More

    ಬೆಳೆ ಪರಿಹಾರ ನೀಡಲು ಆಗ್ರಹಿಸಿ ಮನವಿ

    ನಿಡಗುಂದಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ನಷ್ಟವಾಗಿದ್ದು, ಶೀಘ್ರ ಸರ್ಕಾರ ಬೆಳೆ ಹಾನಿ ಪರಿಶೀಲಿಸಿ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಸೀಲ್ದಾರ್ ಸತೀಶ ಕೊಡಲಗಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಮುಂಗಾರು ಬೆಳೆಗಳಾದ ಉಳ್ಳಾಗಡ್ಡಿ, ತೊಗರಿ, ಮೆಕ್ಕೆಜೋಳ, ಸಜ್ಜಿ, ನವಣಿ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸಾಲ ಮಾಡಿ, ಗೊಬ್ಬರ, ಬೀಜ ತಂದು ಬಿತ್ತನೆ ಮಾಡಿದ್ದ ರೈತ ತೊಂದರೆಯಿಂದ ಸಾವು ಬದುಕಿನ ಮಧ್ಯೆ ನರಳಾಡುವಂತಾಗಿದೆ. ಆದ್ದರಿಂದ ಸರ್ಕಾರ ಶೀಘ್ರ ಬೆಳೆ ಹಾನಿ ಪರಿಶೀಲಿಸಿ ನಷ್ಟವಾದ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಒಂದು ವೇಳೆ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

    ವೆಂಕಟೇಶ ವಡ್ಡರ, ಮುತ್ತಪ್ಪ ದೇಸಾಯಿ, ಸುಭಾಸ ಚೋಪಡೆ, ಬಾಬಜಿ ಮುಲ್ಲಾ, ಸಾಬಣ್ಣ ಅಂಗಡಿ, ಮಲ್ಲನಗೌಡ ಬಿರಾದಾರ, ಶೇಖಪ್ಪ ಮಳೆಪ್ಪನವರ, ಅಡಿಯಪ್ಪ ಸಪೂರಿ, ಯಲ್ಲಪ್ಪ ಚಲವಾದಿ, ಸಿದ್ದಪ್ಪ ವಾಲಿಕಾರ, ಸಾಬಣ್ಣ ಮಾದರ, ಶಿವಪ್ಪ ಇಂಗಳೇಶ್ವರ, ಶಿವಪ್ಪ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts