More

    ಸಮವಸ್ತ್ರ ಬಟ್ಟೆಗಿಲ್ಲ ಬೇಡಿಕೆ, ನೇಕಾರರಿಗೆ ಕಷ್ಟ: ಕೆಎಚ್​ಡಿಸಿಗೆ ಸಿಕ್ಕಿಲ್ಲ ‘ವಿದ್ಯಾವಿಕಾಸ’; ಸರ್ಕಾರದಿಂದ ಬಾರದ 30 ಕೋಟಿ ರೂ. ಬಾಕಿ

    | ಡಿ.ಬಿ. ಕುಪ್ಪಸ್ತ ಗೊಳಸಂಗಿ (ವಿಜಯಪುರ)
    ರಾಜ್ಯದ ಸಹಸ್ರಾರು ನೇಕಾರರ ದುಡಿಮೆಗೆ ಆಸರೆಯಾಗಿದ್ದ ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಸಮವಸ್ತ್ರ ಬಟ್ಟೆಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ (ಕೆಎಚ್​ಡಿಸಿ) ಸರ್ಕಾರದಿಂದ ಇನ್ನೂ ಬೇಡಿಕೆ ಬಾರದಿರುವುದು ನೇಕಾರ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಿಂದ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ಕೈಮಗ್ಗ ನಿಗಮಕ್ಕೆ ಪ್ರತಿವರ್ಷ ಲಕ್ಷಾಂತರ ಮೀಟರ್ ಬಟ್ಟೆಗೆ ಬೇಡಿಕೆ ಸಲ್ಲಿಸುತ್ತ ಬಂದಿದೆ. ಅದೇ ನಂಬಿಕೆಯಿಂದ ನಿಗಮವೂ ಲಕ್ಷಾಂತರ ಮೀಟರ್ ಬಟ್ಟೆ ಉತ್ಪಾದನೆಗೆ ಅಗತ್ಯವಿರುವ ಕಚ್ಚಾನೂಲನ್ನು ಶೇಖರಿಸಿಟ್ಟುಕೊಂಡಿದೆ.

    ಆದರೆ, ಈ ವರ್ಷ ಶಿಕ್ಷಣ ಇಲಾಖೆಯಿಂದ ಇದುವರೆಗೂ ಯಾವುದೇ ಬೇಡಿಕೆ ಬಾರದ ಕಾರಣ ಕೆಎಚ್​ಡಿಸಿ ಕೂಡ ನೇಕಾರರಿಗೆ ಕಚ್ಚಾನೂಲು ಪೂರೈಕೆ ಮಾಡಿಲ್ಲ. ಅಲ್ಲದೇ, ಶಿಕ್ಷಣ ಇಲಾಖೆ ಕೆಎಚ್​ಡಿಸಿಗೆ ಇನ್ನೂ ಅಂದಾಜು 30 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ನೇಕಾರರಿಗೆ ಕಚ್ಚಾನೂಲು ಪೂರೈಸಿದರೆ ಅವರ ವೇತನ ಪಾವತಿ ಮಾಡಲು ನಿಗಮಕ್ಕೆ ಹಣದ ಕೊರತೆ ಕಾಡುತ್ತದೆ. ಹೀಗಾಗಿ ರಾಜ್ಯಾದ್ಯಂತ ನೇಕಾರರಿಗೆ ನಿಗಮವು ಕಚ್ಚಾನೂಲು ಪೂರೈಸಲು ಮೀನಮೇಷ ಎಣಿಸುತ್ತಿದೆ.

    ಕಳಪೆ ಬಟ್ಟೆ ಪೂರೈಕೆ ಹಿನ್ನೆಲೆ ತಪ್ಪು ಮಾಡಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಸಮವಸ್ತ್ರದ ಬಟ್ಟೆಗೆ ಕೈಮಗ್ಗ ನಿಗಮಕ್ಕೆ ಬೇಡಿಕೆ ಬಾರದಿದ್ದರೆ ನೇಕಾರ ಸಮುದಾಯದ ಮೇಲಾಗುವ ಪರಿಣಾಮವನ್ನೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಬಗ್ಗೆ ಸರ್ಕಾರ ಯೋಗ್ಯ ನಿರ್ಣಯ ತೆಗೆದುಕೊಳ್ಳುತ್ತದೆಂಬ ವಿಶ್ವಾಸವಿದೆ.
    | ಶಿವಾನಂದ ಪಾಟೀಲ, ಜವಳಿ ಸಚಿವ

    ನಿಗಮದ ಬಳಿ ನೇಕಾರರ ದುಡಿಮೆಗೆ ಪೂರೈಸಲು ಸಾಕಷ್ಟು ಕಚ್ಚಾ ನೂಲು ಇದೆ. ಆದರೆ, ಶಿಕ್ಷಣ ಇಲಾಖೆ ಸಮವಸ್ತ್ರದ ಬಟ್ಟೆಗೆ ಬೇಡಿಕೆ ನೀಡಿಲ್ಲ. ಜತೆಗೆ ಅಂದಾಜು 30 ಕೋಟಿ ರೂ. ಬಾಕಿ ಪಾವತಿಸದ ಕಾರಣ ತಾತ್ಕಾಲಿಕವಾಗಿ ನೇಕಾರರಿಗೆ ಕಚ್ಚಾ ನೂಲು ಪೂರೈಕೆ ಸಾಧ್ಯವಾಗುತ್ತಿಲ್ಲ.
    | ಯೋಗೇಶ, ಕೈಮಗ್ಗ ನಿಗಮದ ಜಂಟಿ ನಿರ್ದೇಶಕ

    ಬೇಡಿಕೆ ನಿಲ್ಲಿಸಲು ಕಾರಣ?

    ಕಳೆದ ವರ್ಷ ಕೈಮಗ್ಗ ನಿಗಮ ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ಶಿಕ್ಷಣ ಇಲಾಖೆಯ ಮೂರು ವಿಭಾಗಗಳಿಂದ ಕೋಟ್ಯಂತರ ಮೀಟರ್ ಬಟ್ಟೆ ಆರ್ಡರ್ ಪಡೆದಿತ್ತು. ಅದನ್ನು ಪೂರೈಸಲಾಗದೆ ನೆರೆಯ ಕೇರಳ, ತಮಿಳುನಾಡು ಮತ್ತು ಸೂರತ್​ನ ಖಾಸಗಿ ವಲಯಗಳಿಂದ 1.35 ಕೋಟಿ ಮೀಟರ್ ಬಟ್ಟೆ ಖರೀದಿಸಿ ಇಲಾಖೆಗೆ ಪೂರೈಸಿತ್ತು. ಆದರೆ ಈ ಪೈಕಿ ಲಕ್ಷಾಂತರ ಮೀಟರ್ ಬಟ್ಟೆ ಕಳಪೆಯಾಗಿತ್ತು ಎಂಬ ಕಾರಣದಿಂದ ಪ್ರಸ್ತುತ ಸಮವಸ್ತ್ರಕ್ಕೆ ಬಟ್ಟೆ ಬೇಡಿಕೆ ಸಲ್ಲಿಸಲಾಗಿಲ್ಲ ಎಂಬುದು ಶಿಕ್ಷಣ ಇಲಾಖೆಯ ಮೂಲಗಳ ಮಾಹಿತಿ. ಅಂತೆಯೇ, ಕಳಪೆ ಬಟ್ಟೆ ಪೂರೈಕೆ ಆರೋಪದಡಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದೂ ಗಮನಾರ್ಹ. ಅಧಿಕಾರಿ ವರ್ಗ ಮಾಡಿದ ತಪ್ಪಿನಿಂದ ವಿದ್ಯಾವಿಕಾಸ ಯೋಜನೆಯ ಬಟ್ಟೆ ಕಾಯಕವನ್ನೇ ನಂಬಿದ ರಾಜ್ಯದ 3,500 ಬಡ ನೇಕಾರರು ಬೀದಿಗೆ ಬೀಳುವಂತಾಗಿದೆ.

    ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್

    ರೋಗಿಗಳು ಇರುವಾಗಲೇ ಕಳಚಿಬಿತ್ತು ಛಾವಣಿಯ ಮೇಲುಹಾಸು; ಬನಾರಸ್ ಹಿಂದೂ ಯುನಿವರ್ಸಿಟಿ ಟ್ರಾಮಾ ಸೆಂಟರ್​ನಲ್ಲಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts