More

    ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಒಡೆತನದ 12 ಜಾಗಗಳಲ್ಲಿ ಎನ್​ಐಎ ದಾಳಿ: ಸಹಚರ ಸಲೀಂ ಖುರೇಶಿ ಬಂಧನ

    ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮುಂಬೈಯಲ್ಲಿರುವ ಆಸ್ತಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ, ದಾವೂದ್​ ಕಂಪನಿ ಮೇಲ್ವಿಚಾರಕ ಸಲೀಂ ಖುರೇಶಿ ಎಂಬುವವನನ್ನು ಬಂಧಿಸಿದೆ.

    ಮುಂಬೈನ 12ಕ್ಕೂ ಹೆಚ್ಚು ಸ್ಥಳದಲ್ಲಿ ಎನ್​ಐಎ ಭಾನುವಾರ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ದಾವೂದ್ ಇಬ್ರಾಹಿಂ ಒಡೆತನದ ಡಿ ಕಂಪನಿ ಜತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್​ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರದ ಸಚಿವ ನವಾಬ್​ ಮಲ್ಲಿಕ್​ ಅವರನ್ನು ಫೆಬ್ರವರಿ 23ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

    ಆ ವೇಳೆ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. 1993ರ ಮುಂಬೈ ಸ್ಫೋಟದ ಮಾಸ್ಟರ್​ ಮೈಂಡ್​ ದಾವೂದ್ ಇಬ್ರಾಹಿಂ, ಆತನ ಸಹೋದರಿ ಹಸೀನಾ ಪಾರ್ಕರ್​ ಒಡೆತನದ ಆಸ್ತಿಯ ಮೇಲೂ ದಾಳಿ ನಡೆಸಿತ್ತು. ಮತ್ತೊಬ್ಬ ಭೂಗತ ಪಾತಕಿ ಛೋಟಾ ಶಕೀತ್​ ಹತ್ತಿರದ ಸಂಬಂಧಿ ಇಕ್ಬಾಲ್​ ಕಸ್ಕರ್​ನನ್ನು ಇದೇ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಸದ್ಯ ಈತ ಜೈಲಿನಲ್ಲಿದ್ದಾನೆ.

    ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts