More

    ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ಪೊಲೀಸ್ ಅಧಿಕಾರಿ ಬಂಧನ

    ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಕಾರ್ ಒಂದರಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್​​ಐಎ ಇಂದು ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಅವರನ್ನು ಬಂಧಿಸಿದೆ.

    ಫೆ 28 ರಂದು ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದೆದುರು ಸ್ಕಾರ್ಪಿಯೋ ಒಂದರಲ್ಲಿ ಸ್ಪೋಟಕ ಮತ್ತು ಬೆದರಿಕೆಗಳು ಪತ್ತೆಯಾಗಿದ್ದವು. ಘಟನೆಯಲ್ಲಿ ಕಾಣಿಸಿಕೊಂಡ ಸ್ಕಾರ್ಪಿಯೋ ಕಾರ್​ ನನ್ನದೆಂದು ಮನ್​ಸುಖ್ ಹಿರೇನ್ ಎನ್ನುವ ದೂರು ದಾಖಲಿಸಿ ಒಂದು ದಿನದ ಒಳಗೆ ಮೃತಪಟ್ಟಿದ್ದ.

    ಇದನ್ನೂ ಓದಿ: ಯಾದಗಿರಿ ಜಿಲ್ಲೆ ಮೂಲದ ವಿದ್ಯಾರ್ಥಿ ಮೈಸೂರಿನಲ್ಲಿ ನೇಣಿಗೆ ಶರಣು

    ಮನಸುಖ್ ಹಿರೇನ್ ನಿಗೂಢ ಸಾವಿನ ದಿನ ಸಚಿನ್ ವಾಜೆ ಅವನ ಜೊತೆಗಿದ್ದರು ಎಂದು ತಿಳಿದು ಬಂದಿದ್ದರಿಂದ ಹಾಗೂ ಹಿರೇನ್ ಪತ್ನಿ ವಾಜೆ ಮೇಲೆ ಆರೋಪ ಮಾಡಿದ್ದರಿಂದ ಎನ್​ಐಎ ವಾಜೆ ಅವರನ್ನು ಶನಿವಾರ ಸತತ 12 ಗಂಟೆ ವಿಚಾರಣೆ ನಡೆಸಿ ಇಂದು ಬೆಳಿಗ್ಗೆ ಬಂಧಿಸಿದೆ.

    ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ವಾಜೆ ಮಧ್ಯಂತರ ಜಾಮೀನು ನೀಡುವಂತೆ ಹಾಗೂ ಮಾರ್ಚ್​ 19 ರಂದು ನಡೆಯುವ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ವಜಾ ಮಾಡಿದೆ. ವಿರೋಧ ಪಕ್ಷವಾದ ಬಿಜೆಪಿ ವಾಜೆ ಬಂಧನಕ್ಕೆ ಒತ್ತಾಯಿಸಿತ್ತು.

    ಮದುವೆಯಾದ ರಾತ್ರಿ ಸಿಂಹದ ಮರಿ ಬಾಡಿಗೆಗೆ ಪಡೆದರು- ನಿದ್ದೆ ಮಾತ್ರೆ ನೀಡಿದರು? ವಿಡಿಯೋ ನೋಡಿ ನೆಟ್ಟಿಗರು ಗರಂ

    ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts