More

    Web Exclusive | ಅಂಗವಿಕಲರು-ವೃದ್ಧರಿಗಿಲ್ಲ ಮತಹಕ್ಕು; ಗ್ರಾಪಂ ಮತದಾನದಿಂದ ವಂಚಿತರು…

    | ಖಂಡೇನಹಳ್ಳಿ ಬಸವರಾಜ್ ಹಿರಿಯೂರು

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದ ಅಂಗವಿಕಲರು ಮತ್ತು 80 ವರ್ಷ ದಾಟಿದ ವೃದ್ಧರು ಅಂಚೆ ಮತದಾನದಿಂದ ವಂಚಿತರಾಗಲಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಶಿಫಾಸರು ಮೇರೆಗೆ ಕೇಂದ್ರ ಕಾನೂನು, ನ್ಯಾಯಿಕ ಸಚಿವಾಲಯ ಚುನಾವಣಾ ನಿಯಮ 1961ಕ್ಕೆ ತಿದ್ದುಪಡಿ ಮಾಡಿದ್ದು, ಇದರಲ್ಲಿ ವೃದ್ಧರು-ಅಂಗವಿಕಲರನ್ನು ಗೈರು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಅಂಗವಿಕಲರು-ವೃದ್ಧರು ಮತಗಟ್ಟೆ ತಲುಪಿ ಮತ ಚಲಾಯಿಸುವುದು ಕಷ್ಟ-ಸಾಧ್ಯ. ಹೀಗಾಗಿ ಅವರಿಗೆ ಅಂಚೆ ಮತಕ್ಕೆ ಅವಕಾಶ ನೀಡಲಾಗಿದೆ. ಇವರು ಚುನಾವಣಾ ಆಯೋಗದ 12 ಡಿ ಅಥವಾ 13 ಎ ಅರ್ಜಿ ಪಡೆದು, ಭರ್ತಿ ಮಾಡಿ, ಅಂಚೆ ಮತ ರವಾನಿಸಬಹುದು.

    ಕೇಂದ್ರ ಚುನಾವಣಾ ಆಯೋಗ 2020 ಜನವರಿಯಲ್ಲಿ ಅಂಗವಿಕಲರು-ವೃದ್ಧರಿಗೆ ಅಂಚೆ ಮತಕ್ಕೆ ಅವಕಾಶ ನೀಡಿ ಅಧಿಸೂಚನೆ ಹೊರಡಿಸಿತ್ತು. ಬಿಎಲ್​ಒಗಳು ಪ್ರತಿ ವಾರ್ಡ್​ಗೆ ಭೇಟಿ ನೀಡಿ, ಅಂಗವಿಕಲರು-ವೃದ್ಧರನ್ನು ಗುರುತಿಸಿ ಅವರಿಗೆ ಮತಗಟ್ಟೆಗೆ ಬರಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂಬ ನಿರ್ದೇಶನವಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10-12 ಸಾವಿರ ಅಂಗವಿಕಲರು-ವೃದ್ಧರಿದ್ದಾರೆ, ಬೆರಳೆಣಿಕೆ ಮತದಾರರು ಮಾತ್ರ ಮತಗಟ್ಟೆಗೆ ತೆರಳಿ (ವ್ಹೀಲ್​ಚೇರ್, ಇತರರ ಸಹಾಯದಿಂದ) ಮತ ಹಾಕುತ್ತಾರೆ. ಉಳಿದವರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.

    ಇದನ್ನೂ ಓದಿ: ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

    ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಇತರೆಡೆ ನಡೆದ ಚುನಾವಣೆಯಲ್ಲಿ ಅಂಗವಿಕಲರು-ವೃದ್ಧರಿಗೆ ಅಂಚೆ ಮತಕ್ಕೆ ಅವಕಾಶ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದರೂ ನಮ್ಮ ರಾಜ್ಯದಲ್ಲಿ ಜಾರಿಯಾಗಿಲ್ಲ. ಕರೊನಾ ಸಂಕಷ್ಟದ ಸಮಯದಲ್ಲಿ ಅಂಗವಿಕಲರು-ವೃದ್ಧರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಅಂಚೆ ಮತಕ್ಕೆ ಅವಕಾಶ ನೀಡಬೇಕಿದೆ.

    ಮಾಹಿತಿ ಕೊರತೆ: ಕಡ್ಡಾಯ ಮತದಾನದ ಬಗ್ಗೆ ಮತದಾರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಂಚೆ ಮತದಾನದ ಬಗ್ಗೆ ಅಧಿಕಾರಿಗಳು ಅಂಗವಿಕಲರು-ವೃದ್ಧರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಂಚೆ ಮತಕ್ಕೆ ಅಗತ್ಯ ವ್ಯವಸ್ಥೆ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂಬುದು ಅಂಗವಿಕಲ ಅಬೀದ್ ಹೊರಪೇಟೆ ಒತ್ತಾಸೆ.

    ಇದನ್ನೂ ಓದಿ: ಹೊಸ ವರ್ಷದಿಂದ ಫಾಸ್​ಟ್ಯಾಗ್​ ಕಡ್ಡಾಯ; ರದ್ದಾಗಲಿದೆ ನಗದು ಶುಲ್ಕ ಪಾವತಿ ಪಥ…

    ಚುನಾವಣೆ ಆಯೋಗಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಈ ಬಗ್ಗೆ ಸ್ಪಷ್ಟನೆ ಪಡೆಯಲಾಗಿದೆ. ಚುನಾವಣೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರೂ, ಜಿಲ್ಲೆಯಲ್ಲಿ ಪೋಸ್ಟಲ್ ಬ್ಯಾಲೆಟ್ ವಿತರಣೆಯಾಗುತ್ತಿಲ್ಲ. ಕೇಂದ್ರ ಚುನಾವಣೆ ಆಯೋಗ ಅಂಚೆ ಮತಕ್ಕೆ ಅವಕಾಶ ನೀಡಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಂಗವಿಕಲರು-ವೃದ್ಧರು ಮತದಾನದಿಂದ ವಂಚಿತರಾಗುತ್ತಿದ್ದಾರೆ.

    | ಅಬೀದ್ ಅಂಗವಿಕಲ, ಹೊರಪೇಟೆ, ಚಿತ್ರದುರ್ಗ

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತಗಟ್ಟೆಗೆ ಬರುವ ಅಂಗವಿಕಲರು ಮತ್ತು ವೃದ್ಧರಿಗೆ ನೆರವಾಗಲು ವ್ಹೀಲ್​ಚೇರ್ ವ್ಯವಸ್ಥೆ ಇದೆ. ಅಂಚೆ ಮತದ ಬಗ್ಗೆ ಮಾಹಿತಿ ಇಲ್ಲ.

    | ಕವಿತಾ ಎಸ್. ಮನ್ನಿಕೇರಿ ಜಿಲ್ಲಾಧಿಕಾರಿ, ಚಿತ್ರದುರ್ಗ

    ಚುನಾವಣೆ ಆಯೋಗದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಸಿಬ್ಬಂದಿ ಕೊರತೆಯಿಂದ ಕಷ್ಟ ಸಾಧ್ಯವಾಗುತ್ತಿದೆ. ಆಯೋಗ ನಿರ್ದೇಶನ ನೀಡಿದರೆ ಅಂಚೆ ಮತಕ್ಕೆ ಅವಕಾಶ ನೀಡಲಾಗುವುದು.

    | ಸುರೇಶ್ ಚುನಾವಣಾಧಿಕಾರಿ ಹಿರಿಯೂರು

    ಅಂಗವಿಕಲರು-ವೃದ್ಧರನ್ನು ಮತಗಟ್ಟೆಗೆ ಕರೆ ತರಲು ವಿಶೇಷ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಅಂಚೆ ಮತದ ಬಗ್ಗೆ ಮಾಹಿತಿ ಇಲ್ಲ.

    | ಶಿವಶಂಕರಪ್ಪ ತಹಸೀಲ್ದಾರ್ ಹಿರಿಯೂರು

    ಡ್ರಗ್ಸ್​ ಕೇಸ್​ನಲ್ಲಿ ನಟರನ್ನೇಕೆ ಬಂಧಿಸಿಲ್ಲ? ಅಸಮಾಧಾನ ಹೊರಹಾಕಿದ ಇಂದ್ರಜಿತ್​ ಲಂಕೇಶ್​

    ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಆರ್.ಅಶ್ವಿನ್..!

    ರೈತರ ಬ್ಯಾಂಕ್ ಖಾತೆಗೆ ಕೇಂದ್ರದಿಂದ ಮತ್ತೆ ಬರಲಿದೆ ಹಣ: ಯಾವಾಗ? ಇಲ್ಲಿದೆ ಮಾಹಿತಿ

    ರೈತರ ಆದಾಯ ಹೆಚ್ಚಿಸಲು ಕನ್ನಡದಲ್ಲಿ ‘ಇಂಡಿಯನ್ ಮನಿ ಡಾಟ್ ಕಾಂ’ ವಿಶೇಷ ಕೋರ್ಸ್ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts