More

    ಕಾರ್​ನಲ್ಲಿ ಸ್ಪೋಟಕ: ಜೈಲಿಂದಲೇ ಅಂಬಾನಿಗೆ ಸ್ಕೆಚ್!

    ನವದೆಹಲಿ: ರಿಲಯನ್ಸ್ ಇಂಡಸ್ಟ್ರಿಸ್​ನ ಮುಖ್ಯಸ್ಥ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ಇದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಳಕೆಯಾಗಿದ್ದ ಟೆಲಿಗ್ರಾಮ್ ಆಪ್ ಸಂದೇಶವನ್ನು ತಿಹಾರ್ ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರನೊಬ್ಬನ ಮೊಬೈಲ್ ಮೂಲಕ ನಿರ್ವಹಿಸಲಾಗಿತ್ತು ಎಂಬ ಮಾಹಿತಿ ಲಭಿಸಿದ್ದು, ಈಗ ಅದನ್ನು ದೆಹಲಿ ಪೊಲೀಸರು ವಶಪಡಿಸಿದ್ದಾರೆ.

    ದೆಹಲಿ ವಿಶೇಷ ಪೊಲೀಸ್ ತಂಡ ತಿಹಾರ್ ಜೈಲಿನಲ್ಲಿ ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಉಗ್ರ ತಹ್ಸೀನ್ ಅಖ್ತರ್ ಬಳಿ ಮೊಬೈಲ್ ಪತ್ತೆಯಾಗಿದೆ. ಟೆಲಿಗ್ರಾಮ್ ಆಪ್​ನಲ್ಲಿ ಖಾತೆ ತೆರೆಯಲು ಈ ಮೊಬೈಲ್​ನ ವರ್ಚುವಲ್ ಸಂಖ್ಯೆಯನ್ನು ಬಳಸಲಾಗಿದೆ.

    ಟೆಲಿಗ್ರಾಮ್ ಖಾತೆಯಲ್ಲಿನ ಮೆಸೇಜ್​ಗಳಿಂದ ಮುಕೇಶ್ ನಿವಾಸದ ಬಳಿ ಸ್ಪೋಟಕವಿದ್ದ ಕಾರನ್ನು ಪಾರ್ಕ್ ಮಾಡುವ ವಿವರಗಳು ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ತಿಹಾರ್ ಜೈಲಿನಲ್ಲಿ ಇನ್ನೊಂದು ಮೊಬೈಲ್ ಸಂಖ್ಯೆ ಬಳಕೆ ಆಗುತ್ತಿತ್ತು. ಆದರೆ, ಇದು ಕಳೆದ ಸೆಪ್ಟೆಂಬರ್​ನಿಂದ ಅಮಾನತಿನಲ್ಲಿ ಇದೆ. ಈ ಸಂಖ್ಯೆ ಮತ್ತು ಟೆಲಿಗ್ರಾಮ್ ಆಪ್​ನಲ್ಲಿ ಖಾತೆ ತೆರೆಯಲು ಬಳಕೆಯಾದ ಸಂಖ್ಯೆಯ ಸಿಮ್ಳನ್ನು ನಕಲಿ ಗುರುತಿನ ಚೀಟಿ ಸಲ್ಲಿಸಿ ಪಡೆದಿದ್ದಾರೆ ಎನ್ನಲಾಗಿದೆ.

    ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮುಖಕ್ಕೆ ಹ್ಯಾಂಡ್​ ಸ್ಯಾನಿಟೈಸರ್ ಸಿಂಪಡಿಸಿದ ಪ್ರಧಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts