More

    ಡೀಪ್‌ಫೇಕ್ ಲೋಕಸಭೆ ಚುನಾವಣೆಗೆ ದೊಡ್ಡ ಅಪಾಯ; ವರದಿಯಲ್ಲಿ ಆಘಾತಕಾರಿ ಅಂಶ ಬಹಿರಂಗ!

    ಮುಂಬೈ: ಎಕ್ಸ್‌ಪೋಸರ್ ಮ್ಯಾನೇಜ್‌ಮೆಂಟ್ ಕಂಪನಿ ‘ಟೆನೆಬಲ್’ ಡೀಪ್‌ಫೇಕ್‌ಗಳ ಮೂಲಕ ಹರಡುವ ತಪ್ಪು ಮಾಹಿತಿ ಹಾಗೂ ಕೃತಕ ಬುದ್ಧಿಮತ್ತೆಯೊಂದಿಗೆ ರಚಿಸಲಾದ ಫೇಕ್ ವಿಷಯವು ಭಾರತದಲ್ಲಿ ಮುಂಬರುವ ಚುನಾವಣೆಗಳಿಗೆ ದೊಡ್ಡ ಬೆದರಿಕೆಯಾಗಿದೆ ಎಂದು ವಿವರಿಸಿದೆ. ಇತ್ತೀಚಿನ ದಿನಗಳಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ಬಳಕೆ ಗಣನೀಯವಾಗಿ ಹೆಚ್ಚಿದೆ. ಇದುವರೆಗೆ ಹಲವು ರಾಜಕಾರಣಿಗಳ ಡೀಪ್‌ಫೇಕ್ ವಿಡಿಯೋಗಳು ಕೂಡ ಹೊರಬಿದ್ದಿವೆ.

    ಅಪಾಯದಲ್ಲಿದೆ 10 ದೇಶಗಳು
    ಕಂಪನಿಯ ಪ್ರಕಾರ, ಚುನಾವಣೆಯ ಮೊದಲು ಈ ಡೀಪ್‌ಫೇಕ್ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ ಆಪ್, ಎಕ್ಸ್ ಮತ್ತು ಇನ್ಸ್ಟಾಗ್ರಾಂನಂತಹ ಸಂದೇಶ ವೇದಿಕೆಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತದೆ. ಟೈಡಲ್ ಸೈಬರ್‌ನ ಇತ್ತೀಚಿನ ವರದಿಯ ಪ್ರಕಾರ, ಈ ವರ್ಷದ ಚುನಾವಣೆಯಲ್ಲಿ ಸುಮಾರು 10 ದೇಶಗಳು ಇಂತಹ ಉನ್ನತ ಮಟ್ಟದ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಭಾರತವೂ ಸೇರಿದೆ.
    ಇತ್ತೀಚೆಗೆ ಯುಎಸ್‌ನಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ನಾಗರಿಕರನ್ನು ದಾರಿತಪ್ಪಿಸಲು ಮಾಜಿ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಪ್ರಸ್ತುತ ಅಧ್ಯಕ್ಷ ಜೋ ಬೈಡೆನ್ ಅವರ ಡೀಪ್‌ಫೇಕ್ ವಿಡಿಯೋಗಳನ್ನು ರಚಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹಂಚಿಕೊಳ್ಳಲಾಗಿದೆ.

    ತಜ್ಞರ ಪ್ರಕಾರ, 2017 ರ ಕೊನೆಯಲ್ಲಿ 7,900 ಕ್ಕೂ ಹೆಚ್ಚು ವಿಡಿಯೋಗಳು ಆನ್‌ಲೈನ್‌ನಲ್ಲಿ ಔಟ್ ಆಗಿರುವುದಲ್ಲದೆ, ಡೀಪ್‌ಫೇಕ್ ವಿಷಯದ ಪ್ರಸರಣವು ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ 2019 ರ ಆರಂಭದ ವೇಳೆಗೆ, ಈ ಸಂಖ್ಯೆಯು 14,678 ಕ್ಕೆ ದ್ವಿಗುಣಗೊಂಡಿದೆ ಮತ್ತು ಇನ್ನೂ ಅಂತಹ ವಿಡಿಯೋಗಳು ನಿರಂತರವಾಗಿ ಹೆಚ್ಚುತ್ತಿವೆ. ಜೆನೆರಿಕ್ ಎಐ ಪರಿಕರಗಳ ಹೆಚ್ಚಳ ಮತ್ತು ಪ್ರಪಂಚದಾದ್ಯಂತ ಅವುಗಳ ಹೆಚ್ಚುತ್ತಿರುವ ಬಳಕೆಯು ಡೀಪ್‌ಫೇಕ್ ವಿಷಯಕ್ಕೆ ಕಾರಣವಾಗಿದೆ ಎಂದು ವರದಿಯು ಗಮನಿಸಿದೆ.

    ಸೂಚನೆ ನೀಡಿದ ಸರ್ಕಾರ
    ಇತ್ತೀಚೆಗೆ, ಭಾರತ ಸರ್ಕಾರವು ಎಕ್ಸ್​​ ಮತ್ತು ಮೆಟಾನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸೂಚನೆಗಳನ್ನು ನೀಡಿದೆ. ಎಐ ರಚಿತವಾದ ಡೀಪ್‌ಫೇಕ್ ವಿಷಯದ ಹರಡುವಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಇದಲ್ಲದೆ, ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಎಐ ರಚಿತವಾದ ಡೀಪ್‌ಫೇಕ್‌ಗಳನ್ನು ತೆಗೆದುಹಾಕಲು ಅಂತಹ ವೇದಿಕೆಗಳನ್ನು ಕೇಳಿದೆ.

    ಬೀಜಿಂಗ್‌ ಹಿಂದಿಕ್ಕಿ ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ಸ್ ರಾಜಧಾನಿಯಾದ ಕನಸಿನ ನಗರ ಮುಂಬೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts