More

  ವಕೀಲರ ಸಹಕಾರದಿಂದ ಉತ್ತಮ ಕಾರ್ಯ

  ಎನ್.ಆರ್.ಪುರ: ಇಲ್ಲಿನ ನ್ಯಾಯಾಲಯದ ವಕೀಲರು ಸಹಕಾರ ನೀಡಿದ್ದರಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ನ್ಯಾಯಾಧೀಶೆ ಭಾರತಿ.ಎಸ್.ರಾಯಣ್ಣನವರ್ ಹೇಳಿದರು.
  ಇಲ್ಲಿನ ನ್ಯಾಯಾಲಯದಿಂದ ಕುಮಟಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಜೆಎಂಎ್ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸೇರಿ ಮೂರು ತಾಲೂಕುಗಳ ನ್ಯಾಯಾಧೀಶರಾಗಿ ಕೆಲಸ ಮಾಡುವಾಗ ಇಲ್ಲಿನ ವಕೀಲರ ಸಹಕಾರ ಸಿಕ್ಕಿದೆ. ಜತೆಗೆ ಇಲ್ಲಿನ ಪರಿಸರವೂ ಇಷ್ಟವಾಗಿದೆ. ವಕೀಲರು ಹಾಗೂ ನ್ಯಾಯಾಧೀಶರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ ಎಂದರು.
  ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ ಕುಮಾರ್ ಮಾತನಾಡಿ, ವರ್ಗಾವಣೆಗೊಂಡ ನ್ಯಾಯಾಧೀಶೆ ಭಾರತಿ.ಎಸ್.ರಾಯಣ್ಣನವರ್ ಹಿರಿಯ ಹಾಗೂ ಕಿರಿಯ ವಕೀಲರನ್ನು ಸಮಾನರಾಗಿ ಕಾಣುತ್ತಿದ್ದರು. ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಒಟ್ಟಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.
  ಕಿರಿಯ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್, ವಕೀಲರ ಸಂಘದ ಕಾರ್ಯದರ್ಶಿ ದೇವೇಂದ್ರ, ಉಪಾಧ್ಯಕ್ಷ ಎಚ್.ಎ.ಸಾಜು, ಖಜಾಂಚಿ ಬಸವರಾಜು, ಹಿರಿಯ ವಕೀಲರಾದ ಕೆ.ಪಿ.ಸುರೇಶ್‌ಕುಮಾರ್, ಸುಮಾ, ಜಿ.ದಿವಾಕರ್, ಜಯಪ್ರಕಾಶ್, ಸುಜಯ್, ಚಂದ್ರಶೇಖರ್, ಪೌಲ್‌ಚೆರಿಯನ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts