ಮೂಡಿಸುವ ಪ್ರದರ್ಶನ ಮಾಡಿದರು.

    ಜೈನ ಯುವ ಸಂಘಟನೆಯು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶವನ್ನು ಆಯೋಜಿಸಿತ್ತು. ಜೈನ ಆಚಾರ್ಯರು, ಸಾಧು-ಸಾಧ್ವಿಗಳು ಪಾಲ್ಗೊಂಡಿದ್ದ ಸಮಾವೇಶಕ್ಕೂ ಮುನ್ನ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 500 ಯೂನಿಟ್ ರಕ್ತ ಸಂಗ್ರಹಣೆಯ ಗುರಿಯನ್ನು ಸಕಾರಗೊಳಿಸಲು ಸಮುದಾಯದ ಯುವಕ, ಯುವತಿಯರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವೀರರ ಮೂರ್ತಿಗೆ ವಿವಿಧ ಕಷಾಯಗಳಿಂದ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.

    ಜಯನಗರದಲ್ಲಿರುವ ಜೈನಮಂದಿರದಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

    ಮೆಜೆಸ್ಟಿಕ್ ಬಳಿ ಇರುವ ಧನ್ವಂತರಿ ಗಣಪತಿ ದೇವಾಲಯದ ಸಮೀಪ ಮಹಾವೀರ ಜಯಂತಿ ಅಂಗವಾಗಿ ಜೈನ ಸಂಘಟನೆಯ ಸದಸ್ಯರು ಸಾರ್ವಜನಿಕರಿಗೆ ಅನ್ನದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts