More

    ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದ ಕಿಚ್ಚ ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್​ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು.

    ಇದೀಗ ದೂರಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಸುದೀಪ್ ಕೋರ್ಟ್ ಮೆಟ್ಟಿಲೇರಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. ದೂರಿಗೆ ಸಂಬಂಧ ಯಾವುದೇ ಸುದ್ದಿ ಪ್ರಸಾರ ಮಾಡದಂತೆ 21ನೇ ಸಿಸಿಹೆಚ್ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಬಗ್ಗೆ ಕಿಚ್ಚ ಸುದೀಪ್ ಪರ ವಕೀಲ ಚನ್ನಬಸಪ್ಪ ವಾದ ಮಂಡಿಸಿದ್ದರು.

    ಇದನ್ನೂ ಓದಿ: ಸಾಧಕರ ದಾರಿ | ಒಂಭತ್ತು ತಿಂಗಳ ತುಂಬು ಗರ್ಭಿಣಿ ಭಾರತದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ಕಂಡುಹಿಡಿದರು!

    ಬೆದರಿಕೆ ಪತ್ರದಲ್ಲಿ ಏನಿದೆ?

    ಸುದೀಪ್​ಗೆ ಬಂದ ಬೆದರಿಕೆ ಪತ್ರದಲ್ಲಿ, ಎಷ್ಟು ಜನ ಹೆಣ್ಣು ಮಕ್ಕಳ ಬಾಳು ಹಾಳು ಮಾಡಿತ್ತಿಯೋ, ಈ ಸಲ ಅದಕ್ಕೆಲ್ಲ ಒಂದು ಕೊನೇ ಮಾಡುತ್ತೇವೆ. ನಿನ್ನ ರಾಸಲೀಲೆ ವಿಡಿಯೋ, ನಿನ್ನ ಪಂಜಾಬಿ ಹುಡುಗಿ, ನಿನ್ನ ಚೆನ್ನೈ ಹುಡುಗಿ, ನಿನ್ನ ದುಬೈ, ನಿನ್ನ ರಾಜ ರಾಜೇಶ್ವರಿ ನಗರ ವಿಡಿಯೋ ಹಾಗೂ ನಿನ್ನ ಜೆಪಿ ನಗರ ವಿಡಿಯೋವನ್ನು ಮಹಾ ಸಾಚ ಅಂದುಕೊಂಡಿರುವ ನಿನ್ನ ಸ್ನೇಹಿತರ ಮುಂದೆ ಬೇಗ ಸೇರುತ್ತದೆ. ನೀನು ಕ್ರಿಕೆಟ್ ಆಡು. ನಾವು ನಿನ್ನನ್ನು ಹೆದರಿಸುತ್ತಿಲ್ಲ ಮತ್ತು ಬ್ಲಾಕ್​ಮೇಲ್ ಸಹ ಮಾಡುತ್ತಿಲ್ಲ. ಮೇಕಪ್ ಇಲ್ಲದೆ ಇರುವ ನಿನ್ನ ನಿಜವಾದ ಮುಖ ಜನರಿಗೆ ಗೊತ್ತಾಗಬೇಕು. ನಿರ್ಮಾಪಕರಿಗೆ ಹೊಟ್ಟೆ ಉರಿಸಿದರೆ ಸುಮ್ಮನೆ ಇರುತ್ತಾರೇನೋ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಜನ ಪ್ರೀತಿ, ಗೌರವ ತೋರಿಸಿದ್ದಾರೆ.. ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ; ಹೈಕಮಾಂಡ್​ಗೆ ಖಡಕ್ ಸಂದೇಶ ರವಾನಿಸಿದ ಜಗದೀಶ್ ಶೆಟ್ಟರ್

    ಜಾಕ್​ ಮಂಜು ನೀಡಿರುವ ದೂರಿನನ್ವಯ ಐಪಿಸಿ 504 (ಬೆದರಿಕೆ), 506 (ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದ್ದು, ಮುಂದೆ ಏನು ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts