More

    VIDEO: ಮಾನ್ಸೂನ್​​ನಲ್ಲಿ ಗಂಡುಕಪ್ಪೆಗಳು ಹಳದಿ ಬಣ್ಣಕ್ಕೆ ತಿರುಗುವುದರ ಹಿಂದಿದೆ ಒಂದು ಅಚ್ಚರಿಯ ಕಾರಣ..!

    ಒಂದು ಸಣ್ಣ ಹೊಂಡದಲ್ಲಿ ನೂರಾರು ಹಳದಿ ಬಣ್ಣದ ಕಪ್ಪೆಗಳು ಕುಪ್ಪಳಿಸುತ್ತ, ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

    ಈ ವಿಡಿಯೋವನ್ನು ಮೊದಲು ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಅವರು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಈ ಬುಲ್​ಫ್ರಾಗ್​ಗಳ ವಿಡಿಯೋ ಮಧ್ಯಪ್ರದೇಶದ ನರಸಿಂಗ್​ಪುರ ಎಂಬಲ್ಲಿ ಸೆರೆಯಾಗಿದ್ದು ಪ್ರವೀಣ್​ ಅವರು ತಿಳಿಸಿದ್ದಾರೆ.

    ಆದರೆ ಇದರೊಂದಿಗೆ ಒಂದು ಆಸಕ್ತಿದಾಯಕ ವಿಚಾರವನ್ನೂ ತಿಳಿಸಿದ್ದಾರೆ. ಇಷ್ಟು ಗಾಢ ಹಳದಿ ಬಣ್ಣದ ಕಪ್ಪೆಗಳು, ಇಷ್ಟೊಂದು ಸಂಖ್ಯೆಯಲ್ಲಿ ನೀವು ಎಂದಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿರುವ ಐಎಫ್​ಎಸ್​ ಅಧಿಕಾರಿ, ಕಪ್ಪೆಗಳು ಮಾನ್ಸೂನ್​​ನಲ್ಲಿ ಹೀಗೆ ತಮ್ಮ ಬಣ್ಣ ಬದಲಿಸುತ್ತವೆ. ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವೆಲ್ಲ ಗಂಡು ಕಪ್ಪೆಗಳಾಗಿದ್ದು, ಸಂಗಾತಿ ಹೆಣ್ಣು ಕಪ್ಪೆಯನ್ನು ಆಕರ್ಷಿಸುವ ಸಲುವಾಗಿ ಹೀಗೆ ಹಳದಿ ಬಣ್ಣಕ್ಕೆ ತಮ್ಮ ಮೈಯನ್ನು ಬದಲಿಸಿಕೊಳ್ಳುತ್ತವೆ ಎಂದು ಮಾಹಿತಿ ನೀಡಿದ್ದಾರೆ. ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎಂದು ನೆಟ್ಟಿಗರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೋಂಕಿನ ಮಾದರಿ ಕೊಟ್ಟು ಅಡ್ಡಾಡುವಂತಿಲ್ಲ: ಏನಿದು ಹೊಸ ಆದೇಶ?

    ನಿಜಕ್ಕೂ ಬುಲ್​ಫ್ರಾಗ್​ಗಳು ಇಷ್ಟು ಹಳದಿ ಬಣ್ಣ ಹೊಂದಿರುವುದಿಲ್ಲ. ಇದು ಕಪ್ಪೆಗಳ ತಳಿ ಸಂವರ್ಧನಾ ಕಾಲ. ವಂಶ ವೃದ್ಧಿಗಾಗಿ ಹೆಣ್ಣುಕಪ್ಪೆಗಳನ್ನು ಆಕರ್ಷಿಸಲು ಹಳದಿ ಬಣ್ಣಕ್ಕೆ ತಿರುಗುತ್ತವೆ ಎಂದು ಐಎಫ್​​ಎಸ್​ ಅಧಿಕಾರಿ ಹೇಳಿದ್ದಾರೆ.

    ವಿಡಿಯೋ ತುಂಬ ವೈರಲ್​ ಆಗಿದ್ದು, ಈ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಹಲವು ತಿಳಿಸಿದ್ದಾರೆ. ನಾವು ನಿಜಕ್ಕೂ ಕಪ್ಪೆಯ ಬಣ್ಣವೇ ಹಾಗಿರುತ್ತದೆ ಎಂದುಕೊಂಡಿದ್ದೆವೂ ಎಂಬುದಾಗಿ ಹೇಳಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts