More

    ಐಪಿಎಲ್ ಮುಗಿದ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ

    ನವದೆಹಲಿ: ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಿದ ಬೆನ್ನಲ್ಲೇ ಹಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗೆ ಸಜ್ಜಾಗುತ್ತಿದ್ದರೆ, ಇನ್ನು ಕೆಲ ಕ್ರಿಕೆಟಿಗರು ವೈಯಕ್ತಿಕ ಬದುಕಿನತ್ತ ಗಮನಹರಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ವೆಸ್ಟ್ ಇಂಡೀಸ್‌ನ ಎಡಗೈ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರಲ್ಲೊಬ್ಬರು. ದೀರ್ಘಕಾಲದ ಗೆಳತಿ ಅಲಿಸ್ಸಾ ಮಿಗುಯೆಲ್ ಜತೆಗೆ ಪೂರನ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಜೀವನದ ಹೊಸ ಇನಿಂಗ್ಸ್‌ಗೆ ಸಜ್ಜಾಗಿದ್ದಾರೆ.

    ಕಳೆದ 2 ತಿಂಗಳಿನಿಂದ ಅರಬ್ ರಾಷ್ಟ್ರದ ಬಯೋ-ಬಬಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜತೆಗೆ ನೆಲೆಸಿದ್ದ ನಿಕೋಲಸ್ ಪೂರನ್‌ಗೆ ಅಲ್ಲಿ ಗೆಳತಿ ಅಲಿಸ್ಸಾ ಮಿಗುಯೆಲ್ ಕೂಡ ಸಾಥ್ ನೀಡಿದ್ದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯದ ವೇಳೆ ಅಲಿಸ್ಸಾ ಮಿಗುಯೆಲ್ ಕ್ರೀಡಾಂಗಣದಲ್ಲೂ ಕಾಣಿಸಿಕೊಂಡಿದ್ದರು.

    ಐಪಿಎಲ್ ಮುಗಿದ ಬೆನ್ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ

    ಬ್ಯಾಟಿಂಗ್ ಜತೆಗೆ ಅದ್ಭುತ ಫೀಲ್ಡಿಂಗ್ ನಿರ್ವಹಣೆಯಿಂದಲೂ ಗಮನಸೆಳೆದಿದ್ದ ಟ್ರಿನಿಡಾಡ್ ಆಟಗಾರ ಪೂರನ್, ಅಲಿಸ್ಸಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ‘ದೇವರು ನಮಗೆ ಶ್ರೇಷ್ಠವಾದ ಆಶೀರ್ವಾದ ಮಾಡಿದ್ದಾರೆ. ನಾನು ಮತ್ತು ಅಲಿಸ್ಸಾ ಮಿಗುಯೆಲ್ ನಿಶ್ಚತಾರ್ಥ ಮಾಡಿಕೊಂಡಿದ್ದೇವೆ ಎಂದು ಪ್ರಕಟಿಸಲು ಸಂಭ್ರಮಿಸುತ್ತೇನೆ. ಮಿಗುಯೆಲ್ ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನು ನನಗೆ ಸಿಕ್ಕಿರುವೆ’ ಎಂದು ಪೂರನ್, ಅಲಿಸ್ಸಾಗೆ ಪ್ರೇಮ ನಿವೇದನೆ ಮಾಡಿಕೊಂಡಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

    ಪೂರನ್ ಪೋಸ್ಟ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಕೂಡ ಕಾಮೆಂಟ್ ಹಾಕಿದ್ದು, ‘ಅಭಿನಂದನೆಗಳು ನಿಕ್ಕಿ, ದೇವರು ನಿಮ್ಮಿಬ್ಬರಿಗೂ ಒಳಿತು ಮಾಡಲಿ’ ಎಂದು ಹಾರೈಸಿದ್ದಾರೆ.

    ಕಾಳಿಪೂಜೆಯಲ್ಲಿ ಪಾಲ್ಗೊಂಡ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts