More

    ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಜಾಮೀನಿಲ್ಲ

    ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​​ನ​ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್​ಡಿಪಿಎಸ್​​ ಕೋರ್ಟ್​ ವಜಾಗೊಳಿಸಿದೆ. ಆರ್ಯನ್​ರೊಂದಿಗೆ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಅರ್ಬಾಜ್​ ಮರ್ಚೆಂಟ್ ಮತ್ತು ಮುನ್​ಮುನ್​ ಧಮೇಚ ಅವರಿಗೂ ಜಾಮೀನು ಲಭ್ಯವಾಗಿಲ್ಲ.

    ಅಕ್ಟೋಬರ್​ 2 ನೇ ತಾರೀಕು ಕಾರ್ಡೆಲಿಯ ಕ್ರೂಸ್​ ಶಿಪ್​ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಆರ್ಯನ್​ ಖಾನ್ಅನ್ನು ವಿಚಾರಣೆ ನಡೆಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳು ​ಅ.3 ರಂದು ಅವನನ್ನು ಬಂಧಿಸಿದ್ದರು. 23 ವರ್ಷ ವಯಸ್ಸಿನ ಆರ್ಯನ್ ಖಾನ್​ನೊಂದಿಗೆ ಇತರ 9 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

    ಇದನ್ನೂ ಓದಿ: ಐವನ್‌ ಡಿʼಸೋಜ ಮನೆಗೆ ಬಜರಂಗದಳ ಮುತ್ತಿಗೆ ಯತ್ನ

    ಕಳೆದ 12 ದಿನಗಳಿಂದ ಮುಂಬೈನ ಅರ್ಥರ್​ ರಸ್ತೆ ಜೈಲಿನಲ್ಲಿರುವ ಖಾನ್​ಗೆ ಈ ಮೊದಲು ಮ್ಯಾಜಿಸ್ಟ್ರೇಟ್​ ಕೋರ್ಟ್​ನಿಂದ ಜಾಮೀನು ಲಭಿಸಿರಲಿಲ್ಲ. ನಂತರ ವಿಶೇಷ ಸೆಷನ್ಸ್​ ಕೋರ್ಟ್​ನಲ್ಲಿ ಸಲ್ಲಿಕೆಯಾದ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾದಿರಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ.ವಿ.ಪಾಟೀಲ್​ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.

    ಸದ್ಯಕ್ಕೆ ಜೈಲಿನಲ್ಲೇ ಕಾಲ ಕಳೆಯಬೇಕಾಗಿರುವ ಆರ್ಯನ್​ ಖಾನ್​ರ ವಕೀಲರಿಗೆ ಎನ್​ಡಿಪಿಎಸ್​ ಕೋರ್ಟ್​ನ ಈ ಆದೇಶದ ವಿರುದ್ಧ ಹೈಕೋರ್ಟ್​ಗೆ ಅಪೀಲು ಸಲ್ಲಿಸುವ ಅವಕಾಶವಿದೆ. (ಏಜೆನ್ಸೀಸ್)

    ಪಾರಿವಾಳ ಬಳಸಿ ಡುಪ್ಲೆಕ್ಸ್ ಮನೆ ದೋಚುತ್ತಿದ್ದ ಚಾಲಾಕಿ ಕಳ್ಳ ಅಂದರ್

    ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts