More

    ವೇಮನರು ಕಾವ್ಯದಿಂದಲೇ ಜಾತೀಯತೆ ಧಿಕ್ಕರಿಸಿದ ಕವಿ

    ನಿಡಗುಂದಿ: ಜನಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು- ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಅವರು, ಅಪೂರ್ವ ಸಮಾಜ ಸುಧಾರಕ ಎಂದು ತಹಸೀಲ್ದಾರ್ ಎ.ಡಿ.ಅಮರವಾಡಗಿ ಹೇಳಿದರು.

    ಪಟ್ಟಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ 612ನೇ ಜಯಂತಿ ಕಾರ್ಯಕ್ರಮದಲ್ಲಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ವೇಮನರ ಮಾತುಗಳು ವೇದಗಳೇ ಆಗಿವೆ. ನಮ್ಮ ಜನ ವೇಮನರ ಕುರಿತು ವೇದಾತೀತನು ವೇಮನು ಕಾಣಾ, ವೇಮನ ಮಾತದು ವೇದವು ಕಾಣಾ ಎಂದು ಹಾಡಿದ್ದಾರೆ. ವೇಮನರ ಪದ್ಯಗಳು ಕನ್ನಡ, ತಮಿಳು, ಮಲೆಯಾಳಿ, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿ ವೇಮನರ ಸಾಹಿತ್ಯ ಈ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿವೆ. ವಿಶ್ವ ಸಾಹಿತ್ಯಕ್ಕೂ ಭೂಷಣಪ್ರಾಯವಾಗಿದೆ. ವೇಮನರ ತತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು ಎಂದರು.

    ಎಂ.ಬಿ.ರಕರೆಡ್ಡಿ ಮಾತನಾಡಿ, ಶಾಂತಿ, ಸಮತೆ, ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ವೇಮನರ ಜಯಂತಿ ಆಚರಿಸಲಾಗಿದೆ. ಸಮಾಜ ಸುಧಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಮಹಾಮಹಿಮರಲ್ಲಿ ಮಹಾಯೋಗಿ ವೇಮನರು ಕೂಡ ಒಬ್ಬರು. ಸಮಾಜಕ್ಕಾಗಿ ಅವರು ಮಾಡಿದ ಶ್ರಮ ಎಂದಿಗೂ ಮರೆಯಬಾರದು ಎಂದರು.

    ಬಸವರಾಜ ಪಾಟೀಲ, ಭೀಮನಗೌಡ ಪಾಟೀಲ, ಈರಣ್ಣ ಬಿಸಿರೊಟ್ಟಿ, ನಿಂಗನಗೌಡ ಹಿರೇಗೌಡರ, ರವಿಪ್ರಸಾದ ರೆಡ್ಡಿ, ರಾಕೇಶಗೌಡ ಪಾಟೀಲ, ರಾಜು ಯಾಳಗಿ, ಸಂಗನಗೌಡ ಪಾಟೀಲ, ರವಿ ಕುಳಗೇರಿ, ಶಾಂತಗೌಡ ಬಿರಾದಾರ, ವೀರೇಶ ಅಡಕಿ ಇತರರಿದ್ದರು.

    ನಿಡಗುಂದಿಯ ತಹಸೀಲ್ದಾರ್ ಕಚೇರಿ, ಪಟ್ಟಣ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ವೇಮನರ ಭಾವಚಿತ್ರ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts