More

    ಸೂಪರ್​ಸ್ಟಾರ್ ನಿರಂಜನ್ : ಚಿಕ್ಕಪ್ಪ ಉಪೇಂದ್ರ ಅವರ ಸಿನಿಮಾ ಶೀರ್ಷಿಕೆ ಮರುಬಳಕೆ

    ಬೆಂಗಳೂರು: 2002ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಉಪೇಂದ್ರ ನಾಯಕತ್ವದಲ್ಲಿ ‘ಸೂಪರ್​ಸ್ಟಾರ್’ ಸಿನಿಮಾ ತೆರೆಕಂಡಿತ್ತು. ಇದೀಗ ಅದೇ ಶೀರ್ಷಿಕೆಯ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರ ಅಣ್ಣನ ಮಗ, ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸ್ವತಃ ಉಪೇಂದ್ರ ಮತ್ತು ಪ್ರಿಯಾಂಕಾ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಜತೆಗೆ ‘ಸೆಕೆಂಡ್ ಹ್ಯಾಂಡ್’ ಚಿತ್ರದ ಮೂಲಕ ನಿರಂಜನ್ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದರು.

    ಇದನ್ನೂ ಓದಿ: ಚಿಕ್ಕಪ್ಪ-ಚಿಕ್ಕಮ್ಮ ಬಿಡುಗಡೆ ಮಾಡ್ತಾರೆ ನಿರಂಜನ್​ ಹೊಸ ಚಿತ್ರದ ಟೈಟಲ್​

    ಆ ಸಿನಿಮಾ ನಿರಂಜನ್​ಗೆ ಅಷ್ಟೊಂದು ಯಶಸ್ಸು ತಂದುಕೊಟ್ಟಿರಲಿಲ್ಲ. ಬಳಿಕ ‘ಅದ್ಧೂರಿ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತಾದರೂ, ಸದ್ಯಕ್ಕೆ ಆ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ್ಲ ಈ ನಡುವೆಯೇ ರಮೇಶ್ ವೆಂಕಟೇಶ್ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾ ಸೆಟ್ಟೇರಿದೆ. ಜು. 18ರಿಂದಲೇ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಸಹ ಮಾಡಿಕೊಳ್ಳಲಾಗುತ್ತಿದೆ.

    ರಗಡ್ ಅವತಾರದಲ್ಲಿ ನಿರಂಜನ್ ಎದುರಾಗಿದ್ದು, ಪಕ್ಕಾ ಲವ್ ಮತ್ತು ಆಕ್ಷನ್ ಸಿನಿಮಾ ಇದಾಗಿರಲಿದೆ ಎಂಬ ಸುಳಿವು ನೀಡಿದೆ ಚಿತ್ರದ ಫಸ್ಟ್ ಲುಕ್. ನಾಯಕಿ ಯಾರು? ಇನ್ನುಳಿದ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಿದೆಯಂತೆ ಚಿತ್ರತಂಡ.

    ಏಳು ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾದ ‘ಗೂಗ್ಲಿ’ ಟೈಟಲ್​ ಟೀಸರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts