More

    ಖರ್ಗೆಗೆ ಲೀಗಲ್​ ನೋಟಿಸ್​ ಕೊಟ್ಟ ಗಡ್ಕರಿ: ಕಾರಣ ಇಲ್ಲಿದೆ ನೋಡಿ..

    ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಾಂಗ್ರೆಸ್​ನ ಅಧಿಕೃತ ‘x’ಎಕ್ಸ್ ಖಾತೆಯಲ್ಲಿ ತನ್ನ ಬಗ್ಗೆ ಆಕ್ಷೇಪಾರ್ಹ ವಿಷಯವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿ ಗಡ್ಕರಿ ಈ ನೋಟಿಸ್ ಕಳುಹಿಸಿದ್ದಾರೆ.

    ನೋಟಿಸ್​ನಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಲಿಖಿತವಾಗಿ ಕ್ಷಮೆಯಾಚಿಸುವಂತೆ ಕೇಳಲಾಗಿದೆ.

    ಇದನ್ನೂ ಓದಿ: ತಮಿಳು ಕಲಿಯುತ್ತಿರುವ ಕನ್ನಡದ ನಟಿ! ಕಾರಣ ಹೀಗಿದೆ ನೋಡಿ..

    ಸಂದರ್ಶನವೊಂದರಲ್ಲಿ ಗಡ್ಕರಿ ಹೇಳಿದ್ದ ವಿಷಯಗಳನ್ನು ಮರೆಮಾಚಿ, ಅದನ್ನು ತಿರುಚಿ ನಂತರ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಅಸಲಿ ವಿಷಯಗಳನ್ನು ಮರೆಮಾಚಲಾಗಿದೆ ಎಂದು ಗಡ್ಕರಿ ವಕೀಲ ಹೇಳಿದ್ದಾರೆ.

    ಮೊದಲು ನನ್ನ ಸಂದರ್ಶನದ ತಿಉಚಿದ ವೀಡಿಯೊವನ್ನು ಎಕ್ಸ್ ನಿಂದ ತೆಗೆದುಹಾರಬೇಕು. ನಂತರ ಮೂರು ದಿನಗಳಲ್ಲಿ ಲಿಖಿತ ಕ್ಷಮೆಯಾಚಿಸಬೇಕು ಎಂದು ನೋಟಿಸ್​ನಲ್ಲಿ ಒತ್ತಾಯಿಸಿದ್ದಾರೆ. ನೋಟಿಸ್ ಸ್ವೀಕರಿಸಿದ 24 ಗಂಟೆಗಳಲ್ಲಿ ಈ ರೀತಿ ಮಾಡದಿದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಇದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

    ವೀಡಿಯೊದಲ್ಲಿದೆ?: ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೋ ನಿತಿನ್ ಗಡ್ಕರಿ ಸಂದರ್ಶನವಾಗಿದ್ದು, ವಾಸ್ತವವಾಗಿ ಅವರು ದೇಶದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾಗಿದೆ. ಅವರ ಸಂದರ್ಶನದ ಒಂದು ಸಣ್ಣ ಭಾಗವನ್ನು ಕಾಂಗ್ರೆಸ್​ ಪಕ್ಷ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಾಂಗ್ರೆಸ್, ‘ಇಂದು ಹಳ್ಳಿ, ಕಾರ್ಮಿಕರು ಮತ್ತು ರೈತರು ದುಃಖಿತರಾಗಿದ್ದಾರೆ. ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಉತ್ತಮ ಆಸ್ಪತ್ರೆಗಳಿಲ್ಲ, ಉತ್ತಮ ಶಾಲೆಗಳಿಲ್ಲ ಎಂದು ಮೋದಿ ಸರ್ಕಾರ ಮತ್ತು ಸಚಿವ ಗಡ್ಕರಿ ವಿರುದ್ಧ ಆರೋಪಿಸಿ ಪೋಸ್ಟ್​ ಮಾಡಿದೆ.

    ರಿಷಬ್ ಶೆಟ್ಟಿ, ಜೂ.ಎನ್​ಟಿಆರ್​, ಪ್ರಶಾಂತ್ ನೀಲ್ ಒಂದೇ ಕಡೆ.. ಏನಿದು ಕಥೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts