More

    ಅಂಬಾನಿಗೆ ಬಾಂಬ್​ ಬೆದರಿಕೆ: ಎಸ್​ಯುವಿ ಕಾರಿನ ನಂಬರ್​ ಪ್ಲೇಟ್, ನಗದು ತುಂಬಿದ್ದ ಮರ್ಸಿಡೀಸ್​ ಕಾರು ಸೀಜ್​

    ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಮಂಗಳವಾರ ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆ ಪ್ರದೇಶದಲ್ಲಿ ಕಪ್ಪುಬಣ್ಣದ ಮರ್ಸಿಡೀಸ್​ ಕಾರನ್ನು ಸೀಜ್​ ಮಾಡಿದ್ದು, ಅದರಲ್ಲಿದ್ದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಅವರ ‘ಅಂಟಿಲಿಯಾ’ ನಿವಾಸದ ಹೊರಭಾಗದಲ್ಲಿ ಫೆಬ್ರವರಿ 25ರಂದು ಪತ್ತೆಯಾಗಿದ್ದ ಸ್ಫೋಟಕ ತುಂಬಿದ ಎಸ್​ಯುವಿ ಕಾರಿನ ಮೂಲ ನಂಬರ್​ ಪ್ಲೇಟ್​ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಎನ್​ಐಎ ಐಜಿ ಅನಿಲ್​ ಶುಕ್ಲಾ, ವಶಕ್ಕೆ ಪಡೆದಿರುವ ಮರ್ಸಿಡೀಸ್​ ಕಾರನ್ನು ಈಗಾಗಲೇ ಇದೇ ಪ್ರಕರಣದಲ್ಲಿ ಅಮಾನತ್ತುಗೊಂಡಿರುವ ಎನ್​ಕೌಂಟರ್​ ಸ್ಪೆಷಲಿಸ್ಟ್​, ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಬಳಸಿದ್ದರು. ಸದ್ಯ ಕಾರಿನ ನೋಂದಣಿ ಮಾಲೀಕ ಯಾರೆಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿರಿ: ಅಕ್ರಮ ಪಂಪ್‌ಸೆಟ್ ತೆರವಿಗೆ ಜಿಲ್ಲಾಡಳಿತಗಳ ಸಿದ್ಧತೆ, ಅಧಿಕಾರಿಗಳಿಗೆ ಡಿಸಿ ಸೂಚನೆ

    ಕಾರಿನಲ್ಲಿ 5 ಲಕ್ಷಕ್ಕೂ ಅಧಿಕ ನಗದು, ಕೆಲವು ಬಟ್ಟೆಗಳು, ಪೆಟ್ರೋಲ್​, ಡೀಸೆಲ್​ ಮತ್ತು ಒಂದು ಎಣಿಕೆ ಯಂತ್ರವನ್ನು ಸೀಜ್​ ಮಾಡಲಾಗಿದೆ. ಜಿಲೆಟಿನ್ ತುಂಡುಗಳಿಂದ ತುಂಬಿದ ಸ್ಕಾರ್ಪಿಯೋ ಕಾರಿನಲ್ಲಿದ್ದ ಮರ್ಸಿಡಿಸ್ ಕಾರನ್ನು ಹೋಲುವ ನಂಬರ್ ಪ್ಲೇಟ್ ಅನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಶುಕ್ಲಾ ತಿಳಿಸಿದರು.

    ಮರ್ಸಿಡೀಸ್​ ಕಾರನ್ನು ಮುಂಬೈ ಕ್ರಾಫೋರ್ಡ್​ ಮಾರುಕಟ್ಟೆ ಪ್ರದೇಶದ ಬಳಿಯಿರುವ ಕ್ರೈಂ ಬ್ರ್ಯಾಂಚ್​ ಆಫೀಸ್​ನ ಕಾರ್​​ ಪಾರ್ಕಿಂಗ್​ ಬಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಪಿಪಿಇ ಕಿಟ್​ ಅನ್ನು ಹೋಲುವ ಸಡಿಲವಾದ ಕುರ್ತಾ ಧರಿಸಿ ಕಾರಿನ ಹೊರಗೆ ನಿಂತಿದ್ದ ಸಚಿನ್​ ವಾಜೆ ಅವರನ್ನು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದೆ. ಕುರ್ತಾವನ್ನು ಕಾರಿನಲ್ಲಿದ್ದ ಇಂಧನದಿಂದ ಸುಟ್ಟುಹಾಕಿರುವ ಮಾಹಿತಿಯು ಸಹ ಮೂಲಗಳಿಂದ ತಿಳಿದುಬಂದಿದೆ.

    ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೊಬ್ಬರು ಸ್ಫೋಟಕ ತುಂಬಿದ ಎಸ್​ಯುವಿ ಅನ್ನು ಅಂಬಾನಿ ನಿವಾಸ ಅಂಟಿಲಿಯಾ ಬಳಿ ಬಿಟ್ಟಿದ್ದರಿಂದ, ಸಿಸಿಟಿವಿ ಫೂಟೇಜ್​ನಲ್ಲಿ ವಾಜೆ ಧರಿಸಿದ್ದ ಉಡುಪಿಗೂ ಸಾಮತ್ಯೆ ಇರುವುದರಿಂದ ಈ ಪ್ರಕರಣ ತುಂಬಾ ಮಹತ್ವ ಪಡೆದುಕೊಂಡಿದೆ.

    ಇದನ್ನೂ ಓದಿರಿ: ಪೊಲೀಸರಿಗೆ ದೂರು ಕೊಟ್ರು ಸಿ.ಡಿ. ಲೇಡಿಯ ಡ್ಯಾಡಿ; ಮಗಳನ್ನು ಯಾರೋ ಅಪಹರಿಸಿದ್ದಾರೆ, ದಯವಿಟ್ಟು ಪತ್ತೆ ಮಾಡಿ ರಕ್ಷಿಸಿ ಎಂದು ಮನವಿ

    ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ವಾಜೆ ಅವರನ್ನು ಬಂಧಿಸಿದೆ. ಮುಂಬೈ ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿದ್ದು, ಸಚಿನ್ ವಾಜೆ ಅವರನ್ನು ಎನ್‍ಐಎ ವಶಕ್ಕೆ ಪಡೆದು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಸಚಿನ್ ವಾಜೆ ಅವರನ್ನು ವಿಚಾರಣೆಗಾಗಿ ಮಾರ್ಚ್ 25ರ ವರೆಗೆ ಎನ್‍ಐಎ ವಶಕ್ಕೆ ಪಡೆದುಕೊಂಡಿದೆ. (ಏಜೆನ್ಸೀಸ್​)

    ಮುಕೇಶ್​ ಅಂಬಾನಿ ಮನೆ ಮುಂದೆ ಸ್ಫೋಟಕ: ಎನ್​ಕೌಂಟರ್​ ಸ್ಪೆಷಲಿಸ್ಟ್​ ವಾಜೆ ಸಸ್ಪೆಂಡ್​-ಯಾರೀ ಇನ್ಸ್​ಪೆಕ್ಟರ್​?

    ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ಪೊಲೀಸ್ ಅಧಿಕಾರಿ ಬಂಧನ

    ಕಾರ್​ನಲ್ಲಿ ಸ್ಪೋಟಕ: ಜೈಲಿಂದಲೇ ಅಂಬಾನಿಗೆ ಸ್ಕೆಚ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts