More

    ಸಮಾಜದ ಅಭಿವೃದ್ಧಿಗೆ ಸಂಸ್ಥೆ ಕಾರ್ಯ ಅಪಾರ

    ನಿಡಗುಂದಿ: ಸಮಾಜ ಸೇವೆ ನಮ್ಮ ಉಸಿರು, ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ ಸದೃಢತೆಗೆ ಸಂಕಲ್ಪ ಹೊಂದಿ ನಿರಂತರ ಸೇವೆ ನೀಡುವಲ್ಲಿ ಜೊಲ್ಲೆ ಸಮೂಹ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಪುತ್ರ ಬಸವಪ್ರಭು ಜೊಲ್ಲೆ ಹೇಳಿದರು.

    ಪಟ್ಟಣದಲ್ಲಿ ಜ್ಯೋತಿ ವಿವಿಧೋದ್ದೇಶ್ವಗಳ ಸೌಹಾರ್ದ ಸಹಕಾರಿ ನಿ. ಯಕ್ಸಂಬಾದ 60ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
    ಮಲ್ಟಿಸ್ಟೇಟ್ ಮಾನ್ಯತೆ ಪಡೆದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಬೀರೇಶ್ವರ ಸಹಕಾರಿ ಸಂಸ್ಥೆ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಶಾಖೆಗಳನ್ನು ಹೊಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಜತೆಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕಾರ್ಯ ಮಾಡುತ್ತಿದೆ ಎಂದರು.

    ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಜೊಲ್ಲೆ ಸಮೂಹ ಸಂಸ್ಥೆಯ ಸೇವೆ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ನೆರೆ ರಾಜ್ಯಕ್ಕೂ ವಿಸ್ತರಣೆಯಾಗಿ ಬೆಳೆದಿದೆ. ಅವರ ನಿರಂತರ ಸಮಾಜ ಸೇವೆ ಕಳಕಳಿ ಮರೆಯಲು ಸಾಧ್ಯವಿಲ್ಲ. ರಾಜಕೀಯ ಜೀವನದಲ್ಲಿದ್ದರೂ ಸಮಾಜ ಸೇವೆ ಮರೆಯದೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೆ ಕಾರಣವಾಗಿದ್ದಾರೆ. ಜೊಲ್ಲೆ ಸಮೂಹ ಸಂಸ್ಥೆ ಸಹಕಾರಿ, ಉದ್ಯೋಗ ಕ್ಷೇತ್ರ ಸೇರಿ ವಿವಿಧ ರಂಗದಲ್ಲಿ ವಿಶೇಷ ಛಾಪೂ ಮೂಡಿಸಿದೆ ಎಂದರು. ಸ್ಥಳೀಯ ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿದರು. ಶಿವಾನಂದ ಅವಟಿ, ಬಸವರಾಜ ಕುಂಬಾರ, ಚಂದ್ರಕಾಂತ ಕೋತ, ಬಾಬುರಾವ್ ಮಾಳಿ, ಮುತ್ತು ಚಿಕ್ಕೊಂಡ, ಡಾ. ಸಂಗಮೇಶ ಗೂಗಿಹಾಳ, ಶಂಕರ ರೇವಡಿ, ಶಿವಾನಂದ ಮುಚ್ಚಂಡಿ, ಪ್ರಹ್ಲಾದ್ ಪತ್ತಾರ, ಮುದ್ದಪ್ಪ ಯಳ್ಳಿಗುತ್ತಿ, ಶೇಖರ ದೊಡಮನಿ, ರವಿ ಪವಾರ, ಮಹಾಂತೇಶ ಒಣರೊಟ್ಟಿ, ಎನ್.ಎ. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts