More

    ‘ವಾಶ್ ರೂಂನಲ್ಲಿ ನೀರಿಲ್ಲ’: 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟ! ಬಿಕ್ಕಟ್ಟು ಉಲ್ಬಣ

    ಬೆಂಗಳೂರು: ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೆಲವು ನಗರಗಳಿಗೆ ನೀರು ಸರಬರಾಜಿನಲ್ಲಿ ತೊಡಕು ಉಂಟಾಗಿದೆ. ಇತ್ತೀಚೆಗಷ್ಟೇ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಐಟಿ ಉದ್ಯೋಗಿ ಶೌಚಗೃಹದಲ್ಲಿ ನೀರು ಬರುತ್ತಿಲ್ಲ ತೊಂದರೆಯಾಗುತ್ತಿದೆ ಎಂದು ತನ್ನ ಹಳ್ಳಿಗೆ ವಾಪಾಸ್ ಆಗುವ ಮೂಲಕ ಬೆಂಗಳೂರು ತೊರೆದರು. ಈಗ ಇದೇ ಸಮಸ್ಯೆ ದ್ವಿಗುಣಗೊಂಡಿದ್ದು, ನಗರ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಮಲಯಾಳಂ ಚಿತ್ರದ ಅಬ್ಬರ! ಕನ್ನಡ ಚಿತ್ರಗಳನ್ನು ನೋಡೋರೇ ಇಲ್ವೇ?

    ಇದೀಗ ಬೆಂಗಳೂರಿನ ನಿವಾಸಿಗಳ ನೀರಿನ ಬಿಕ್ಕಟ್ಟು ಈಗ ವಿದ್ಯಾರ್ಥಿಗಳಿಗೆ ತಟ್ಟಿದ್ದು, ಶಾಲೆಗಳ ಶೌಚಾಯಗಳಲ್ಲಿ ನೀರಿಲ್ಲ. ವಿದ್ಯಾರ್ಥಿಗಳು ವಾಶ್‌ರೂಮ್‌ಗಳಲ್ಲಿ ನೀರಿನ ಪೂರೈಕೆಯಿಲ್ಲ ಎಂದು ದೂರಿದ್ದಾರೆ. ರಾಜಧಾನಿಯಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆಯಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

    ಬೆಂಗಳೂರಿನಲ್ಲಿ ನೀರು ಪೂರೈಕೆ ಸಮಸ್ಯೆ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಸೋಮವಾರ ಸಭೆ ಕರೆದಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯನವರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮ್ಮ ನಿವಾಸದ ಬೋರ್‌ವೆಲ್ ಕೂಡ ಬತ್ತಿ ಹೋಗಿದೆ ಎಂದು ಹೇಳಿದರು. ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ ಮತ್ತು ನಿರ್ವಹಣೆಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ,(ಏಜೆನ್ಸೀಸ್).

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts