More

    ಬಂಡಾಯದ ರಕ್ಷೆ ಹೆಮ್ಮೆ ಮತ್ತು ಖುಷಿ: ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷ್ ಮನದಾಳ

    ಬೆಂಗಳೂರು: ‘ಕಥೆ ಕೇಳಿದ ತಕ್ಷಣ ಈ ಚಿತ್ರವನ್ನು ಒಪ್ಪಿಕೊಂಡೆ …’ ‘ಪುಟ್ಟಗೌರಿ ಮದುವೆ’ ಖ್ಯಾತಿಯ ರಕ್ಷ್, ‘ನರಗುಂದ ಬಂಡಾಯ’ ಮೂಲಕ ಹೀರೋ ಆಗಿದ್ದು ಗೊತ್ತೇ ಇದೆ. ಈಗ ಆ ಚಿತ್ರ ನಾಳೆ (ಮಾ.12) ರಾಜ್ಯಾದ್ಯಂತ ಬಿಡುಗಡೆಯಾಗೋಕೆ ಸಿದ್ಧವಾಗಿದೆ.

    ‘ನಾನು ‘ನರಗುಂದ ಬಂಡಾಯ’ ಒಪ್ಪಿಕೊಂಡಿದ್ದೇ, ಕಥೆಯಿಂದಾಗಿ. ಈ ಕಥೆಯನ್ನು ನಿರ್ದೇಶಕರು ನನಗೆ 15 ನಿಮಿಷದಲ್ಲಿ ಹೇಳಿದರು. ಅವರು ಹೇಳುತ್ತಿದ್ದಾಗ ಪ್ರತಿಯೊಂದು ದೃಶ್ಯವನ್ನು ನಾನು ಕಲ್ಪಿಸಿಕೊಂಡೆ. ಕಥೆ ಕೇಳಿದ ಮರುಕ್ಷಣ ಅನಿಸಿದ್ದು, ಇದೊಂದು ದೊಡ್ಡ ಹೀರೋ ಮಾಡುವ ಕಥೆ ಎಂದು. ಆದರೂ ಈ ಕಥೆ ನನಗೆ ಒಲಿದು ಬಂದಿತ್ತು. ಈ ಅವಕಾಶವನ್ನು ಬಿಡಬಾರದು ಎಂದು ಒಪ್ಪಿಕೊಂಡೆ. ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿ ಮತ್ತು ಹೆಮ್ಮೆಯಿದೆ’ಎನ್ನುತ್ತಾರೆ ರಕ್ಷ್.

    ಈ ಚಿತ್ರದಲ್ಲಿ ಈರಪ್ಪ ಕಡ್ಲಿಕೊಪ್ಪ ಎಂಬ ರೈತನ ಪಾತ್ರ ಮಾಡಿರುವ ರಕ್ಷ್, ‘ಈ ಸಿನಿಮಾದ ಶೂಟಿಂಗ್​ಗಾಗಿ ಬಹಳ ಶ್ರಮ ವಹಿಸಿದ್ದೇನೆ. ಈರಪ್ಪ ಕಡ್ಲಿಕೊಪ್ಪ ಪಾತ್ರಕ್ಕಾಗಿ ನಾನು ಪಟ್ಟ ಕಷ್ಟ, ಮಲಪ್ರಭಾ ಅಣೆಕಟ್ಟನ್ನು ಕಟ್ಟಿದಷ್ಟೇ ಇತ್ತು. ಆ ಪಾತ್ರದ ತೀವ್ರತೆ ಕೂಡಾ ಅಷ್ಟೇ ಇತ್ತು. ಈ ಸಿನಿಮಾಗಾಗಿ ಒಂದಷ್ಟು ಸಿನಿಮಾಗಳ ಆಫರ್​ಗಳನ್ನು ಬಿಟ್ಟಿದ್ದೇನೆ. ಅಷ್ಟೇ ಅಲ್ಲ, ಸೀರಿಯಲ್​ಗೆ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದೆ. ನಾನು ಏಳನೇ ವಯಸ್ಸಿನಲ್ಲಿದ್ದಾಗ ಹೀರೋ ಆಗಬೇಕು ಎಂದು ಕನಸು ಕಂಡವನು. ಇಂತಹ ಒಂದು ಪಾತ್ರದ ಮೂಲಕ ನಾಯಕನಾಗುತ್ತಿರುವುದು ಖುಷಿಯ ವಿಚಾರ. ಇಂತಹ ಒಂದು ಪಾತ್ರ ಮುಂದಿನ ದಿನಗಳಲ್ಲಿ ನಾನೇ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ರಕ್ಷ್. ‘ನರಗುಂದ ಬಂಡಾಯ’ ಚಿತ್ರವನ್ನು ನಾಗೇಂದ್ರ ಮಾಗಡಿ ನಿರ್ದೇಶನ ಮಾಡಿದ್ದು, ರಕ್ಷ್​ಗೆ ನಾಯಕಿಯಾಗಿ ಶುಭಾ ಪೂಂಜ ನಟಿಸಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ನಡೆದ ರೈತ ಹೋರಾಟದ ಕಥೆ ಇರುವ ಈ ಚಿತ್ರ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಕೊನೆಯ 25 ನಿಮಿಷಗಳು ಯಾರೊಬ್ಬರೂ ಮಿಸ್ ಮಾಡದಂತೆ ನೋಡಬೇಕು.

    | ರಕ್ಷ್ ನಟ

    ಜನರನ್ನು ಬೆಚ್ಚಿಬೀಳಿಸಿರುವ ಕೊರೊನಾ ವೈರಸ್​ ಟೈಟಲ್​ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ

    ಟಿಕ್​ಟಾಕ್​ ಮಾಡಿದ್ದಕ್ಕೆ ಜೀವನವೇ ಬದಲಾಯಿತು: ಅಮಾನತು ಆದರೂ ಸ್ಟಾರ್​ ಆದ ಪೊಲೀಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts