More

    ಶೂಟೌಟ್ ಗಾಳಿ ಸುದ್ದಿಯಿಂದಾಗಿ ಭಾರಿ ಸಂಚಲನ ಮೂಡಿಸಿದ್ದ ಕುಸ್ತಿಪಟು ನಿಶಾ ದಹಿಯಾಗೆ ಸ್ವರ್ಣ ಪದಕ

    ಗೋಂಡ (ಉತ್ತರ ಪ್ರದೇಶ): ಅಪರಿಚಿತರಿಂದ ಶೂಟೌಟ್‌ಗೆ ಒಳಗಾಗಿದ್ದಾರೆ ಎಂದು ಬುಧವಾರ ಸಾಕಷ್ಟು ಸುದ್ದಿಯಾಗಿದ್ದ ಕುಸ್ತಿಪಟು ನಿಶಾ ದಹಿಯಾ, ಗುರುವಾರ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮಹಿಳೆಯರ 65 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. 23 ವಯೋಮಿತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ನಿಶಾ ಫೈನಲ್ ಹಣಾಹಣಿಯಲ್ಲಿ ಪಂಜಾಬ್‌ನ ಜಸ್‌ಪ್ರೀತ್ ಕೌರ್ ಅವರನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಮಣಿಸಿದರು. ರೈಲ್ವೇಸ್ ಪ್ರತಿನಿಧಿಸಿದ 23 ವರ್ಷದ ನಿಶಾ, ಸೆಮಿಫೈನಲ್ ಹಣಾಹಣಿಯಲ್ಲಿ ಹರಿಯಾಣದ ಪ್ರಿಯಾಂಕಾ ಅವರನ್ನು ಮಣಿಸಿದ್ದರು. ‘ಟೂರ್ನಿಯಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ನಿನ್ನೆಯ ಸುದ್ದಿಯಿಂದ ಕೊಂಚ ಒತ್ತಡಕ್ಕೆ ಒಳಗಾಗಿದ್ದೆ, ನಾನು ನಿದ್ದೆ ಕೂಡ ಸರಿಯಾಗಿ ಮಾಡಿರಲಿಲ್ಲ. ಈ ಘಟನೆಯಿಂದಾಗಿ ಕೊಂಚ ಶಕ್ತಿ ಕೂಡ ಕುಂದಿತ್ತು’ ಎಂದು ರಾಷ್ಟ್ರೀಯ ಟೂರ್ನಿಯಲ್ಲಿ 3ನೇ ಸ್ವರ್ಣ ಪದಕ ಜಯಿಸಿದ ಬಳಿಕ ನಿಶಾ ಪ್ರತಿಕ್ರಿಯಿಸಿದ್ದಾರೆ.

    ರಾಷ್ಟ್ರೀಯ ಮಟ್ಟದ ಯುವ ರೆಸ್ಲರ್ ನಿಶಾ ಅವರನ್ನು ಹರಿಯಾಣದ ಸೋನೆಪತ್‌ನಲ್ಲಿ ಅಪರಿಚಿತರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಬುಧವಾರ ಸಂಜೆ ವದಂತಿ ಹರಡಿತ್ತು. ರಾಷ್ಟ್ರೀಯ ವಾಹಿನಿಗಳು, ವೆಬ್‌ಸೈಟ್‌ಗಳು ಈ ಕುರಿತು ಸುದ್ದಿ ಮಾಡಿದ್ದವು. ಬಳಿಕ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ನಿಶಾ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ಕೈಗೊಳ್ಳುತ್ತಿದ್ದು, ಎಲ್ಲಾ ಗಾಳಿ ಸುದ್ದಿ, ತಾವು ಸುರಕ್ಷಿತವಾಗಿರುವುದಾಗಿ ವಿಡಿಯೋ ಪ್ರಕಟಿಸಿದ್ದರು.

    ಹರಿಯಾಣ ಪೊಲೀಸರ ಪ್ರಕಾರ, ಸುಶೀಲ್ ಕುಮಾರ್ ಅಕಾಡೆಮಿ ಬಳಿ ಶೂಟೌಟ್ ಆಗಿದ್ದು ನಿಜವಾಗಿದೆ. ಆದರೆ, ನಿಶಾ ದಹಿಯಾ ಹಾಗೂ ಆಕೆಯ ಸಹೋದರ ಮೃತಪಟ್ಟಿರುವುದು ನಿಜವಾಗಿದೆ. ಆದರೆ, ಹೆಸರಿನ ವ್ಯತ್ಸಾಸದಿಂದಾಗಿ ಈ ಗೊಂದಲ ಏರ್ಪಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts