More

    ‘ಗೋದ್ರಾ’ಗೆ ನಾಲ್ಕನೇ ಮ್ಯೂಸಿಕ್ ಡೈರೆಕ್ಟರ್ ಎಂಟ್ರಿ..!

    ಬೆಂಗಳೂರು: ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ‘ಗೋದ್ರಾ’ ಸಿನಿಮಾ ತಂಡಕ್ಕೆ ಈಗ ಮತ್ತೊಬ್ಬ ಸಂಗೀತ ನಿರ್ದೇಶಕರ ಆಗಮನವಾಗಿದೆ. ಇದಕ್ಕೂ ಮುನ್ನ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರಿದ್ದರು. ಈಗ ಕೆಪಿ ಆಗಮನದ ಮೂಲಕ ಒಂದೇ ಚಿತ್ರಕ್ಕೆ ನಾಲ್ವರು ಸಂಗೀತ ನಿರ್ದೇಶಕರು ಕೆಲಸ ಮಾಡಿದಂತಾಗಿದೆ. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಕೆಪಿ (ಕೃಷ್ಣ ಪ್ರಸಾದ್), ಇದೀಗ ‘ಗೋದ್ರಾ’ ಮೂಲಕ ಸ್ಯಾಂಡಲ್​ವುಡ್​ಗೂ ಪ್ರವೇಶ ಮಾಡಿದ್ದಾರೆ. ಆದರೆ, ಅವರು ಈ ಸಿನಿಮಾಗೆ ಬರೀ ಹಿನ್ನೆಲೆ ಸಂಗೀತವನ್ನಷ್ಟೇ ಸಂಯೋಜನೆ ಮಾಡುತ್ತಿದ್ದಾರೆ. ಮಿಕ್ಕಂತೆ ಜೂಡಾ ಸ್ಯಾಂಡಿ ಮತ್ತು ಟೋನಿ ಜೋಸೆಫ್ ತಲಾ ಎರಡು, ನವೀನ್ ಸಜ್ಜು ಒಂದು ಹಾಡಿಗೆ ರಾಗ ಸಂಯೋಜಿಸಿದ್ದಾರೆ.

    ಚಿತ್ರಕ್ಕೆ ನಾಲ್ಕು ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿರುವ ಕುರಿತು ಮಾತನಾಡುವ ನಿರ್ದೇಶಕ ನಂದೀಶ್, ‘ಆರಂಭದಲ್ಲಿ ಜೂಡಾ ಒಬ್ಬರಿಂದಲೇ ಸಂಗೀತ ಸಂಯೋಜಿಸುವುದು ಎಂಬ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಮಾಸ್ ಹಾಡೊಂದಕ್ಕೆ ನವೀನ್ ಅವರಿಂದ ಮ್ಯೂಸಿಕ್ ಮಾಡಿಸಲಾಯಿತು. ಅಲ್ಲದೆ ಟೋನಿ ಜೋಸೆಫ್ ಒಂದಷ್ಟು ಟ್ಯೂನ್ಸ್ ಕೇಳಿಸಿದರು. ಆ ಪೈಕಿ ಎರಡು ಟ್ಯೂನ್ ಇಷ್ಟವಾಯಿತು. ಇದೊಂದು ಪೊಲಿಟಿಕಲ್-ಥ್ರಿಲ್ಲರ್ ಡ್ರಾಮಾ ಆಗಿರುವುದರಿಂದ ಒಂದು ರೀತಿಯಲ್ಲಿ ರಾ ಎನಿಸುವಂಥ ಹಿನ್ನೆಲೆ ಸಂಗೀತ ಸೂಕ್ತ ಅನಿಸಿತು. ಅದಕ್ಕಾಗಿ ತಮಿಳು ಚಿತ್ರರಂಗದಿಂದ ಕೆಪಿ ಅವರನ್ನು ಕರೆ ತರಲಾಗಿದೆ’ ಎನ್ನುತ್ತಾರೆ.

    ‘ಜೇಕಬ್ ಫಿಲಮ್ಸ್ ಹಾಗೂ ‘ಲೀಡರ್ ಫಿಲಮ್ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ವಿುಸಿರುವ ಈ ಸಿನಿಮಾಗೆ ನಿರ್ದೇಶಕ ಕೆ.ಎಸ್. ನಂದೀಶ್ ಆಕ್ಷನ್-ಕಟ್ ಹೇಳಿದ್ದಾರೆ. ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ಜತೆಗೆ ಸೋನು ಗೌಡ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿ ಸಿದ್ದಾರೆ.

    ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಸದ್ಯ ರೀ-ರೆಕಾರ್ಡಿಂಗ್ ನಡೆಯುತ್ತಿದ್ದು, ಒಂದು ವಾರದಲ್ಲಿ ಅದೂ ಮುಗಿಯಲಿದೆ. ಏಪ್ರಿಲ್​ನಲ್ಲಿ ಆಡಿಯೋ ಲಾಂಚ್ ಆಗಲಿದ್ದು, ಮೇನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ.

    | ಕೆ.ಎಸ್.ನಂದೀಶ್ ನಿರ್ದೇಶಕ

    ಬಂಡಾಯದ ರಕ್ಷೆ ಹೆಮ್ಮೆ ಮತ್ತು ಖುಷಿ: ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷ್ ಮನದಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts