More

    ಸೆಮಿಫೈನಲ್‌ಗೇರಿದ ಜೋಕೊವಿಕ್; ಇಂದು ರಾಫೆಲ್ ನಡಾಲ್ ವಿರುದ್ಧ ಮುಖಾಮುಖಿ

    ಪ್ಯಾರಿಸ್: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಹೋರಾಟಯುತ ಗೆಲುವಿನೊಂದಿಗೆ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, 13 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ವಿರುದ್ಧ ಶುಕ್ರವಾರದ ಮುಖಾಮುಖಿಗೆ ಸಜ್ಜಾಗಿದ್ದಾರೆ.

    ಸೆರ್ಬಿಯಾ ತಾರೆ ಜೋಕೊವಿಕ್ ಬುಧವಾರ ರಾತ್ರಿ ಕೋರ್ಟ್ ಫಿಲಿಪ್ ಚಾಟ್ರಿಯರ್‌ನಲ್ಲಿ ನಡೆದ ಕ್ವಾರ್ಟರ್​ಫೈನಲ್‌ನಲ್ಲಿ ವಿಶ್ವ ನಂ. 8 ಇಟಲಿಯ ಮ್ಯಾಟೆಯೊ ಬೆರೆಟಿನಿ ವಿರುದ್ಧ 6-3, 6-2, 6-7, 7-5ರಿಂದ ಗೆಲುವು ದಾಖಲಿಸಿದರು. ಈ ಮೂಲಕ ರೊಲ್ಯಾಂಡ್ ಗ್ಯಾರಸ್‌ನಲ್ಲಿ 11ನೇ ಬಾರಿ ಉಪಾಂತ್ಯಕ್ಕೇರಿದ ಸಾಧನೆ ಮಾಡಿದರು.

    ಕಳೆದ ವರ್ಷ ಫೈನಲ್‌ನಲ್ಲಿ ಕಾದಾಡಿದ್ದ ನಡಾಲ್-ಜೋಕೊವಿಕ್ ಈ ಬಾರಿ ಸೆಮೀಸ್‌ನಲ್ಲೇ ಸೆಣಸಲಿದ್ದಾರೆ. ಇದು ಇವರಿಬ್ಬರ ವೃತ್ತಿಜೀವನದ 58ನೇ ಮುಖಾಮುಖಿ ಆಗಿರಲಿದೆ. ಒಟ್ಟಾರೆ ಕಾದಾಟದಲ್ಲಿ ಜೋಕೋ 29-28 ಜಯ-ಸೋಲಿನ ಮುನ್ನಡೆ ಹೊಂದಿದ್ದರೂ, ಕ್ಲೇಕೋರ್ಟ್‌ನಲ್ಲಿ ನಡಾಲ್ 19-7 ಮುನ್ನಡೆ ಹೊಂದಿದ್ದಾರೆ. ಅಲ್ಲದೆ, ನಡಾಲ್ ಫ್ರೆಂಚ್ ಓಪನ್‌ನಲ್ಲಿ 7-1 ಮತ್ತು ಗ್ರಾಂಡ್ ಸ್ಲಾಂನಲ್ಲಿ 10-6 ಮುನ್ನಡೆ ಹೊಂದಿದ್ದಾರೆ.

    ಪಂದ್ಯದ ನಡುವೆ ಕರೊನಾ ಕಫ್ರ್ಯೂ ಜಾರಿ: 5 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಜೋಕೋ-ಬೆರೆಟಿನಿ ಎಂಟರ ಘಟ್ಟದ ಪಂದ್ಯ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭಗೊಂಡು, 3 ಗಂಟೆ 28 ನಿಮಿಷಗಳ ಕಾಲ ಸಾಗಿತು. ಆದರೆ ಈ ನಡುವೆ 11 ಗಂಟೆಗೆ ಕರೊನಾ ಕಫ್ರ್ಯು ಜಾರಿಯಾದ ಕಾರಣ ಪಂದ್ಯದ ನಡುವೆಯೇ ಸ್ಟೇಡಿಯಂ ಖಾಲಿಗೊಳಿಸಲಾಯಿತು. ಇದರಿಂದ ಪಂದ್ಯಕ್ಕೆ 22 ನಿಮಿಷಗಳ ಕಾಲ ಅಡಚಣೆಯೂ ಎದುರಾಯಿತು. ಪಂದ್ಯದ ಮುಗಿಯುವ ಮುನ್ನವೇ ಸ್ಟೇಡಿಯಂನಿಂದ ಹೊರಹಾಕಿದ್ದಕ್ಕೆ ಪ್ರೇಕ್ಷಕರಿಂದ ಆಕ್ರೋಶವೂ ವ್ಯಕ್ತವಾಗಿದೆ.

    ಇಂದು ಪುರುಷರ ಸಿಂಗಲ್ಸ್ ಸೆಮಿಫೈನಲ್​:
    ಅಲೆಕ್ಸಾಂಡರ್​ ಜ್ವೆರೇವ್​-ಸ್ಟೆಫಾನೋಸ್ ಸಿಸಿಪಾಸ್​

    ರಾಫೆಲ್​ ನಡಾಲ್​-ನೊವಾಕ್​ ಜೋಕೊವಿಕ್​

    ಆರಂಭ: ಸಂಜೆ 6.30

    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್​​ ನೆಟ್​ವರ್ಕ್​

    ಶ್ರೀಲಂಕಾ ಪ್ರವಾಸಕ್ಕೆ ಧವನ್ ನಾಯಕ, ಕರ್ನಾಟಕದ ಮೂವರಿಗೆ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts