More

    ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಆ ನಾಲ್ವರು ಇಡಿ ಅಧಿಕಾರಿಗಳು ಯಾರು ಗೊತ್ತಾ?

    ನವದೆಹಲಿ: ಆರು ತಿಂಗಳ ಸುದೀರ್ಘ ಹಗ್ಗ ಜಗ್ಗಾಟದ ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ದೆಹಲಿ ಅಬಕಾರಿ ನೀತಿ ಕೇಸ್ ನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ತನಿಖಾ ಸಂಸ್ಥೆ ದೆಹಲಿ ಸಿಎಂಗೆ 9 ಸಮನ್ಸ್ ಕಳುಹಿಸಿತ್ತು.        

    ಇಡಿ ಮೂಲಗಳ ಪ್ರಕಾರ ಅವರ ಬಂಧನಕ್ಕೂ ಮುನ್ನ ಕೇಜ್ರಿವಾಲ್ ಅವರನ್ನು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು, ಆದರೆ ಕೇಜ್ರಿವಾಲ್ ಸಂಪೂರ್ಣ ಅಬಕಾರಿ ನೀತಿ ಕೇಸ್ ಅನ್ನು ಪ್ರಚಾರ ಎಂದು ತಳ್ಳಿಹಾಕಿದರು. ಅಂತಿಮವಾಗಿ ತನಿಖಾ ಸಂಸ್ಥೆ ಅವರನ್ನು  ಬಂಧಿಸಿತು.     

    ತನಿಖಾ ಸಂಸ್ಥೆಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಹೈಕೋರ್ಟ್‌ನ ತೀರ್ಪಿನ ನಂತರ, ಇಡಿ ತಂಡವು ಸಕ್ರಿಯವಾಗಿದೆ ಮತ್ತು ವಿಚಾರಣೆಗಾಗಿ ಮುಖ್ಯಮಂತ್ರಿಗಳ ನಿವಾಸವನ್ನು ತಲುಪಿದೆ. ಈ ಇಡಿ ತಂಡವನ್ನು ತನಿಖಾ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಕಪಿಲ್ ರಾಜ್ ನೇತೃತ್ವ ವಹಿಸಿದ್ದರು. 

    ಅವರಲ್ಲದೆ, ಮೂವರು ಹಿರಿಯ ಅಧಿಕಾರಿಗಳನ್ನು ತಂಡದಲ್ಲಿ ಸೇರಿಸಲಾಗಿದ್ದು ಅವರು 2022 ರಿಂದ ದೆಹಲಿ ಅಬಕಾರಿ ನೀತಿ ಕೇಸ್ ನಲ್ಲಿ ತೊಡಗಿದ್ದಾರೆ. ಕೇಜ್ರಿವಾಲ್ ಹೊರತುಪಡಿಸಿ, ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಕೆ. ಕವಿತಾ ಅವರನ್ನು ಬಂಧಿಸಲಾಗಿದೆ.     

    ಆ ಅಧಿಕಾರಿಗಳು ಯಾರು?

     ಕಪಿಲ್ ರಾಜ್

    IRS ಅಧಿಕಾರಿ ಕಪಿಲ್ ರಾಜ್ ಪ್ರಸ್ತುತ ಜಾರಿ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಹುದ್ದೆಯಲ್ಲಿದ್ದಾರೆ. ಇವರು ರಾಂಚಿ ವಲಯದ ಉಸ್ತುವಾರಿಯನ್ನೂ ಹೊಂದಿದ್ದಾರೆ. ಹೇಮಂತ್ ಸೋರೆನ್ ಬಂಧನದ ಸಮಯದಲ್ಲಿ ರಾಜ್ ಬೆಳಕಿಗೆ ಬಂದರು. ಆ ಸಮಯದಲ್ಲಿ ಹೇಮಂತ್ ಸೊರೆನ್ ಅವರ ವಿರುದ್ಧ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು.  ರಾಜ್ ಅವರು ಪ್ರಸ್ತುತ ಹಲವಾರು ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ, ಅವುಗಳಲ್ಲಿ ಪ್ರಮುಖವಾದವು ಅಬಕಾರಿ ನೀತಿ ಹಗರಣ, ಜಾರ್ಖಂಡ್ ಭೂ ಹಗರಣ ಮತ್ತು ಶಾಸಕರ ಕುದುರೆ ವ್ಯಾಪಾರ. 

    ರಾಜ್, 2009 ರ ಬ್ಯಾಚ್ IRS (C&CE) ಅಧಿಕಾರಿ, ಸೆಪ್ಟೆಂಬರ್ 2023 ರಲ್ಲಿ ED ಯ ಹೆಚ್ಚುವರಿ ನಿರ್ದೇಶಕರಾದರು ಮತ್ತು ಪ್ರಸ್ತುತ ಒಂದು ವರ್ಷದ ಡೆಪ್ಯುಟೇಶನ್‌ನಲ್ಲಿದ್ದಾರೆ. ಜಾರ್ಖಂಡ್‌ಗಿಂತ ಮೊದಲು, ಕಪಿಲ್ ರಾಜ್ ಅವರನ್ನು ಬಂಗಾಳದಲ್ಲಿ ನಿಯೋಜಿಸಲಾಗಿತ್ತು ಮತ್ತು ಅನೇಕ ಪ್ರಕರಣಗಳ ತನಿಖೆ ನಡೆಸಿದ್ದರು. 

    ಇಡಿ ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ 8 ನೇ ಸಮನ್ಸ್ ಅನ್ನು ಬಿಟ್ಟುಬಿಟ್ಟಾಗ, ರಾಜ್ ಸ್ವತಃ ಸಕ್ರಿಯರಾದರು ಮತ್ತು ಮಾರ್ಚ್ 17 ರಂದು ಅವರು 9 ನೇ ಸಮನ್ಸ್ ಕಳುಹಿಸಿದ್ದಾರೆ. ಈ ಸಮನ್ಸ್‌ ವಿರುದ್ಧ ಕೇಜ್ರಿವಾಲ್‌ ಹೈಕೋರ್ಟ್‌ ಮೊರೆ ಹೋದರು, ಆದರೆ ಅಲ್ಲಿಂದ ಅವರಿಗೆ ಪರಿಹಾರ ಸಿಕ್ಕಿಲ್ಲ. 

    ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿದ ತಕ್ಷಣ, ಕಪಿಲ್ ರಾಜ್ ತನ್ನ ಇಡಿ ತಂಡದೊಂದಿಗೆ ದೆಹಲಿ ಮುಖ್ಯಮಂತ್ರಿ ನಿವಾಸವನ್ನು ತಲುಪಿದರು.

    ರಾಬಿನ್ ಗುಪ್ತಾ

    ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ರಾಬಿನ್ ಗುಪ್ತಾ ಕೂಡ ದೆಹಲಿ ಅಬಕಾರಿ ನೀತಿ ಹಗರಣದ ತನಿಖಾ ತಂಡದಲ್ಲಿದ್ದಾರೆ. 2010ರ ಬ್ಯಾಚ್‌ನ IRS ಅಧಿಕಾರಿ ಗುಪ್ತಾ ಅವರು ಇಡಿಗೆ ಸೇರುವ ಮೊದಲು ಜಿಎಸ್‌ಟಿಯ ಮುಂಬೈ ವಿಭಾಗದಲ್ಲಿದ್ದರು. 

    2019 ರಲ್ಲಿ, ಹಣಕಾಸು ಸಚಿವಾಲಯವು ಗುಪ್ತಾ ಅವರನ್ನು ಇಡಿಯಲ್ಲಿ ಪೋಸ್ಟ್ ಮಾಡಿತು. ಆಗ ಅವರ ಹುದ್ದೆ ಉಪನಿರ್ದೇಶಕ ಹುದ್ದೆಯಾಗಿತ್ತು.

    ಭಾನುಪ್ರಿಯಾ ಮೀನಾ

    ದೆಹಲಿ ಮದ್ಯ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ತಂಡದಲ್ಲಿ ಉಪ ನಿರ್ದೇಶಕಿ ಭಾನುಪ್ರಿಯಾ ಮೀನಾ ಕೂಡ ಇದ್ದಾರೆ. ಇತ್ತೀಚೆಗಷ್ಟೇ ಕೆಸಿಆರ್ ಪುತ್ರಿ ಕವಿತಾ ಬಂಧನವಾದಾಗ ಮೀನಾ ಗಮನ ಸೆಳೆದಿದ್ದರು. ಮೀನಾ 2015 ರ ಬ್ಯಾಚ್‌ನ IRS (C&CE) ಅಧಿಕಾರಿ. 2020 ರಲ್ಲಿ ಅವರನ್ನು ಉಪ ನಿರ್ದೇಶಕರನ್ನಾಗಿ ಮಾಡಲಾಯಿತು. 

    ಇವರು 2022 ರಿಂದ ದೆಹಲಿ ಮದ್ಯ ಹಗರಣದ ತನಿಖೆ ನಡೆಸುತ್ತಿದ್ದಾರೆ. ಸಂಸದ ಸಂಜಯ್ ಸಿಂಗ್ ಬಂಧನದಲ್ಲಿ ಇವರ ಹೆಸರೂ ಕೇಳಿ ಬಂದಿತ್ತು. ಆ ಸಮಯದಲ್ಲಿ, ಸಾಕ್ಷಿಗಳಿಂದ ಬಲವಂತವಾಗಿ ಹೇಳಿಕೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂಜಯ್ ಸಿಂಗ್ ಆರೋಪಿಸಿದ್ದರು. 

    ಜೋಗೇಂದ್ರ

    ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ, ಜೋಗೇಂದ್ರ ಅವರು ದೆಹಲಿ ಮದ್ಯ ಹಗರಣದ ತನಿಖಾ ಅಧಿಕಾರಿ (I.O.) ಆಗಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ತನಿಖೆ ನಡೆಯುತ್ತಿದೆ. ಜೋಗೇಂದ್ರ ಅವರು ಇಡಿ ಪರವಾಗಿ ಕೇಜ್ರಿವಾಲ್‌ಗೆ ಎಲ್ಲಾ ಸಮನ್ಸ್‌ಗಳನ್ನು ನೀಡಿದರು. 2020 ರಲ್ಲಿ, ಜೋಗೇಂದ್ರ ಅವರನ್ನು ಇಡಿಯಲ್ಲಿ ಸಹಾಯಕ ನಿರ್ದೇಶಕರನ್ನಾಗಿ ಮಾಡಲಾಯಿತು. ಅಂದಿನಿಂದ ಅವರನ್ನು ರಾಜಧಾನಿ ದೆಹಲಿಯಲ್ಲಿ ಮಾತ್ರ ನಿಯೋಜಿಸಲಾಗಿದೆ.

    2023 ರಲ್ಲಿ, ಎಎಪಿ ಸಂಸದ ಸಂಜಯ್ ಸಿಂಗ್ ಅವರು ಜೋಗೇಂದ್ರ ವಿರುದ್ಧ ಪ್ರಕರಣ ದಾಖಲಿಸಲು ಹಣಕಾಸು ಸಚಿವಾಲಯದ ಅನುಮೋದನೆಯನ್ನು ಕೋರಿದ್ದರು. ದೆಹಲಿ ಮದ್ಯ ಹಗರಣದಲ್ಲಿ ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ಸೇರಿಸಿ ನಂತರ ತೆಗೆದುಹಾಕಲಾಗಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಆದರೆ, ನಂತರ ಈ ಪ್ರಕರಣದಲ್ಲಿ ಇಡಿ ಕೂಡ ಅವರನ್ನು ಬಂಧಿಸಿತ್ತು.  

    ಲೋಕಸಭೆ ಚುನಾವಣೆ 2024: ಆಗ ಬಿಜೆಪಿಯ ರಾಮನಾಯಕ್ ಅವರನ್ನು ಸೋಲಿಸಿದ್ದ ನಟ ಗೋವಿಂದ ಈಗ ಯಾರಿಗೆ ಸವಾಲು ಹಾಕಲಿದ್ದಾರೆ?    

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts