More

    ಪುತ್ರಿ ಐರಾ ನೋಡಲು ಟೀಂ ಇಂಡಿಯಾ ಆಟಗಾರ ಶಮಿ ಪರದಾಟ!

    ಮುಂಬೈ: ಭಾರತ ತಂಡದ ಹಾಗೂ ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​ ತಂಡದ ವೇಗದ ಬೌಲರ್​​ ಮೊಹಮ್ಮದ್ ಶಮಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಪುತ್ರಿ ಇರಾ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ:ವಕೀಲರು ಜೀನ್ಸ್​ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದಿಷ್ಟು?

    ಮೊಹಮ್ಮದ್‌ ಶಮಿ ಮತ್ತು ಹಸೀನ್‌ ಜಹಾನ್ ನಡುವಣ ರಂಪಾಟ ಕ್ರಿಕೆಟ್‌ಜಗತ್ತನ್ನು ತಲ್ಲಣಗೊಳಿಸಿತ್ತು. ಮೊಹಮ್ಮದ್‌ ಶಮಿ ವಿರುದ್ಧ ಮಾಜಿ ಪತ್ನಿ ಹಸೀನ್ ಜಹಾನ್‌ ಅನೈತಿಕ ಸಂಬಂಧಗಳ ಆರೋಪ ಹೊರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಷ್ಟೇ ಶಮಿ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೂಡ ಹೊರಿಸಿದ್ದರು.

    ಪುತ್ರಿ ಐರಾ ನೋಡಲು ಟೀಂ ಇಂಡಿಯಾ ಆಟಗಾರ ಶಮಿ ಪರದಾಟ!

    ತಮ್ಮ ಪುತ್ರಿ ಇರಾ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಮಗಳನ್ನು ನೋಡಲು, ಮಾತನಾಡಲು ಬಿಡುತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

    ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ 2014 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗಳಿಗೆ ಮತ್ತು ಐರಾ 2015 ರಲ್ಲಿ ಜನಿಸಿದರು. ನಂತರ ಇಬ್ಬರು ವೈಯಕ್ತಿಕ ಕಾರಣಗಳಿಂದ ಬೇರೆಯಾಗಿದ್ದರು.

    ಯಾರೂ ತನ್ನ ಕುಟುಂಬ ಮತ್ತು ಮಕ್ಕಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಕೆಲವು ಸನ್ನಿವೇಶಗಳು ನಮ್ಮ ಕೈಯಿಂದ ಹೊರಗುಳಿಯುತ್ತವೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶಮಿ ನೋವು ವ್ಯಕ್ತಪಡಿಸಿದ್ದಾರೆ.

    ಹಸಿನ್ ಜಹಾನ್ ಅವರು ನನಗೆ ಅವಕಾಶ ನೀಡಿದರೆ ಮಾತ್ರ ನಾನು ಐರಾ ಅವರೊಂದಿಗೆ ಮಾತನಾಡು ಸಾಧ್ಯವಾಗುತ್ತದೆ. ನನ್ನ ಮಗಳು ನನ್ನೊಂದಿಗೆ ಮಾತನಾಡಲು ಅವಳ ಮೇಲೆ ಅವಲಂಬಿತಳಾಗಿದ್ದಾಳೆ. ನಾನು ಅವನನ್ನು ಬಹಳ ದಿನಗಳಿಂದ ನೋಡಿಲ್ಲ. ಅವರು ಆರೋಗ್ಯವಾಗಿರಲು ಮತ್ತು ಎಲ್ಲದರಲ್ಲೂ ಯಶಸ್ವಿಯಾಗಲು ಬಯಸುತ್ತಾನೆ. ಹಸಿನ್ ಮತ್ತು ನನ್ನ ನಡುವಿನ ಜಗಳ ನಮಗೆ ಮಾತ್ರ ಸೀಮಿತವಾಗಲಿ. ನಮ್ಮ ನಡುವಿನ ಕಳಹದಲ್ಲಿ ಐರಾ ಬಲಿಯಾಗಬಾರದು. ನನ್ನ ಮಗಳು ಜೀವನದುದ್ದಕ್ಕೂ ಖುಷಿಯಾಗಿರಬೇಕು ಎಂದು ಭಾವಿಸುತ್ತೇನೆ ಎಂದರು.

    ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಬಳಿಕ ಶಮಿ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಗಾಗಿ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಆಡಿರಲಿಲ್ಲ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ವೇಗಿ ಲಭ್ಯರಿಲ್ಲ. ಪಾದದ ಗಾಯದ ಚಿಕಿತ್ಸೆಗಾಗಿ ಶಮಿ ಇಂಗ್ಲೆಂಡ್‌ನಲ್ಲಿದ್ದಾರೆ. ಮತ್ತೊಂದೆಡೆ, ರವೀಂದ್ರ ಜಡೇಜಾ ಅವರು ಉಳಿದ ಮೂರು ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳುವ ಅವಕಾಶವಿಲ್ಲ ಎಂದು ವರದಿಯಾಗಿದೆ.

    5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts