More

    ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮುಖಕ್ಕೆ ಹ್ಯಾಂಡ್​ ಸ್ಯಾನಿಟೈಸರ್ ಸಿಂಪಡಿಸಿದ ಪ್ರಧಾನಿ!

    ಬ್ಯಾಂಕಾಕ್: ಪತ್ರಕರ್ತರು ಪ್ರಶ್ನೆ ಕೇಳಿದಾಗ ರಾಜಕಾರಣಿಗಳು ಅಥವಾ ಉನ್ನತ ಅಧಿಕಾರದಲ್ಲಿರುವವರು ಇರಿಸು ಮುರಿಸಿಗೆ ಒಳಗಾಗುವುದು ಸಾಮಾನ್ಯ. ಇರಿಸು ಮುರಿಸಿಗೆ ಒಳಗಾದವರು ಹೇಗೋ ತಮ್ಮ ಮಾತಿನಿಂದ ತೇಪೆ ಹಚ್ಚುತ್ತಾರೆ.

    ಆದರೆ, ಇನ್ನೂ ಕೆಲವು ಜಾಗತಿಕ ನಾಯಕರು ಪತ್ರಕರ್ತರೆದುರು ದರ್ಪ ಮೆರೆಯುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರನ್ನು ಹೊರಗೆ ಕಳಿಸುತ್ತಾರೆ. ಆದರೆ, ಇದೇ ವಿಷಯವಾಗಿ ಥಾಯ್​ಲ್ಯಾಂಡ್​ ಪ್ರಧಾನಿ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ನಡೆದುಕೊಂಡಿದ್ದು ಜಾಗತಿಕವಾಗಿ ವೈರಲ್ ಆಗಿದೆ.

    ಇದನ್ನೂ ಓದಿ: ಕೆಐಎನಲ್ಲಿ ದೇಶದ ಮೊದಲ ಸರಕು ಸಾಗಣೆ ಟರ್ಮಿನಲ್: 2 ಲಕ್ಷ ಚದರ ಅಡಿ ವಿಸ್ತೀರ್ಣ; ಸಾಗಣೆ ಸಾಮರ್ಥ್ಯ 7.2 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಳ

    ಪತ್ರಿಕಾಗೊಷ್ಟಿ ನಡೆಯುವಾಗ ಪತ್ರಕರ್ತರ ಪ್ರಶ್ನೆಗೆ ಕಸಿವಿಸಿಗೊಂಡ ಥಾಯ್​ಲ್ಯಾಂಡ್ ಪ್ರಧಾನಿ ಪ್ರಯುತ್ ಚಾನ್ ಓಚಾ ಏಕಾಏಕಿ ಹ್ಯಾಂಡ್​ ಸ್ಯಾನಿಟೈಸರ್​ ತೆಗೆದುಕೊಂಡು ಪತ್ರಕರ್ತರ ಮುಖಕ್ಕೆ ಸಿಂಪಡಣೆ ಮಾಡಿದ್ದಾರೆ. ನಿಮ್ಮ ಪ್ರಶ್ನೆಗಳಲ್ಲಿ ಕೆಟ್ಟ ವೈರಸ್ ಇದೆ. ಮೊದಲು ಅದನ್ನು ಮಟ್ಟ ಹಾಕಬೇಕು ಎಂದು ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಇದರಿಂದ ಅವಾಕ್ಕಾದ ಪತ್ರಕರ್ತರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

    ಪ್ರಧಾನಿ ಪ್ರಯುತ್ ಚಾನ್ ಸಚಿವ ಸಂಪುಟದ ಮೂವರು ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಿಸಲಾಗದೇ ಚಾನ್ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. 2012 ರಿಂದ ಚಾನ್ ಥಾಯ್​ಲ್ಯಾಂಡ್ ಪ್ರಧಾನಿಯಾಗಿದ್ದಾರೆ. ವಿಡಿಯೋ ವೈರಲ್ ಆಗಿದೆ. (ಏಜೇನ್ಸಿಸ್)

    ಪಾಸ್​​ವರ್ಡ್​ ಶೇರಿಂಗ್: ಮಹತ್ವದ ಕ್ರಮಕ್ಕೆ ಮುಂದಾದ ನೆಟ್​ಪ್ಲಿಕ್ಸ್​

    5ನೇ ವಯಸ್ಸಿಗೇ ಲೈಂಗಿಕ ಕಿರುಕುಳ, 9ಕ್ಕೆ ರೇಪ್​ಗೆ ಒಳಗಾಗಿದ್ದರಂತೆ ಸಲ್ಮಾನ್​ ಖಾನ್​ರ ಎಕ್ಸ್​ ಗರ್ಲ್​ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts