More

    ಬಲಿದಾನ ಮಾಡಿದವರ ಆಶಯ ಈಡೇರಿಸೋಣ

    ನಿಡಗುಂದಿ: ಭಾರತ ದೇಶ ಸಾರ್ವಭೌಮ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ ಎಂದು ತಹಸೀಲ್ದಾರ್ ಎ.ಡಿ.ಅಮರವಾಡಿ ಹೇಳಿದರು.

    ಪಟ್ಟಣದ ಎಂಪಿಎಸ್ ಬಾಲಕರ ಶಾಲೆ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

    ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು, ಮನ, ಧನಗಳಿಂದ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರು, ಅಸಂಖ್ಯಾತ ಯೋಧರು ಹಾಗೂ ದೇಶಾಭಿಮಾನಿಗಳ ಆಶಯದಂತೆ ನಮ್ಮ ರಾಷ್ಟ್ರವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನದ ವಿಧಿವಿಧಾನಗಳ ಬಗ್ಗೆ ಗೌರವಿಸಬೇಕು. ದೇಶದ ಮತ್ತಷ್ಟು ಬಲಿಷ್ಠವಾಗಿಸಲು ಶ್ರಮಿಸಬೇಕು ಎಂದರು.

    ತಾಪಂ ಇಒ ವಿ.ಎಸ್.ಹಿರೇಮಠ, ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ, ತಾಪಂ ಎಡಿ ವೆಂಕಟೇಶ ವಂದಾಲ, ಹೆಸ್ಕಾಂ ಎಇಇ ಬಸವರಾಜ ಚಿತ್ತಾಪುರ ಹಾಗೂ ಪಪಂ ಸದಸ್ಯರು ಗಣ್ಯರು ಇದ್ದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆದವು. ವಿವಿಧ ಕ್ಷೇತ್ರದ ಸಾಧಕ ಮಕ್ಕಳನ್ನು ಪುರಸ್ಕರಿಸಲಾಯಿತು.

    ತಾಪಂ ಕಚೇರಿಯಲ್ಲಿ ಆಡಳಿತಾಧಿಕಾರಿ ಡಿ.ಬಸವರಾಜ, ತಹಸೀಲ್ದಾರ್ ಕಚೇರಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತಹಸೀಲ್ದಾರ್ ಎ.ಡಿ.ಅಮರವಾಡಿ, ಜಿವಿವಿಎಸ್ ಕಾಲೇಜಿನಲ್ಲಿ ಸಂಸ್ಥೆ ಚೇರ್ಮನ್ ಸಿದ್ದಣ್ಣ ನಾಗಠಾಣ ಧ್ವಜಾರೋಹಣ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts