More

    ಯೋಗಿ ಆದಿತ್ಯನಾಥ್​ ಅವರ ವೀಕೆಂಡ್​ ಪ್ಲ್ಯಾನ್​ ಯಾರಿಗೂ ಅರ್ಥವಾಗುತ್ತಿಲ್ಲ: ಪ್ರಿಯಾಂಕಾ ಗಾಂಧಿ

    ಲಖನೌ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸದಾ ವಾಗ್ದಾಳಿ ನಡೆಸುತ್ತಾರೆ. ಸಿಎಂ ಆದಿತ್ಯನಾಥ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಸಹ, ಅದರ ಬಗ್ಗೆ ಪ್ರಿಯಾಂಕಾ ಟೀಕೆ ಮಾಡುವುದು ಸಾಮಾನ್ಯ ಎಂಬಂತಾಗಿದೆ.

    ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾರದ ಕೊನೆಯಲ್ಲಿ (ವೀಕೆಂಡ್​) ಮೂರು ದಿನ ಲಾಕ್​ಡೌನ್​ ಘೋಷಣೆ ಮಾಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಷ್ಟು ಚಿಕ್ಕ ಅವಧಿಗೆ, ಅದೂ ವೀಕೆಂಡ್​​ನಲ್ಲಿಯೇ ಲಾಕ್​ಡೌನ್​ ಘೋಷಣೆ ಮಾಡುವುದರ ಹಿಂದಿನ ಲಾಜಿಕ್​ ಏನು ಎಂಬುದು ಯಾರಿಗೂ ಅರ್ಥ ಆಗುತ್ತಿಲ್ಲ. ಕರೊನಾ ವಿರುದ್ಧ ಹೋರಾಟದಲ್ಲಿ, ಸೋಂಕು ನಿಯಂತ್ರಣ ಮಾಡುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದನ್ನು ಮುಚ್ಚಿಡಲು ಹೀಗೆಲ್ಲ ಲಾಕ್​ಡೌನ್ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಜು.10ರಿಂದ ಮೂರು ದಿನಗಳ ಲಾಕ್​ಡೌನ್​ ಇತ್ತು. ಜು.10ರಂದು 1347, ಜುಲೈ 11ರಂದು 1403 ಮತ್ತು ಜುಲೈ 12ರಂದು 1388 ಕರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

    VIDEO: ಮಾನ್ಸೂನ್​​ನಲ್ಲಿ ಗಂಡುಕಪ್ಪೆಗಳು ಹಳದಿ ಬಣ್ಣಕ್ಕೆ ತಿರುಗುವುದರ ಹಿಂದಿದೆ ಒಂದು ಅಚ್ಚರಿಯ ಕಾರಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts