More

    ಗುರುಕುಲದಲ್ಲಿ 105 ಜನರಿಂದ ಬ್ಲಡ್ ಡೊನೇಟ್

    ಭಾಲ್ಕಿ: ಜೀವಂತವಿರುವಾಗ ದೇಹದಿಂದ ಮತ್ತೆ ಮತ್ತೆ ಕೊಡಬಹುದಾದ ಏಕೈಕ ವಸ್ತು ರಕ್ತ. ವಿಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಒಮ್ಮೆ ರಕ್ತದಾನ ಮಾಡುವುದರಿಂದ ನಾಲ್ವರ ಜೀವ ಉಳಿಸಬಹುದು ಎಂದು ದಂತ ವ್ಯದ್ಯ ಡಾ.ಅಮಿತ್ ಅಷ್ಟೂರೆ ತಿಳಿಸಿದರು.

    ಕರಡ್ಯಾಳ ಗುರುಕುಲದಲ್ಲಿ ಆಜಾದಿಕಾ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು, ರಕ್ತದಾನದಿಂದ ಹಳೆಯ ರಕ್ತ ದೇಹದ ಹೊರಹೋಗಿ ಹೊಸತನದ ಅನುಭವ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಅನುವಂಶಿಕವಾಗಿ ಬಂದಂಥ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ನರರೋಗ ಇತ್ಯಾದಿ ಕಾಯಿಲೆಗಳು ಶೇ.80 ಗುಣ ಹೊಂದಬಹುದಾಗಿದೆ ಎಂದರು.

    ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ರಕ್ತದಾನದ ಬಗ್ಗೆ ಋಣಾತ್ಮಕ ವಿಚಾರ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮುಕ್ತ ಮನಸ್ಸಿನಿಂದ ನೀಡಿ ಅಪಾಯದಲ್ಲಿರುವವರ ಪ್ರಾಣ ರಕ್ಷಣೆಗ ಮುಂದಾಗಬೇಕು ಎಂದು ತಿಳಿಹೇಳಿದರು.

    ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಇತರರಿದ್ದರು. 105 ಜನರು ರಕ್ತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts