More

    VIDEO| ನಂದಿನಿ ಜೊತೆ ಅಮೂಲ್​ ಸ್ಪರ್ಧಿಸುವ ಮಾತಿಲ್ಲ

    ಅಹಮದಬಾದ್​: ಕರ್ನಾಟಕದಲ್ಲಿ ನಂದಿನಿ ಬ್ರ್ಯಾಂಟ್​ ಜೊತೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಅಮುಲ್​ ಕಂಪನಿ ವ್ಯವಸ್ಥಾಪಕ ನಿರ್ದೇಶಕ(MD) ಜಯನ್​ ಮೆಹ್ತಾ ಹೇಳಿದ್ದಾರೆ.

    ಎರಡು ಬ್ರ್ಯಾಂಡ್​ಗಳ ಒಕ್ಕೂಟವೂ ರೈತರದ್ದೇ ಆಗಿದೆ. ಎರಡು ಬ್ರ್ಯಾಂಡ್​ಗಳ ನಡುವೆ ಸ್ಪರ್ದೆಯ ಮಾತಿಲ್ಲ ಎಂದು ನಂದಿನಿ vs ಅಮುಲ್​ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಆನ್​ಲೈನ್​ನಲ್ಲಿ ಮಾರಾಟ

    ಅಮೂಲ್​ ಕಂಪನಿಯ ಉತ್ಪನ್ನಗಳು ಪೂರ್ಣಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ. ಆನ್​ಲೈನ್​​ ಮೂಲಕ ನಾವು ಹಾಲು ಮತ್ತು ಮೊಸರನ್ನು ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಭಾರತದ ಮುಖ್ಯ ನ್ಯಾಯಮೂರ್ತಿ ಆಗಬೇಕೆಂಬ ಇಂಗಿತ; ಬಾಲಕಿಯ ಕನಸಿಗೆ ಪ್ರಧಾನಿಯ ಸಲಹೆ ಹೀಗಿದೆ…

    ಕಳೆದ 25 ವರ್ಷಗಳಿಂದ KMFಗೆ ಸೇರಿದ್ದ ಮೂರು ಘಟಕಗಳಲ್ಲಿ ನಾವು ಐಸ್​ಕ್ರೀಂ ತಯಾರಿಸುತ್ತಿದ್ದೇವೆ. ಕೋವಿಡ್​ ಸಮಯದಲ್ಲಿ ನಾವು KMFನಿಂದ 5 ಟನ್​ ಚೀಸ್​ ಖರೀದಿಸಿದ್ದೇವೆ. 2015-16ರಿಂದಲೇ ಉತ್ತರ ಕರ್ನಾಟಕ ಎರಡು ಜಿಲ್ಲೆಗಳಲ್ಲಿ ಅಮೂಲ್​​ ಹಾಲುಗಳ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸ್ಪರ್ದೆಯ ಪ್ರಶ್ನೆಯೇ ಇಲ್ಲ

    ನಂದಿನಿ ಹಾಲಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ನೀಡುವ ಕಾರಣ ಅದರ ಹಾಲು ಹಾಗೂ ಮೊಸರಿನ ದರವು ಅಗ್ಗವಾಗಿದೆ. ಅಮೂಲ್​ ಹಾಲಿನ ದರವು ಲೀಟರಿಗೆ 54 ರೂಪಾಯಿ ಇದ್ದರೆ ನಂದಿನಿ ಹಾಲಿನ ದರವು ಲೀಟರಿಗೆ 39 ರೂಪಾಯಿ ಇದೆ. ಈ ಕಾರಣಕ್ಕಾಗಿಯೇ ಉಭಯ ಬ್ರ್ಯಾಂಡ್​ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಮೂಲ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಯನ್​ ನೆಹ್ತಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts