More

    ಕ್ರಿಮಿನಲ್ ಅಂದ್ಕೊಂಡು ಉದ್ಯಮಿಯ ಬಂಧನ; ಪತ್ನಿಯನ್ನು ಭಾರತಕ್ಕೆ ಕಳಿಸಿ ಪತಿಯನ್ನು ವಶಕ್ಕೆ ಪಡೆದ ಪೊಲೀಸ್..

    ನವದೆಹಲಿ: ಕ್ರಿಮಿನಲ್ ಎಂದು ಭಾವಿಸಿಕೊಂಡು ಉದ್ಯಮಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದ ಪ್ರಕರಣವೊಂದು ನಡೆದಿದೆ. ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

    ಭಾರತೀಯ ಉದ್ಯಮಿ ಪ್ರವೀಣ್​ಕುಮಾರ್ ಅವರನ್ನು ಪೊಲೀಸರು ತಾವು ಅರಸುತ್ತಿರುವ ಕ್ರಿಮಿನಲ್ ಎಂದುಕೊಂಡು ತಪ್ಪಾಗಿ ಭಾವಿಸಿ ವಶಕ್ಕೆ ಪಡೆದಿದ್ದು, ಜೊತೆಗಿದ್ದ ಅವರ ಪತ್ನಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ.

    ಈ ಸಂಬಂಧ ಉದ್ಯಮಿಯ ಕುಟುಂಬದವರು ಉತ್ತರಪ್ರದೇಶ ಸರ್ಕಾರ ಹಾಗೂ ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿಯ ನೆರವನ್ನು ಕೋರಿದ್ದಾರೆ. ಈ ಕುರಿತು ಉದ್ಯಮಿಯ ಸಹೋದರ, ಗ್ರೇಟರ್​ ನೋಯ್ಡಾದ ಹಬೀಬ್​ಪುರ್ ನಿವಾಸಿ ಅತುಲ್ ಶರ್ಮಾ ವಿವರ ನೀಡಿದ್ದಾರೆ.

    ನನ್ನ ಅಣ್ಣ ಪ್ರವೀಣ್​ ಕುಮಾರ್ ಮತ್ತು ಅತ್ತಿಗೆ ಉಷಾ ಶರ್ಮಾ ಸ್ಟೀಲ್ ಮತ್ತು ಸಿಮೆಂಟ್ ಉದ್ಯಮದಲ್ಲಿದ್ದು, ವಹಿವಾಟಿನಲ್ಲಿನ ಸಾಧನೆ ಸಲುವಾಗಿ ಅಭಿನಂದಿಸಲು ಅಂಬುಜಾ ಸಿಮೆಂಟ್​ ಕಂಪನಿ ಅವರಿಬ್ಬರನ್ನು ಸ್ವಿಜರ್ಲೆಂಡ್ ಪ್ರವಾಸಕ್ಕೆ ಕಳುಹಿಸಿತ್ತು. ಅದಕ್ಕಾಗಿ ಅವರು ಅ. 11ರಂದು ದೆಹಲಿಯಿಂದ ವಿಮಾನದಲ್ಲಿ ಹೊರಟು ಅಬುಧಾಬಿಯಲ್ಲಿ ವಿಮಾನನಿಲ್ದಾಣದಲ್ಲಿ ಇಳಿದು ಅಲ್ಲಿಂದ ಇನ್ನೊಂದು ವಿಮಾನದಲ್ಲಿ ತೆರಳುವವರಿದ್ದರು. ಆದರೆ ಅಲ್ಲಿ ಅಬುಧಾಬಿ ಪೊಲೀಸರು ಅಣ್ಣನನ್ನು ವಶಕ್ಕೆ ಪಡೆದಿದ್ದರು ಎಂದು ಅತುಲ್ ತಿಳಿಸಿದ್ದಾರೆ.

    ನನ್ನ ಅಣ್ಣ ಯಾವುದೇ ಅಪರಾಧದಲ್ಲಿ ತೊಡಗಿಲ್ಲ, ಆತನ ವಿರುದ್ಧ ಯಾವುದೇ ಕೇಸ್ ಬಾಕಿ ಇಲ್ಲ, ಆತ ಒಬ್ಬ ಸರಳ ಉದ್ಯಮಿ. ಆದರೆ ಅಬುಧಾಬಿ ಪೊಲೀಸರು ತಪ್ಪಾಗಿ ಭಾವಿಸಿ ವಶಕ್ಕೆ ಪಡೆದಿದ್ದಾರೆ ಎಂದು ಅತುಲ್ ಹೇಳಿದ್ದಾರೆ. ಆತಂಕದಲ್ಲಿರುವ ಉದ್ಯಮಿ ಕುಟುಂಬ ಅವರನ್ನು ವಾಪಸ್ ಕರೆಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. –ಏಜೆನ್ಸೀಸ್

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಯಕ್ಷಗಾನಕ್ಕೆ ಕಾಲಮಿತಿ: ಆ ಬದಲಾವಣೆ ಹೀಗಿದ್ದರೆ ಹೇಗೆ?

    ಫ್ರಿಡ್ಜ್​ ಒಳಗೆ ಕುಕ್ಕರ್​; ಶುರುವಾಯ್ತು ‘ಬಿಸಿಬಿಸಿ’ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts