More

    ದಾದಿಯರ ಸೇವೆ ಶ್ಲಾಘನೀಯ

    ನಿಡಗುಂದಿ: ಮಾರಕ ಕರೊನಾ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕೆಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ ಗೋಟ್ಕಂಡ್ಕಿ ಹೇಳಿದರು.
    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಪ್ರತಿಯೊಬ್ಬ ರೋಗಿಗೆ ಇನ್ನೊಬ್ಬ ತಾಯಿಯಂತೆ ಸೇವೆ ಸಲ್ಲಿಸುವ ನರ್ಸ್‌ಗಳು ಧನ್ಯರು. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ವಿಶ್ವ ದಾದಿಯರ ದಿನದ ಅಂಗವಾಗಿ ಎಲ್ಲರ ಆರೋಗ್ಯ ಕಾಪಾಡುವ ಧ್ವನಿ ಎಂದು ನರ್ಸ್‌ಗಳ ಸೇವೆ ಗುರುತಿಸಿ ಘೋಷವಾಕ್ಯವನ್ನು ಹೊರಡಿಸಿದೆ. ಅವರಿವರೆನ್ನದೆ ಎಲ್ಲರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಔದಾರ್ಯ ದೊಡ್ಡದು ಎಂದರು.
    ಡಾ. ಪ್ರಕಾಶ ನಾಟೇಕಾರ ಮಾತನಾಡಿ, ಕರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಹಗಲು ರಾತ್ರಿ ಕಾರ್ಯ ನಿರ್ವಹಿಸುವ ದಾದಿಯರ ಸೇವೆ ಶ್ಲಾಘನೀಯ ಎಂದರು.
    ಗಿರೀಶ ಹೂಗಾರ, ಪ್ರಕಾಶ ಜಹಗೀರದಾರ, ಕಾಶೀಮ್ ಸಂಗಾಪುರ, ಕಂಠೆಪ್ಪ ಮುರನಾಳ, ಗಿರೀಶ ದೊಡ್ಡಿಹಾಳ, ಮಾಳೇಶ ಗುಜರಾಲ, ವಿಜಯ ಪಾಟೀಲ, ಶಶಿಕಲಾ ಹೊಳೆಯನ್ನವರ, ಆಶಾ ದೊಡಮನಿ, ಬಸವರಾಜ ಚಿಕ್ಕಬೇವನೂರ, ವಿಶ್ವನಾಥ ಹಾಲಿಹಾಳ, ಬಸವರಾಜ ಹೊಸಮನಿ, ಅನೀಲ ಗುಪ್ತಾ, ವೆಂಕಟೇಶ ಪವಾರ, ಈರಯ್ಯ ಮಠಪತಿ, ಸುಮಂಗಲ ಎತ್ತಿನ ಇತರರಿದ್ದರು.

    ದಾದಿಯರ ಸೇವೆ ಶ್ಲಾಘನೀಯ
    ದಾದಿಯರ ಸೇವೆ ಶ್ಲಾಘನೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts