More

    ಜೈಲು ವಾಸದ ಅವಧಿಯಲ್ಲಿ ನಿರ್ಭಯಾ ಅಪರಾಧಿಗಳು ಸಂಪಾದಿಸಿದ ಹಣವೆಷ್ಟು? ಎಷ್ಟು ಬಾರಿ ಜೈಲು ನಿಯಮ ಉಲ್ಲಂಘಿಸಿದರು?

    ನವದೆಹಲಿ: ನಿರ್ಭಯಾ ಗ್ಯಾಂಗ್​ರೇಪ್​ ಮತ್ತು ಕೊಲೆ ಅಪರಾಧಿಗಳನ್ನು ಇಂದು ಬೆಳಗ್ಗೆ 5.30ರಲ್ಲಿ ಗಲ್ಲಿಗೇರಿಸಲಾಗಿದೆ. ಈ ಮೂಲಕ 2012ರಲ್ಲಿ ನಡೆದ ಕರಾಳ ಘಟನೆಗೆ ಏಳು ವರ್ಷದ ಸುದೀರ್ಘ ಕಾನೂನು ಹೊರಾಟ ನಡುವೆ ತಡವಾದರೂ ಅಂತಿಮವಾಗಿ ನ್ಯಾಯ ದೊರಕಿದ್ದು, ಇದು ಅತ್ಯಾಚಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

    ನಾಲ್ವರು ಆರೋಪಿಗಳನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಹ್ಯಾಂಗ್​ಮನ್​ ಪವನ್​ ಜಲ್ಲಾದ್​ ನೇಣಿಗೇರಿಸಿದ್ದಾರೆ. ಇದರ ನಡುವೆ ನಿರ್ಭಯಾ ಅಪರಾಧಿಗಳ ಜೈಲು ಜೀವನದ ಕೆಲವು ಆಸಕ್ತಿ ವಿಷಯಗಳು ಬಹಿರಂಗವಾಗಿವೆ.

    ನಾಲ್ವರು ಅಪರಾಧಿಗಳಲ್ಲಿ ಮೂವರು ತಮ್ಮ ಜೈಲು ವಾಸದ ಅವಧಿಯಲ್ಲಿ ಒಟ್ಟು 1,37,000 ರೂ. ಸಂಪಾದನೆ ಮಾಡಿದ್ದಾರೆ. ಕಳೆದ 7 ವರ್ಷಗಳ ಜೈಲು ವಾಸದ ಅವಧಿಯಲ್ಲಿ ಮುಕೇಶ್​ ಯಾವುದೇ ಕೂಲಿ ಕೆಲಸವನ್ನು ಆಯ್ದುಕೊಂಡಿಲ್ಲ. ಇದನ್ನು ಹೊರತುಪಡಿಸಿದರೆ, ಅಕ್ಷಯ್​ 69,000 ರೂ., ಪವನ್​ 29,000 ರೂ. ಮತ್ತು ವಿನಯ್​ 39,000 ರೂ. ಸಂಪಾದಿಸಿದ್ದಾರೆ ಎಂದು ಜೈಲು ಮೂಲಗಳು ಮಾಹಿತಿ ನೀಡಿವೆ.

    ಇದಲ್ಲದೆ, ನಾಲ್ವರು ಅಪರಾಧಿಗಳು ಒಟ್ಟು 23 ಬಾರಿ ಜೈಲು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅಪರಾಧಿ ವಿನಯ್​ ಜೈಲು ನಿಯಮ ಉಲ್ಲಂಘನೆ ಅಡಿಯಲ್ಲಿ 11 ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅಕ್ಷಯ್​ ಒಂದು ಬಾರಿಯಾದರೆ, ಮುಕೇಶ್​ 3 ಹಾಗೂ ಪವನ್​ 8 ಬಾರಿ ಜೈಲು ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜೈಲಿನಲ್ಲಿರುವಾಗಲೇ 2016ರಲ್ಲಿ ಮುಕೇಶ್​, ಪವನ್​ ಮತ್ತು ಅಕ್ಷಯ್​ 10ನೇ ತರಗತಿಗೆ ಪ್ರವೇಶ ಪಡೆದು ಎಸ್​ಎಸ್​ಎಲ್​ಸಿ ಪರೀಕ್ಷೆ ಎದುರಿಸಿದ್ದರೂ ಉತ್ತೀರ್ಣರಾಗಿಲ್ಲ. ವಿನಯ್​ 2015ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದರೂ ಅದನ್ನು ಪೂರ್ಣಗೊಳಿಸಿಲ್ಲ. (ಏಜೆನ್ಸೀಸ್​)

    ನೇಣಿಗೇರುವ ಮುನ್ನ ಇಡೀ ರಾತ್ರಿ ನಾಲ್ವರು ಅಪರಾಧಿಗಳ ವರ್ತನೆ ಹೇಗಿತ್ತು? ಅಧಿಕಾರಿಗಳು ಹೇಳಿದ್ದೇನು?

    ಅಪರಾಧಿಗಳನ್ನು ನೇಣಿಗೇರಿಸಿದ ಬೆನ್ನಲ್ಲೇ ನಿರ್ಭಯಾ ತಂದೆ ನೀಡಿದ ಪ್ರತಿಕ್ರಿಯೆ ಇದಾಗಿತ್ತು…

    ನಿರ್ಭಯಾ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು: ತಾಯಿ ಆಶಾದೇವಿ ಅವರ ಮೊದಲ ಪ್ರತಿಕ್ರಿಯೆ ಇದಾಗಿತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts