More

    ಅAದಿನ ಲಾಠಿ ಏಟು ಇಂದಿನ ಸೇಡಿಗೆ ಕಾರಣ

    ತ್ಯಾಗರ್ತಿ: ಅಂದು ಪೊಲೀಸ್ ವೇಷದಲ್ಲಿ ರೌಡಿಗಳು ಕರಸೇವಕರ ಮೇಲೆ ಮಾಡಿದ ಹ¯್ಲೆ ಅವರ ಲಾಠಿ ಏಟಿನ ನೆನಪು ಇನ್ನೂ ಮಾಸಿಲ್ಲ. ಆದರೆ ಇಂದು ಆ ಏಟು ರಾಮಮಂದಿರ ನಿರ್ಮಾಣಕ್ಕಾಗಿ ಎಂದು ನೆನಪಿಸಿಕೊಂಡಾಗ ನೋವು ಮರೆಯಲು ಸಾಧ್ಯವಾಯಿತು. ಮಂದಿರ ಲೋಕಾರ್ಪಣೆಯಾದಾಗ ಸೇಡು ತೀರಿಸಿಕೊಂಡ ಸಮಾಧಾನವಾಯಿತು ಎಂದು ಕರಸೇವಕ ವಿನಾಯಕ ಜೋಶಿ ತಿಳಿಸಿದರು.
    ನೀಚಡಿ ಶ್ರೀ ಲಕ್ಷಿ÷್ಮÃನಾರಾಯಣ ಸಭಾ ಭವನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ೧೯೯೦ರಲ್ಲಿ ಪಾಲ್ಗೊಂಡಿದ್ದ ಕರಸೇವಕರಿಗೆ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರಸೇವೆಯ ಆ ದಿನಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಅಂದು ಬದುಕಿ ಬಂದಿದ್ದೇ ಶ್ರೀರಾಮನ ಕೃಪೆಯಿಂದ. ಅಂದು ಅನೇಕ ಕರಸೇವಕರು ಬಲಿದಾನ ನೀಡಿದ್ದಾರೆ. ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸೂಚನೆ ಮೇರೆಗೆ ತ್ಯಾಗರ್ತಿ ಭಾಗದಲ್ಲಿ ಸಂಘದ ಚಟುವಟಿಕೆಗಳ್ಳಲು ವಿವಿಧ ಹಳ್ಳಿಗಳಲ್ಲಿ ಸಂಚರಿಸಿದಾಗ ತಾಯಂದಿರು ನೀಡಿದ ಆತಿಥ್ಯ ಮರೆಯಲು ಸಾಧ್ಯವಿಲ್ಲ ಎಂದರು.
    ಎನ್.ಟಿ.ಮಹಾಬಲೇಶ್ವರ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಉಳಿಯಲು ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.
    ಕರಸೇವಕರ ಬಂಧನ ವಿರೋಽಸಿ ಸಾಗರದಲ್ಲಿ ಪ್ರತಿಭಟನೆ ನಡೆಸಿದ್ದ ಕಾರಣಕ್ಕೆ ಬಂಧಕ್ಕೊಳಗಾಗಿ 15 ದಿನ ಬಳ್ಳಾರಿ ಜೈಲು ವಾಸ ಅನುಭವಿಸಿದ ಶ್ರೀನಾಥ ನಾಡಿಗ್, ಗಜಾನನ ಭಟ್, ಸುಭಾಷ್ ಬಾಪಟ್, ಎನ್.ಟಿ. ದೀಪಕ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊAಡರು.
    ಕರಸೇವಕರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ದೇವಾಲಯ ಆವರಣದಲ್ಲಿ ದೀಪೋತ್ಸವ ನಡೆಸಲಾಯಿತು. ಸಂಘದ ಪ್ರಮುಖ ಎನ್.ಪಿ.ಸುಬ್ರಹ್ಮಣ್ಯ, ಗ್ರಾಮದ ಹಿರಿಯರಾದ ಎನ್.ಎ.ಸತ್ಯನಾರಾಯಣ, ಪ್ರಮುಖರಾದ ರಾಮಕೃಷ್ಣ ಬಾಪಟ್, ಬಿ.ಜಿ.ಅನಂತ ಮೂರ್ತಿ, ಪ್ರಶಾಂತ್ ಜೋಯ್ಸï, ಎನ್.ಟಿ.ಯೋಗೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts