More

  ನಟಿ ರೋಜಾ ಮಗಳನ್ನು ನೋಡಿದ್ದೀರಾ? ತಾಯಿಯನ್ನೇ ಮೀರಿಸುವ ಸುಂದ್ರಿ ಈಕೆ…

  ಹೈದ್ರಾಬಾದ್​: ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ, ನಟಿ ಹಾಗೂ ರಾಜಕಾರಣಿ ಆಗಿರುವ ರೋಜಾ ಮುಂಬರುವ ಚುನಾವಣೆಗೆ ರೆಡಿಯಾಗಿದ್ದಾರೆ. ಬಿಡುವಿಲ್ಲದ ರಾಜಕಾರಣದ ನಡುವೆಯೂ ಕುಟುಂಬದ ಜತೆ ಕಾಲ ಕಳೆಯುವ ರೋಜಾ ತಮ್ಮ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುತ್ತಾರೆ. ಇದೀಗ ರೋಜಾ ಅವರ ಮುದ್ದು ಮಗಳ ಫೋಟೋ ವೈರಲ್​​ ಆಗಿದೆ.

  ನಟಿ ರೋಜಾ ಮಗಳನ್ನು ನೋಡಿದ್ದೀರಾ? ತಾಯಿಯನ್ನೇ ಮೀರಿಸುವ ಸುಂದ್ರಿ ಈಕೆ...

  ರೋಜಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರೋಜಾ ಟಾಲಿವುಡ್‌, ಸ್ಯಾಂಡಲ್​ವುಡ್​​ನ ಬಹುತೇಕ ಎಲ್ಲಾ ಹಿರಿಯ ನಾಯಕರ ಎದುರು ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ರೋಜಾ ಸೆಲ್ವಮಣಿ ಅವರ ನಿಜವಾದ ಹೆಸರು ಶ್ರೀಲತಾ ರೆಡ್ಡಿ. ರೋಜಾ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  21 ಆಗಸ್ಟ್ 2002 ರಂದು ರೋಜಾ RK ಸೆಲ್ವಮಣಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಕೃಷ್ಣ ಲೋಹಿತ್, ಪುತ್ರಿ ಅನ್ಶು ಮಲಿಕಾ. ರೋಜಾ ಮಗಳನ್ನು ನೋಡಿದ್ದೀರಾ? ರೋಜಾ ಮಗಳು ಹೊರಗೆ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ರೋಜಾ ಮಗಳು ಸೌಂದರ್ಯದಲ್ಲಿ ತನ್ನ ತಾಯಿಯನ್ನು ಮೀರಿಸುವಷ್ಟು ಸುಂದರವಾಗಿದ್ದಾಳೆ.

  ನಟಿ ರೋಜಾ ಮಗಳನ್ನು ನೋಡಿದ್ದೀರಾ? ತಾಯಿಯನ್ನೇ ಮೀರಿಸುವ ಸುಂದ್ರಿ ಈಕೆ...

  ರೋಜಾ ಅವರ ಪುತ್ರಿ ಅನ್ಶು ಮಲಿಕಾ ಸದ್ಯ ಓದುತ್ತಿದ್ದಾಳೆ. ವಿದ್ಯಾಭ್ಯಾಸ ಮುಗಿಸಿ ಚಿತ್ರರಂಗಕ್ಕೆ ಕಾಲಿಡುತ್ತಾರಾ ? ಅಥವಾ ಬೇರೆ ವೃತ್ತಿಯನ್ನು ಆರಿಸಿಕೊಳ್ಳುತ್ತಾರಾ..? ಅದನ್ನು ನೋಡಬೇಕು.

  ಅನ್ಶು ಮಲಿಕಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹೀರೋಯಿನ್ ಲುಕ್‌ಗೆ ಬದಲಾಗಿರುವ ಅನ್ಶು ಮಲಿಕಾ ಫೋಟೋಗಳಿಗೆ ನೆಟಿಜನ್‌ಗಳು ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

  ನಟಿ ರೋಜಾ ಮಗಳನ್ನು ನೋಡಿದ್ದೀರಾ? ತಾಯಿಯನ್ನೇ ಮೀರಿಸುವ ಸುಂದ್ರಿ ಈಕೆ...

  ಅಮ್ಮನಂತೆ ಸೌಂದರ್ಯವತಿಯಾಗಿರುವ ಅನ್ಶು ಮಲಿಕಾ ಎಲ್ಲಾ ಸ್ಟಾರ್‌ ನಟರ ಮಕ್ಕಳಿಗಿಂತ ಕೊಂಚ ವಿಭಿನ್ನವಾಗಿದ್ದಾರೆ. ಅನ್ಶು ಮಲಿಕಾ ಸಮಾಜ ಸೇವೆಯಂತಹ ಕಾರ್ಯಕ್ಕೆ ಮುಂದಾಗಿರುವುದು ಖುಷಿ ವಿಚಾರ. ಅದರೂ ರೋಜಾ ಅವರ ಅಭಿಮಾನಿಗಳು ಸಿನಿರಂಗದಲ್ಲಿ ಅಮ್ಮನ ಸ್ಥಾನವನ್ನು ಮಗಳಾದರೂ ತಂಬುತ್ತಾರಾ ಅಂತ ಕಾಯ್ದು ನೋಡುತ್ತಿದ್ದಾರೆ.

  1993ರಲ್ಲಿ ಗಡಿಬಿಡಿ ಗಂಡ ಚಿತ್ರದಿಂದ ಶುರುವಾದ ರೋಜಾ ಅವರ ಸ್ಯಾಂಡಲ್​ವುಡ್​ ಜರ್ನಿ, ಕಲಾವಿದ, ಪ್ರೇಮೋತ್ಸವ, ಗ್ರಾಮ ದೇವತೆ ಸೇರಿ ಒಟ್ಟು ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅವರ ಕೊನೇ ಸಿನಿಮಾ ಮೌರ್ಯ.

  ನಾನು ಅವನನ್ನು ಪ್ರೀತಿಸಿ ಮೋಸ ಹೋದೆ, ಕೆಲವು ನಟರು ನನ್ನ ಜತೆ ಕಂಫರ್ಟಬಲ್ ಆಗಲ್ಲ ಅಂತಾರೆಂದು ಕಣ್ಣೀರಿಟ್ಟ ವಿದ್ಯಾ ಬಾಲನ್

  ದಯವಿಟ್ಟು ಗಂಡ, ಹೆಂಡ್ತಿ ಒಟ್ಟಿಗೆ ಸ್ನಾನ ಮಾಡಿ; ನೀರು ಉಳಿಸಲು ಮೇಯರ್‌ ಕೊಟ್ರು ಈ ಸಲಹೆ

  ಮಾಜಿ ಪ್ರಿಯಕರನ ಹೆಸರಿನ ಟ್ಯಾಟೂವನ್ನು ಶಾಶ್ವತವಾಗಿ ತೆಗೆದ್ರಾ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts