More

    ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ; ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್

    ಬೆಂಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

    ಕೆಲ ವರ್ಷಗಳ ಹಿಂದೆ ಎಂ.ಪಿ.ಕುಮಾರಸ್ವಾಮಿ, ಹೂವಪ್ಪಗೌಡ ಎಂಬವರಿಂದ ಸಾಲ ಪಡೆದಿದ್ದು, ೧.೩೮ ಕೋಟಿ ರೂ. ಬಾಕಿ ಇತ್ತು. ಅದಕ್ಕೆ ಪ್ರತಿಯಾಗಿ ಶಾಸಕರು ಸಾಲ ಕಂತುಗಳೆಂಬಂತೆ ಎಂಟು ಚೆಕ್‌ಗಳನ್ನು ನೀಡಿದ್ದರು. ಎಲ್ಲ ಚೆಕ್‌ಗಳು ಬೌನ್ಸ್ ಆಗಿತ್ತು. ಅದನ್ನು ಪ್ರಶ್ನಿಸಿದ ಹೂವಪ್ಪಗೌಡ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಆರೋಪಿತರು ಶಾಸಕರಾದರಿಂದ ಜನಪ್ರತಿನಿಧಿ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಆಗಿತ್ತು.

    ಇದನ್ನೂ ಓದಿ: ನನ್ನ ‘ರಾಮ’ ಅಂತಃಕರಣ ಸ್ವರೂಪಿ, ನಿಮಗೆ ‘ರಾಮ’ ಚುನಾವಣಾ ಸರಕು; ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಉತ್ತರ

    ಈ ಹಿನ್ನೆಲೆಯಲ್ಲಿ ಫೆ.೧೩ರಂದು ವಿಚಾರಣೆ ನಡೆಸಿದ್ದ ಕೋರ್ಟ್ ಆರೋಪಿಗೆ ೩೦ ದಿನಗಳ ಒಳಗೆ ಸಾಲ ಮರು ಪಾವತಿ ಮಾಡಬೇಕು. ಇಲ್ಲವಾದಲ್ಲಿ ತಲಾ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು. ಆದರೆ, ಶಾಸಕರು ನಿಗದಿತ ಸಮಯದಲ್ಲಿ ಸಾಲ ಮರು ಪಾವತಿ ಮಾಡಿಲ್ಲ. ಹೀಗಾಗಿ ದೂರುದಾರ ಮತ್ತೆ ಕೋರ್ಟ್‌ಗೆ ಮನವಿ ಮಾಡಿದ್ದರು.

    ಮತ್ತೊಂದೆಡೆ ಸೆಷನ್ ಕೋರ್ಟ್‌ಗೆ ಶಾಸಕರು ಶಿಕ್ಷೆ ತೀರ್ಪು ಅಮಾನತುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಕೋರ್ಟ್ ದೂರುದಾರರ ಹೇಳಿಕೆ ಪಡೆಯಬೇಕಿದೆ. ಹೀಗಾಗಿ ದೂರುದಾರ ಹೂವಪ್ಪಗೌಡಗೆ ನೋಟಿಸ್ ನೀಡಿ, ಅರ್ಜಿ ಬಾಕಿ ಇಡುವಂತೆ ಸೂಚಿಸಿತ್ತು.

    ಈ ಮಧ್ಯೆ ದೂರುದಾರ ಮತ್ತೊಮ್ಮೆ ಸಲ್ಲಿಸಿದ್ದ ಮನವಿ ಮೇರೆಗೆ ಗುರುವಾರ ವಿಚಾರಣೆ ನಡೆಸಿದ ಕೋರ್ಟ್ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿಲ್ಲ. ಹೀಗಾಗಿ ಆರೋಪಿಯನ್ನು ಈ ಕೂಡಲೇ ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್‌ಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts