More

    ಎಲ್​ಪಿಜಿ ಬಳಕೆದಾರರಿಗೆ ಹೊಸ ವರ್ಷದ ಆರಂಭದಲ್ಲೇ ದರ ಏರಿಕೆಯ ಬಿಸಿ: ತಿಂಗಳ ಅಂತರದಲ್ಲಿ 5ನೇ ಬಾರಿ ದರ ಹೆಚ್ಚಳ!

    ನವದೆಹಲಿ: ಜನವರಿ 1ರಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ ಸಬ್ಸಿಡಿ ರಹಿತ ಎಲ್​ಪಿಜಿ ಅಥವಾ ಅಡುಗೆ ಅನಿಲ ದರ ಏರಿಕೆಯಾಗಿದ್ದು, ಒಂದೇ ತಿಂಗಳ ಅಂತರದಲ್ಲಿ ಐದನೇ ಬಾರಿಗೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

    ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಸಿಲಿಂಡರ್​ಗೆ 19 ಮತ್ತು 19.5 ರೂ. ಏರಿಕೆ ಕಂಡಿದ್ದು, ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗೆ ದೆಹಲಿಯಲ್ಲಿ 714 ರೂ. ಮತ್ತು ಮುಂಬೈನಲ್ಲಿ 684.50 ರೂ. ಇರುವುದಾಗಿ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ತಿಳಿಸಿದೆ. ಆದರೆ, ಡಿಸೆಂಬರ್​ ತಿಂಗಳಿನಲ್ಲಿ ದೆಹಲಿಯಲ್ಲಿ 695 ಮತ್ತು ಮುಂಬೈನಲ್ಲಿ 665 ರೂ. ಇತ್ತು.

    ಕೋಲ್ಕತದಲ್ಲಿ 21.5 ರೂ ಏರಿಕೆ ಕಾಣುವ ಮೂಲಕ ಪ್ರತಿ ಸಿಲಿಂಡರ್​ಗೆ 747 ರೂ. ಮತ್ತು ಚೆನ್ನೈನಲ್ಲಿ 20 ರೂ. ಹೆಚ್ಚಳವಾಗುವುದರೊಂದಿಗೆ 734 ರೂ. ಆಗಿದೆ.

    ಸರಾಸರಿ ಅಂತಾರಾಷ್ಟ್ರೀಯ ಮಾನದಂಡದ ಎಲ್‌ಪಿಜಿ ಬೆಲೆಗಳಲ್ಲಿನ ಬದಲಾವಣೆ ಮತ್ತು ವಿದೇಶಿ ವಿನಿಮಯ ದರಗಳು ಸಬ್ಸಿಡಿಯ ಪ್ರಮಾಣವನ್ನು ನಿರ್ಧರಿಸುತ್ತವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts