More

    ಲೋಕಸಭೆ ಚುನಾವಣೆ 2024: ಅಕಾಲಿದಳದೊಂದಿಗೆ ಮಾತುಕತೆ ಸಾಧ್ಯವಿಲ್ಲ, ಪಂಜಾಬ್‌ನಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಬಿಜೆಪಿ

    ಪಂಜಾಬ್: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತುಕತೆ ಅಂತಿಮಗೊಂಡಿಲ್ಲ. ಈ ಕುರಿತು ಮಾಹಿತಿ ನೀಡಿರುವ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ರಾಜ್ಯದಲ್ಲಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

    ಆದರೆ, ಇಬ್ಬರ ನಡುವೆ ಮೈತ್ರಿ ಏರ್ಪಡದಿರುವ ಸಾಧ್ಯತೆಗಳು ಆಗಲೇ ಗೋಚರಿಸಿದ್ದವು. ಮೈತ್ರಿಗೆ ಸಂಬಂಧಿಸಿದಂತೆ ಅಕಾಲಿದಳ ಸಿದ್ಧಪಡಿಸಿದ್ದ ಪ್ರಸ್ತಾವದ ಹಲವು ಅಂಶಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆಯ ಮಾತುಕತೆಯೂ ಕೆಲ ದಿನಗಳ ಹಿಂದೆಯೇ ನಿಂತು ಹೋಗಿತ್ತು.

    ಮೈತ್ರಿಯ ಹಾದಿ ಮುಚ್ಚಿದ್ದೇಕೆ?
    ಅಕಾಲಿದಳದ ಕೋರ್ ಕಮಿಟಿ ತಂದಿದ್ದ ಪ್ರಸ್ತಾವನೆಯಿಂದ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಇದರಲ್ಲಿ ಎನ್‌ಎಸ್‌ಎ ರದ್ದುಪಡಿಸಿ, ಫಿರೋಜ್‌ಪುರ ಮತ್ತು ಅಟ್ಟಾರಿ ಗಡಿಯನ್ನು ತೆರೆಯುವಂತೆ ಕೋರಲಾಗಿತ್ತು. ಆದರೆ ಬಿಜೆಪಿ ಇದನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಈ ಎರಡೂ ಬೇಡಿಕೆಗಳು ರಾಷ್ಟ್ರೀಯತೆಗೆ ಸಂಬಂಧಿಸಿವೆ ಮತ್ತು ರಾಷ್ಟ್ರೀಯತೆ ಬಿಜೆಪಿಯ ಪ್ರಮುಖ ಅಸ್ತ್ರವಾಗಿದೆ.

    ಅಭ್ಯರ್ಥಿ ಆಯ್ಕೆಯಲ್ಲಿ ಬ್ಯುಸಿಯಾದ ಬಿಜೆಪಿ
    ಪಂಜಾಬ್‌ನಲ್ಲಿ 13 ಲೋಕಸಭಾ ಸ್ಥಾನಗಳಿವೆ. ಇದೀಗ ಮೈತ್ರಿಯ ಹಾದಿ ಮುಚ್ಚಿದ ಬೆನ್ನಲ್ಲೇ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಬಿಜೆಪಿ ರಾಷ್ಟ್ರಮಟ್ಟದಲ್ಲಿ ತನ್ನ ಅಜೆಂಡಾವನ್ನು ರೂಪಿಸುತ್ತದೆ. ನಾವು ರಾಷ್ಟ್ರೀಯತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಂಜಾಬ್ ಬಿಜೆಪಿಯ ಸಹ ಉಸ್ತುವಾರಿ ಡಾ.ನರೇಂದ್ರ ರೈನಾ ಹೇಳಿದ್ದಾರೆ.

    ಡೀಪ್‌ಫೇಕ್ ಲೋಕಸಭೆ ಚುನಾವಣೆಗೆ ದೊಡ್ಡ ಅಪಾಯ; ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts