More

    ಮಗನ ಪರೀಕ್ಷೆ ಹೆಸರಲ್ಲಿ ಜಾಮೀನು ಕೋರಿದ ಕವಿತಾ; ತೀರ್ಪು ಕಾಯ್ದಿರಿಸಿದ ಕೋರ್ಟ್‌, ಏಪ್ರಿಲ್ 9 ರವರೆಗೆ ನ್ಯಾಯಾಂಗ ಬಂಧನ

    ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡೆ ಕೆ. ಕವಿತಾ ಅವರನ್ನು ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದಾದ ಬಳಿಕ ಕವಿತಾ ಕೆ ಅವರು ಮಗನ ಪರೀಕ್ಷೆಯ ಹೆಸರಿನಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.
    ಏಪ್ರಿಲ್ 1 ರಂದು ಮಧ್ಯಂತರ ಜಾಮೀನಿನ ವಿಚಾರಣೆ ನಡೆಯಲಿದೆ. ಪ್ರಸ್ತುತ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಕವಿತಾ ಅವರನ್ನು ಬಂಧಿಸಲಾಗಿದೆ.

    ಮಾರ್ಚ್ 15 ರಂದು ಬಂಧನ
    ಮಾರ್ಚ್ 15 ರಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಹೈದರಾಬಾದ್‌ನಲ್ಲಿ ಬಿಆರ್​​ಎಸ್ ನಾಯಕಿ ಕೆ. ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿ, ವಿಚಾರಣೆಗಾಗಿ ದೆಹಲಿಗೆ ಕರೆತಂದಿತ್ತು. ಮಧ್ಯರಾತ್ರಿಯ ಸುಮಾರಿಗೆ ರಾಷ್ಟ್ರ ರಾಜಧಾನಿಯಲ್ಲಿರುವ ಏಜೆನ್ಸಿಯ ಕಚೇರಿಗೆ ಕರೆತರಲಾಯಿತು. ಬಂಧನದ ಸುತ್ತೋಲೆ ಪ್ರಕಾರ, ತೆಲಂಗಾಣ ವಿಧಾನ ಪರಿಷತ್ತಿನ ಸದಸ್ಯೆ 46 ವರ್ಷದ ಕವಿತಾ ಅವರನ್ನು ಕೇಂದ್ರ ತನಿಖಾ ಸಂಸ್ಥೆಯು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಸಂಜೆ 5.20 ಕ್ಕೆ ಬಂಧಿಸಿದೆ.

    ಆಪ್ ನಾಯಕರ ಜೊತೆ ಸೇರಿ ಕವಿತಾ ಷಡ್ಯಂತ್ರ
    ಇಡಿಯು ಕೆ. ಕವಿತಾ ಅವರು ಆಮ್ ಆದ್ಮಿ ಪಕ್ಷದ ನಾಯಕರ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ದೆಹಲಿ ಮದ್ಯ ನೀತಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಎಎಪಿ ನಾಯಕರಿಗೆ ಸುಮಾರು 100 ಕೋಟಿ ರೂ. ಆಫರ್​​​ ನೀಡಿದ್ದು, ಕವಿತಾ ದಕ್ಷಿಣದ ಲಾಬಿಯ ಭಾಗವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಇಡಿ ಇದುವರೆಗೆ ದೇಶಾದ್ಯಂತ 245 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಮನೀಶ್ ಸಿಸೋಡಿಯಾ, ಸಂಜಯ್ ಸಿನ್ಹಾ ಮತ್ತು ವಿಜಯ್ ನಾಯರ್ ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. 

    ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಆ ನಾಲ್ವರು ಇಡಿ ಅಧಿಕಾರಿಗಳು ಯಾರು ಗೊತ್ತಾ?

    ಲೋಕಸಭೆ ಚುನಾವಣೆ 2024: ಅಕಾಲಿದಳದೊಂದಿಗೆ ಮಾತುಕತೆ ಸಾಧ್ಯವಿಲ್ಲ, ಪಂಜಾಬ್‌ನಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts